ಬೆಂಗಳೂರು:ಕರೊನಾ ಸಂಕಷ್ಟದ ಸಂದರ್ಭದಲ್ಲೇ ರಾಜ್ಯದ ಅನ್ನದಾತರಿಗೊಂದು ಸಿಹಿ ಸುದ್ದಿ ಲಭ್ಯವಾಗಿದೆ. ತಮ್ಮ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಸೌಲಭ್ಯ ಸಿಗದಿದ್ದಲ್ಲಿ ರೈತರು ಕೃಷಿಯಿಂದಲೇ ಹಿಮ್ಮುಖರಾಗಬಹುದೆಂಬ ಆತಂಕವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಮುಂದಿನ ವರ್ಷ ತಾಲೂಕಿಗೊಂದು ಜನತಾ ಬಜಾರ್ ರೂಪಿಸಿ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಈ ವರ್ಷ ಪ್ರಮುಖ ಕೃಷಿ ಉತ್ಪನ್ನಗಳ ಪೈಕಿ ಬಹುಪಾಲು ಇನ್ನೂ ಮಾರುಕಟ್ಟೆಗೆ ಬಾರದಿರುವುದು ಆತಂಕ ಹೆಚ್ಚಿಸಿದೆ. ಹೀಗಾಗಿ ಈ ವರ್ಷದ ಮಟ್ಟಿಗೆ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ದೊಡ್ಡ ಜಾಗದಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮುಂದೆ ಆಂಧ್ರಪ್ರದೇಶ ಮಾದರಿಯಲ್ಲಿ ಜನತಾ ಬಜಾರ್​ಗಳನ್ನು ಸ್ಥಾಪಿಸಲಿದೆ. ಸದ್ಯ ಕರೊನಾದಿಂದಾಗಿ ಕೃಷಿ ಉತ್ಪನ್ನಗಳ ಸಾಗಾಟಕ್ಕೂ ತೊಂದರೆಯಾಗಿದೆ.
ಪರಿಣಾಮ ವ್ಯವಸಾಯದ ಬಗ್ಗೆಯೇ ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ರೈತರು ತಲುಪಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಕರೊನಾದಿಂದ ಆಗಿರುವ ಸಮಸ್ಯೆಗಿಂತ ನೂರು ಪಟ್ಟು ಹೆಚ್ಚಿನ ತೊಂದರೆ ಆಗಬಹುದೆಂಬುದು ತಜ್ಞರ ಅಭಿಪ್ರಾಯ.
ಎಷ್ಟು ಉತ್ಪನ್ನ ರೈತರಲ್ಲಿದೆ?
ಪ್ರತಿ ವರ್ಷ ಜನವರಿಯಿಂದ ಏಪ್ರಿಲ್​ವರೆಗೆ ಎಪಿಎಂಸಿ ಮೂಲಕ ಮಾರಾಟವಾಗುವ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಲ್ಲಿ ಸರಾಸರಿ ಶೇ. 70 ರೈತರಲ್ಲೇ ಉಳಿದಿದೆ. ತೊಗರಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇ.77 ಮಾರುಕಟ್ಟೆಗೆ ಬಂದಿದೆ. ಬಹಳಷ್ಟು ಬೆಳೆಗಳನ್ನು ರೈತರು ಹೊಲದಲ್ಲಿಯೇ ನಾಶ ಮಾಡುತ್ತಿದ್ದಾರೆ. ಕಳೆದ ವರ್ಷ ಜನವರಿಯಿಂದ ಏಪ್ರಿಲ್ 2ನೇ ವಾರದ ಅವಧಿಯಲ್ಲಿ 27 ಲಕ್ಷ ಟನ್ ಭತ್ತ ಮಾರುಕಟ್ಟೆಗೆ ಬಂದಿತ್ತು. ಈ ವರ್ಷ ಕೇವಲ 8 ಲಕ್ಷ ಟನ್ ಮಾತ್ರ ಬಂದಿದೆ. ಅದೇ ರೀತಿ ರಾಗಿ 90 ಸಾವಿರ ಕ್ವಿಂಟಾಲ್ ಬಂದಿದ್ದರೆ, ಈ ವರ್ಷ ಶೇ.24 ಮಾತ್ರ ಬಂದಿದೆ ಎಂಬುದು ಒಂದು ಅಂಕಿಅಂಶ.
ಆಂಧ್ರದಲ್ಲಿ ಏನಾಗಿದೆ?
ಆಂಧ್ರಪ್ರದೇಶದಲ್ಲಿ ರೈತರ ಅನುಕೂಲಕ್ಕಾಗಿ ಕೃಷಿ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಗಳು ಜಂಟಿಯಾಗಿ 22 ಸಾವಿರ ಜನತಾ ಬಜಾರ್​ಗಳನ್ನು ತೆರೆಯಲು ಮುಂದಾಗಿವೆ. ರೈತರೇ ಅಲ್ಲಿ ಮಾರಾಟಗಾರರು. ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಶುಲ್ಕ ಕಟ್ಟಿ ಮಾರಾಟ ಮಾಡುವ ವ್ಯವಸ್ಥೆ ಇರುತ್ತದೆ. ಹಳ್ಳಿ, ಪಟ್ಟಣ, ನಗರ ಪ್ರದೇಶಗಳಲ್ಲೂ ಜನತಾ ಬಜಾರ್ ತಲೆ ಎತ್ತಲಿವೆ.
ರಾಜ್ಯದಲ್ಲಿ ಏನಿದೆ ಚಿಂತನೆ?
ಜನತಾ ಬಜಾರ್​ಗಳನ್ನು ತಕ್ಷಣ ಆರಂಭಿಸಲು ಸಾಧ್ಯವಿಲ್ಲ ವಾದ್ದರಿಂದ ಸದ್ಯದ ಮಟ್ಟಿಗೆ ವಿಶಾಲ ಮೈದಾನಗಳನ್ನು ನೋಡಿ ಮಾರಾಟಕ್ಕೆ ವ್ಯವಸ್ಥೆ ಮಾಡುವುದು, ರೈತರಿಗೆ ಉತ್ಪನ್ನಗಳ ಸಾಗಾಟಕ್ಕೆ ಅನುಕೂಲ ಕಲ್ಪಿಸುವುದು. ಮುಂದಿನ ವರ್ಷ ಆಂಧ್ರಪ್ರದೇಶದಲ್ಲಿ ಜನತಾ ಬಜಾರ್​ಗಳನ್ನು ಅಧ್ಯಯನ ಮಾಡಿದ ಬಳಿಕ ರಾಜ್ಯದಲ್ಲೂ ಪ್ರಾರಂಭ ಮಾಡಬೇಕೆಂಬುದು ಸರ್ಕಾರದ ಆಲೋಚನೆಯಾಗಿದೆ.
ತಜ್ಞರ ಸಲಹೆ
ಬೀಳು ಭೂಮಿ ಹೆಚ್ಚಳ
ರಾಜ್ಯದಲ್ಲಿ ಸದ್ಯ ಶೇ.21 ಭೂಮಿ ಬೀಳು ಬಿದ್ದಿದೆ. ರೈತರು ಆಸಕ್ತಿ ಕಳೆದುಕೊಂಡರೆ ಈ ಪ್ರಮಾಣ ಶೇ. 50ಕ್ಕೆ ಆಗಬಹುದು. ಆ ರೀತಿಯಾದರೆ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೃಷಿ ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.
| ರುದ್ರಣ್ಣ ಹರ್ತಿಕೋಟೆ
ಕರೊನಾ ಹಾವಳಿ ಹಿನ್ನೆಲೆಯಲ್ಲಿ ಪ್ರತ್ಯೇಕ ಬಜೆಟ್ ಮಂಡನೆ ಮಾಡುತ್ತದೆಯೇ ಕೇಂದ್ರ ಸರ್ಕಾರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
