ಗದಗ:ರಾಜ್ಯ, ಕೇಂದ್ರ ಸರ್ಕಾರಗಳ ಖಜಾನೆ ಖಾಲಿಯಾಗಿವೆ. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ತೆರಿಗೆ ಹಣ ನೀಡಿಲ್ಲ. ನರೇಗಾ ಹಣವನ್ನೂ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಸಿಂಗಟಾಲೂರ ಗ್ರಾಮದಲ್ಲಿ ಸರ್ಕಾರಗಳ ವಿರುದ್ಧ ಕಿಡಿ ಕಾರಿದ ಮಾಜಿ ಸಿಎಂ, ಕೇಂದ್ರದಲ್ಲೇ ಹಣ ಇಲ್ಲ. ಅಂದಮೇಲೆ ರಾಜ್ಯಕ್ಕೆ ಹಣ ನೀಡಿಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೆದ್ದರಂತೆ ಮಾತನಾಡ್ತಾರೆ. ಅದಕ್ಕೆ ನಾನೇನು ಹೇಳಲಿ. ಹಣವೇ ಇಲ್ಲಾಂದ್ರೆ ಬಜೆಟ್​ನಲ್ಲಿ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ತೆರಿಗೆ ವಸೂಲಿಯಲ್ಲಿ 2 ಲಕ್ಷ ಕೋಟಿ ಕಡಿಮೆ ಆಗಿದೆ. ಖಜಾನೆ ಖಾಲಿಯಾಗಿದೆ ಎಂದರೆ, ಇವರು ತೆರಿಗೆ ತೆರಿಗೆ ಹಣ ವಸೂಲಿ ಮಾಡಿಲ್ಲ. ಹೀಗಾಗಿ ಖಜಾನೆ ಖಾಲಿಯಾಗಿದೆ ಎಂದರು.
ಸೋತವರಿಗೇಕೆ ಮಂತ್ರಿ ಪದವಿ:ಹೊಸ ಶಾಸಕರಿಗೆ ಸಚಿವ ಸ್ಥಾನ ಕೊಟ್ರೆ ಒಳ್ಳೆಯದು ಎಂದು ಅಭಿಪ್ರಾಯ ಪಟ್ಟ ಸಿದ್ದರಾಮಯ್ಯ, ಲೂಟಿ ಹೊಡೆಯೋದು ತಪ್ಪುತ್ತೆ ಎಂದು ಪರೋಕ್ಷವಾಗಿ ಈಗಿನ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಸೋತವರಿಗೆ ಯಾಕೇ ಸಚಿವ ಸ್ಥಾನ ಕೊಡ್ತಾರೆ. ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಮಾಡ್ತಾರಾ ಎನ್ನುವ ಮೂಲಕ ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ವಿರುದ್ಧ ಕಿಡಿ ಕಾರಿದರು.
ಹೊರಗಡೆ ಪಕ್ಷದಿಂದ ಬಂದವರು ಅವರು. ಕಾಂಗ್ರೆಸ್, ಜೆಡಿಎಸ್​ಗೆ ದ್ರೋಹ ಮಾಡಿ ಬಂದವರು. ಅವರಿಗೇಕೆ ಮಂತ್ರಿ ಮಾಡ್ತಾರೆ. ಸೋತವರು ಇಬ್ಬರು ಅನರ್ಹರರು ಎಂದು ಕಿಡಿ ಕಾರಿದರು.
ಸಂಘಟನೆಗೆ ಹಣ ಎಲ್ಲಿಂದ ಬರುತ್ತೆ?:ಗಲಭೆ ನಡೆಸಲು ಪಿಎಫ್​ಐ ಸಂಘಟನೆಗೆ ಹಣ ಸಂದಾಯ ವಿಚಾರವೊಂದು ಸುಳ್ಳು ಆರೋಪ. ಸಂಘಟನೆಗಳಿಗೆ ಹೋರಾಟ ಮಾಡಲು ಎಲ್ಲಿಂದ ಹಣ ಬರುತ್ತದೆ? ಈ ಕುರಿತು ಪಿಎಫ್​ಐ ಸಂಘಟನೆಯವರನ್ನೇ ಕೇಳಿ. ನನಗೂ ಪಿಎಫ್​ಐ ಏನು ಸಂಬಂಧ ಎಂದು ಪ್ರಸ್ನಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
