ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ದಾಖಲಾಗಿರುವ ಕರೊನಾ ಸೋಂಕಿತರ ಚಿಕಿತ್ಸೆಗೆ ‘ರೆಮ್ಡೆಸಿವಿರ್’ ಔಷಧ ಒದಗಿಸಲು ಶುಕ್ರವಾರ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಔಷಧ ಖರೀದಿ ವೆಚ್ಚವನ್ನು ಆಸ್ಪತ್ರೆಗಳಿಗೆ ಮರುಪಾವತಿ ಮಾಡುವುದಾಗಿ ತಿಳಿಸಿದೆ.
ಅಮೆರಿಕ ಮೂಲದ ರೆಮ್ಡೆಸಿವಿರ್ ಔಷಧವನ್ನು ಕೋವಿಡ್ ಚಿಕಿತ್ಸೆಗೆ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಈ ಔಷಧ ಬಳಸಲಾಗುತ್ತಿದೆ. ಇದರ ಸೌಲಭ್ಯ ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರಿಗೂ ಒದಗಿಸಲು ಆದೇಶಿಸಲಾಗಿದೆ.
ಇದನ್ನೂ ಓದಿ:VIDEO | ಕೊಹ್ಲಿ-ಅನುಷ್ಕಾ ನಡುವೆ ಜಗಳವಾದರೆ ಮೊದಲು ಸಾರಿ ಕೇಳೋದು ಯಾರು ಗೊತ್ತೇ?
ಸರ್ಕಾರದ ಶಿಫಾರಸು ಮೂಲಕ ದಾಖಲಾಗಿರುವ ಸೋಂಕಿತರ ಚಿಕಿತ್ಸೆಗೆ ಎಷ್ಟು ಪ್ರಮಾಣದ ರೆಮ್ಡೆಸಿವಿರ್ ಇಂಜೆಕ್ಷನ್ ಅಗತ್ಯ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್​ಗೆ (ಸ್ಯಾಟ್) ಆಯಾ ಜಿಲ್ಲಾ ಸಂಯೋಜರು, ಪ್ರಾದೇಶಿಕ ಸಲಹೆಗಾರರ ಮೂಲಕ ಖಾಸಗಿ ಆಸ್ಪತ್ರೆಗಳು ಬೇಡಿಕೆ ಸಲ್ಲಿಸಬೇಕು. ನಂತರ ಟ್ರಸ್ಟ್ ಇದನ್ನು ಪರಿಶೀಲಿಸಿ ಅಗತ್ಯ ಇಂಜೆಕ್ಷನ್ ಒದಗಿಸಲು ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್​ಹೌಸಿಂಗ್ ಸೊಸೈಟಿಗೆ (ಕೆಎಸ್​ಡಿಎಲ್​ಡ್ಬ್ಯುಎಸ್) ಸಲಹೆ ನೀಡಲಿದೆ.
ಇದನ್ನೂ ಓದಿ:ಡಿ.ಜೆಹಳ್ಳಿ ಗಲಭೆ: ಬಂಧಿತನ ತಂದೆ ಹೃದಯಾಘಾತದಿಂದ ಸಾವು
ಖಾಸಗಿ ಆಸ್ಪತ್ರೆಗಳು ಸಂಬಂಧಿಸಿದ ರೋಗಿ ಹೆಸರಲ್ಲಿ ಈ ಇಂಜೆಕ್ಷನ್ ಪಡೆಯಬೇಕು. ಬಳಿಕ ಈ ಔಷಧ ನೀಡಲಾಗುವ ಪ್ರತಿ ರೋಗಿಯ ಜಿಲ್ಲಾ ಕೋವಿಡ್ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಯ ಮಾಹಿತಿಯನ್ನು ಟ್ರಸ್ಟ್​ಗೆ ಸಲ್ಲಿಸಿ ಚಿಕಿತ್ಸೆ ನೀಡಬಹುದು. ಈ ಔಷಧ ಬಳಕೆ ವಿಚಾರದಲ್ಲಿ ರಾಜ್ಯದ ಕ್ಲಿನಿಕಲ್ ಪರಿಣಿತರ ಸಮಿತಿ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ, ಸಲಹೆಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಈ ಔಷಧ ಖರೀದಿಗೆ ಆಸ್ಪತ್ರೆಗಳಿಗೆ ತಗುಲಿದ ವೆಚ್ಚವನ್ನು ಸರ್ಕಾರ ನಿರ್ಧಿಷ್ಟ ಕಾಲಮಿತಿಯಲ್ಲಿ ಮರುಪಾವತಿ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
https://www.vijayavani.net/s-porn-vedio-honeytrap-arrest-chennai/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − thirteen =
Remember me
