ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮತ್ತು ಆ ಕ್ಷೇತ್ರದ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಕಾನೂನನ್ನೇ ಸಡಿಲಗೊಳಿಸಿದೆ.
ನಗರ ಯೋಜನಾ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಈ ಮೂಲಕ ಲೇ ಔಟ್‌ಗಳು ಮೂಲಸೌಕರ್ಯ ಭಾಗಶಃ ಪೂರ್ಣಗೊಳಿಸಿದರೂ ನಿವೇಶನ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಇದನ್ನೂ ಓದಿ:ವಿಶೇಷ ಆರ್ಥಿಕ ಪ್ಯಾಕೇಜ್​ನ 2ನೇ ದಿನದ ಘೋಷಣೆಗಳ ಬಗ್ಗೆ ಪಿಎಂ ಮೋದಿ ಹೀಗೆ ಹೇಳ್ತಿದ್ದಾರೆ…
ಈ ವರೆಗೆ ಪೂರ್ಣ ಮೂಲಸೌಕರ್ಯ ಕಲ್ಪಿಸಿದ ನಂತರವಷ್ಟೇ ನಿವೇಶನ ಮಾರಾಟಕ್ಕೆ ಎನ್‌ಒಸಿ ನೀಡಲಾಗುತ್ತಿತ್ತು. ಬಡಾವಣೆ ನಿರ್ಮಾತೃಗಳು ಪೂರ್ಣ ಮೂಲಸೌಕರ್ಯ ಕಲ್ಪಿಸದೆ ನಿವೇಶನದಾರರಿಗೆ ಸತಾಯಿಸುತ್ತಿದ್ದುದರಿಂದ ಕಠಿಣ ನಿರ್ಧಾರಕ್ಕೆ ಬರಲಾಗಿತ್ತು. ಈಗ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರೋತ್ಸಾಹ ನೀಡಲು, ಲೇಔಟ್ ಪೂರ್ಣಗೊಳ್ಳುವ ಮೊದಲೇ ಷರತ್ತುಬದ್ಧವಾಗಿ ನಿವೇಶನ ಮಾರಲು ಅವಕಾಶ ನೀಡಲಾಗುತ್ತಿದೆ.
ಶೇ. 40 ಮೂಲ ಸೌಕರ್ಯ ಮುಗಿಸಿದ್ದರೆ ಮೊದಲ ಹಂತದ ನಿವೇಶನಗಳನ್ನು ಮಾರಬಹುದು. ಶೇ.70 ಮೂಲಸೌಕರ್ಯ ಕಲ್ಪಿಸಿ ನಂತರದ 30ರಷ್ಟು ಹಾಗೂ ಮೂರನೇ ಹಂತದ ನಿವೇಶನ ಮಾರುವ ಮುನ್ನ ಶೇ.100 ಮೂಲಸೌಕರ್ಯ ಕಲ್ಪಿಸಿರಬೇಕಾಗುತ್ತದೆ.
ಇದನ್ನೂ ಓದಿ:ರೈತರು, ಕಾರ್ಮಿಕರಿಗೆ ಕೇಂದ್ರದಿಂದ ಎರಡನೇ ದಿನದ ಕೊಡುಗೆ: ಯಡಿಯೂರಪ್ಪ ಏನಂತಾರೆ?
ಲೇಔಟ್ ಮೂಲಸೌಕರ್ಯ ಪೂರ್ಣಗೊಳ್ಳುವವರೆಗೆ ನಿವೇಶನ ಮಾರಬಾರದೆಂಬ ನಿಯಮದಿಂದ ಕಷ್ಟವಾಗುತ್ತಿದೆ, ಕೊಂಚ ರಿಯಾಯಿತಿ ನೀಡಿದರೆ ಅನುಕೂಲ ಎಂಬ ಬೇಡಿಕೆ ಇತ್ತು. ಷರತ್ತುಬದ್ಧವಾಗಿ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಹಣ್ಣು, ತರಕಾರಿ ಬೆಳೆಗಾರರಿಗೆ ತಲಾ 15 ಸಾವಿರ ರೂ.; ಮತ್ತೆ 162 ಕೋಟಿ ಪ್ಯಾಕೇಜ್ ನೀಡಿದ ಬಿಎಸ್‌ವೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 11 =
Remember me
