| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದ ಜಾನುವಾರು ಸಂಪತ್ತನ್ನು ಕಾಪಾಡುವ ಮಹತ್ವಾಕಾಂಕ್ಷೆಯಿಂದ ಗೋಸೇವಾ ಆಯೋಗದ ಮರುಸ್ಥಾಪನೆಗೆ ಸಿದ್ಧತೆ ಆರಂಭಿಸಿರುವ ಸರ್ಕಾರ, ಆಯೋಗದ ಮೂಲಕವೇ ಗೋಮೂತ್ರ, ಸಗಣಿ, ಪಂಚಗವ್ಯದಂತಹ ಉತ್ಪನ್ನಗಳು ಹಾಗೂ ಉಪ ಉತ್ಪನ್ನಗಳು ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಲು ನಿರ್ಧರಿಸಿದೆ.
2012ರಲ್ಲಿ ಅಂದಿನ ಬಿಜೆಪಿ ಸರ್ಕಾರ ಗೋಸೇವಾ ಆಯೋಗವನ್ನು ಅಸ್ತಿತ್ವಕ್ಕೆ ತಂದಿತ್ತು. ಆಯೋಗಕ್ಕೆ 2 ಕೋಟಿ ರೂ. ನೆರವಿನ ಜತೆಗೆ ಕಚೇರಿಯನ್ನೂ ಒದಗಿಸಲಾಗಿತ್ತು. ಸದಸ್ಯರು ನೇಮಕವಾಗಿ ಕಾರ್ಯಾರಂಭ ಸಹ ಮಾಡಿದ್ದರು. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆಯೋಗವನ್ನು ರದ್ದುಮಾಡಿತ್ತು.
ಅಧಿವೇಶನದಲ್ಲಿ ವಿಧೇಯಕ:ಸೆಪ್ಟೆಂಬರ್​ನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕದ ಜತೆಗೆ ಗೋಸೇವಾ ಆಯೋಗ ವಿಧೇಯಕವನ್ನೂ ಮಂಡಿಸಿ ಒಪ್ಪಿಗೆ ಪಡೆದು ತಕ್ಷಣ ಜಾರಿಗೆ ತರಲು ತೀರ್ವನಿಸಲಾಗಿದೆ. ರಾಜ್ಯದಲ್ಲಿ ಪ್ರಾಣಿ ಕಲ್ಯಾಣ ಮಂಡಳಿ ಇರುವುದರಿಂದ ಹೊಸ ಆಯೋಗದ ಅಗತ್ಯವಿಲ್ಲವೆಂಬುದು ಹಿಂದಿನ ಸರ್ಕಾರದ ಅಭಿಪ್ರಾಯವಾಗಿತ್ತು. ಆದರೆ ಗೋಸೇವಾ ಆಯೋಗದ ಕಾರ್ಯ ನಿರ್ವಹಣೆ ವಿಭಿನ್ನವಾಗಿರುವುದರಿಂದ ಮರುಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
ಕೇಂದ್ರಕ್ಕೆ ಶಿಫಾರಸು:2002ರಲ್ಲಿ ನ್ಯಾಯಮೂರ್ತಿ ಗುಮಾಸ್​ವುಲ್ ಲೋಧ್ರಾ ಅವರು ನೀಡಿದ ವರದಿಯ ಆಧಾರದಲ್ಲಿ ರಚನೆಯಾದ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಸಮಿತಿ 50 ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೋಸೇವಾ ಆಯೋಗಗಳನ್ನು ರಚನೆ ಮಾಡಬೇಕು ಎಂಬುದು ವರದಿಯ ಪ್ರಮುಖಾಂಶಗಳಲ್ಲಿ ಒಂದು. ಕೇಂದ್ರ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಕಾಮಧೇನು ಆಯೋಗವನ್ನು ರಚಿಸಿದೆ. ಗೋ ಉತ್ಪನ್ನಗಳನ್ನು ಬೇರೆ ಯಾವ ಯಾವ ಉದ್ದೇಶಕ್ಕೆ ಬಳಕೆ ಮಾಡಬಹುದೆಂಬುದನ್ನು ಸಂಶೋಧಿಸುವಂತೆ ಕೇಂದ್ರ ಸರ್ಕಾರ ಆಯೋಗಕ್ಕೆ ಸೂಚನೆಯನ್ನೂ ನೀಡಿರುವುದು ಗಮನಾರ್ಹ.
ಯಾವ ರಾಜ್ಯದಲ್ಲಿ ಇದೆ
ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ, ಗುಜರಾತ್, ಉತ್ತರಾಖಂಡ, ಪಂಜಾಬ್, ಛತ್ತೀಸ್​ಗಢಗಳಲ್ಲಿ ಗೋಸೇವಾ ಆಯೋಗಗಳಿವೆ.
ಮೌಲ್ಯವರ್ಧನೆ ಆಶಯ
ಭವಿಷ್ಯದಲ್ಲಿ ಗೋ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವೂ ಸರ್ಕಾರಕ್ಕಿದೆ. ಅನೇಕ ಸಂಘ ಸಂಸ್ಥೆಗಳು ಗೋ ಉತ್ಪನ್ನಗಳ ಮೌಲ್ಯವರ್ಧನೆ ಮಾಡುತ್ತಿದ್ದರೂ ಅಗತ್ಯ ಪ್ರಮಾಣದಲ್ಲಿ ಸಿಗುತ್ತಿಲ್ಲ.
ಯಾವುದೆಲ್ಲ ಉತ್ಪನ್ನಗಳಿಗೆ ಬಳಕೆ?
ಕೆಲ ಸಂಘ ಸಂಸ್ಥೆಗಳು ಗೋ ಉತ್ಪನ್ನಗಳನ್ನು ಪೇಸ್ಟ್, ಸೋಪು, ಶಾಂಪು, ಸೊಳ್ಳೆ ನಿಯಂತ್ರಣ ಔಷಧಗಳು, ಸೌಂದರ್ಯವರ್ಧಕಗಳಿಗೆ ಬಳಸುತ್ತಿವೆ. ಆಕಳ ಕಿವಿ ಮತ್ತು ಬಾಯಲ್ಲಿ ಉತ್ಪತ್ತಿಯಾಗುವ ಗ್ರಂಥಿ ಆರೋಗ್ಯವರ್ಧಕ ಎಂಬ ಅಭಿಪ್ರಾಯ ಇದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಯಾಗಬೇಕಿದೆ. ಗೋಶಾಲೆಯ ಮಣ್ಣನ್ನು ಚರ್ಮರೋಗ ನಿಯಂತ್ರಣಕ್ಕೆ ಬಳಸುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಏನಿದು ಆಯೋಗ?
ರಾಜ್ಯದಲ್ಲಿ ಸುಮಾರು 105 ಲಕ್ಷ ಜಾನುವಾರುಗಳಿವೆ. ಅವುಗಳ ರಕ್ಷಣೆ, ತಳಿಗಳ ಸಂವರ್ಧನೆ, ಗೋಶಾಲೆಗಳಿಗೆ ಆರ್ಥಿಕ ಮತ್ತಿತರ ನೆರವು, ಅವುಗಳ ಮೂಲಕ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ, ಗೋಹತ್ಯೆ ನಿಷೇಧ ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ನಿಗಾ- ಈ ಮುಂತಾದವು ಆಯೋಗದ ಕಾರ್ಯಗಳಾಗಿರುತ್ತದೆ.
ಗೋಶಾಲೆ ಮೂಲಕ ಮಾರಾಟ
ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಗೋಶಾಲೆಗಳನ್ನು ಅಭಿವೃದ್ಧಿಪಡಿಸುವುದು, ಅದಕ್ಕಾಗಿ ಆಯೋಗದ ಮೂಲಕ ಧನಸಹಾಯ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಅಲ್ಲಿಂದಲೇ ಗೋಮೂತ್ರ, ಸಗಣಿ, ಪಂಚಗವ್ಯ, ಗೋಮಯ, ಗೋಶಾಲೆಯ ಮಣ್ಣು, ಗೋವುಗಳ ಕಿವಿ ಮತ್ತು ಬಾಯಲ್ಲಿ ಉತ್ಪತ್ತಿಯಾಗುವ ಗ್ರಂಥಿಯನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ವ್ಯವಸ್ಥೆ ರೂಪಿಸಲಾಗುತ್ತದೆ.
ಆಯೋಗದ ಕರ್ತವ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − four =
Remember me
