ಬೆಂಗಳೂರು:ಸರ್ವರಿಗೂ ಸೂರು ಅಭಿಯಾನ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ನಗರ) 1.80 ಲಕ್ಷ ಫಲಾನುಭವಿಗಳಿಗೆ ನಿಗದಿಪಡಿಸಲಾಗಿದ್ದ ವಂತಿಗೆಯನ್ನು ತಲಾ 3.50 ಲಕ್ಷ ರೂ. ಬದಲು ತಲಾ 1 ಲಕ್ಷ ರೂ.ಗೆ ತಗ್ಗಿಸುವ ಮೂಲಕ ಸರ್ಕಾರ ಮತ್ತೊಂದು ಗ್ಯಾರಂಟಿ ಘೋಷಿಸಿದೆ.
ಈಗಾಗಲೇ ನಾಲ್ಕು ಗ್ಯಾರಂಟಿ ಅನುಷ್ಠಾನಗೊಳಿಸಿ, ಐದನೇ ಗ್ಯಾರಂಟಿ ಜಾರಿಗೆ ಸಿದ್ಧತೆ ನಡೆದಿರುವಾಗಲೇ ವಸತಿ ಫಲಾನುಭವಿಗಳಿಗೆ ದೊಡ್ಡ ಕೊಡುಗೆ ನೀಡುವ ಮೂಲಕ ಆರನೇ ಗ್ಯಾರಂಟಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅನುಷ್ಠಾನಗೊಳಿಸುತ್ತಿರುವ 1,80,253 ಮನೆಗಳನ್ನು ಪೂರ್ಣಗೊಳಿಸಲು ಫಲಾನು ಭವಿಗಳ ವಂತಿಗೆ ಹಾಗೂ ಮೂಲಸೌಕರ್ಯಗಳಿಗಾಗಿ ಅಗತ್ಯವಿರುವ ಒಟ್ಟು 6,170 ಕೋಟಿ ರೂ.ಗಳನ್ನು ಸರ್ಕಾರದಿಂದ ಒದಗಿಸಲು ಸಂಪುಟ ಸಭೆ ಸಮ್ಮತಿಸಿದೆ. ಈ ಪೈಕಿ ಮೊದಲ ಕಂತಿನಲ್ಲಿ 500 ಕೋಟಿ ನೀಡಲು ನಿರ್ಧರಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸ್ಲಂ ನಿವಾಸಿಗಳು ಮನೆಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ವಿುಸಲು ಕೊಳೆಗೇರಿಗಳಲ್ಲಿನ ಶೆಡ್-ಗುಡಿಸಲುಗಳನ್ನು ತೆರವುಗೊಳಿಸಿ ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.
ಒಂದು ಲಕ್ಷ ರೂ. ಸಂಗ್ರಹ:ಈ ಯೋಜನೆಯಡಿ ಫಲಾನುಭವಿಗಳ ವಂತಿಗೆ ಪ್ರಮಾಣ ಸರಾಸರಿ ಮನೆಗಳ ಘಟಕ ವೆಚ್ಚದ ಶೇ.45 ರಿಂದ 55 ರಷ್ಟಿದ್ದು, ಫಲಾನುಭವಿಗಳು ಪೂರ್ಣ ಪ್ರಮಾಣದಲ್ಲಿ ಭರಿಸಲಾಗದೇ ಇರುವುದನ್ನು ಮನಗಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಾಯಧನ ಹೊರತುಪಡಿಸಿ ಫಲಾನುಭವಿಗಳಿಂದ ಗರಿಷ್ಠ 1 ಲಕ್ಷ ರೂ. ಮಾತ್ರ ಸಂಗ್ರಹಿಸಲಾಗುತ್ತದೆ. ಬಾಕಿ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲು ತೀರ್ವನಿಸಿದೆ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಜಮೀರ್ ಪ್ರಯತ್ನಕಳೆದ ಹತ್ತು ವರ್ಷಗಳಿಂದ ವಸತಿ ಯೋಜನೆಗಳು ಕುಂಟುತ್ತ ಸಾಗುತ್ತಿದ್ದ ಕಾರಣ ಸಚಿವ ಜಮೀರ್ ಅಹಮದ್ ಯೋಜನೆಯನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ನೀಡಲು ವಿಶೇಷ ಪ್ರಯತ್ನ ನಡೆಸಿದ್ದರು. ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಯ ಜತೆಗೆ ಹತ್ತಕ್ಕೂ ಹೆಚ್ಚು ಸಭೆ ನಡೆಸಿ ಯಶಸ್ವಿಯಾದರು.
ಇತರ ನಿರ್ಧಾರ
* ಫೆಬ್ರವರಿ ತಿಂಗಳಲ್ಲಿ ಜಂಟಿ ಅಧಿವೇಶನ ಮತ್ತು ಬಜೆಟ್ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆ ತೀರ್ವನ.
5,403 ಕೋಟಿ ರೂ.ಫಲಾನುಭವಿಗಳು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವುದರಿಂದ ವಂತಿಗೆ ಪಾವತಿಸಲು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅನುಷ್ಠಾನಗೊಳಿಸುತ್ತಿ ರುವ 1,80,253 ಮನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಟೆಂಡರ್ ಆಹ್ವಾನಿಸಿ ಈ ಪೈಕಿ ಮುಕ್ತಾಯ ಹಂತದಲ್ಲಿರುವ 48,796 ಮನೆಗಳಿಗೆ ಪ್ರತಿ ಫಲಾನುಭವಿಗಳಿಂದ ಗರಿಷ್ಠ 1 ಲಕ್ಷ ರೂ.ಗಳನ್ನು ಮಾತ್ರ ಸಂಗ್ರಹಿಸಿ ಬಾಕಿ 5,403 ಕೋಟಿ ರೂ. ಮೊತ್ತವನ್ನು ಸರ್ಕಾರದಿಂದಲೇ ಭರಿಸಲಾಗುತ್ತದೆ. ಜತೆಗೆ, ಮೂಲಸೌಕರ್ಯಕ್ಕೆ 767 ರೂ.ಗಳ ಅಗತ್ಯವಿದೆ. ಈ ಪೈಕಿ ಮೊದಲ ಕಂತಾಗಿ 500 ಕೋಟಿ ರೂ. ನೀಡಲು ಸರ್ಕಾರ ಒಪ್ಪಿದೆ ಎಂದು ಜಮೀರ್ ಮಾಹಿತಿ ನೀಡಿದರು.
ಫೆಬ್ರವರಿ ಅಂತ್ಯಕ್ಕೆ 48,766 ಮನೆ ಪೂರ್ಣಸರ್ಕಾರ ಭರಿಸುತ್ತಿರುವ 500 ಕೋಟಿ ರೂ. ಬಳಸಿ ಫೆಬ್ರವರಿ ಅಂತ್ಯಕ್ಕೆ 48,766 ಮನೆ ಪೂರ್ಣಗೊಳಿಸುವುದಾಗಿ ಜಮೀರ್ ಅಹ್ಮದ್ ತಿಳಿಸಿದರು. ಎರಡು ವರ್ಷದಲ್ಲಿ ಒಟ್ಟು 6,170 ಕೋಟಿ ರೂ.ಗಳನ್ನು ಸರ್ಕಾರ ನೀಡುವುದರಿಂದ ಎಲ್ಲ 1,80,253 ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.
ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಜಾರಿಗೆ ತರುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಕಾಲೇಜು ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯಕವಿರುವ ಒಟು ್ಟ 449 ಸಿಬ್ಬಂದಿ ಸೇವೆಯನ್ನು 11.30 ಕೋಟಿ ರೂ. ಮೊತ್ತದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತ ಚರ್ಚೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಯಾವುದೇ ಹೊರಗುತ್ತಿಗೆ ನೇಮಕಾತಿಯಾದರೂ ಮೀಸಲಾತಿ ಅನ್ವಯಿಸುವಂತೆ ನಿರ್ಣಯಿಸಲಾಯಿತು ಎಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ಕಚೇರಿಗಳು ಹಾಗೂ ಪದವಿ ಕಾಲೇಜುಗಳು ಗ್ರೂಪ್-ಡಿ ನೌಕರರ ತೀವ್ರ ಅಭಾವ ಎದುರಿಸುತ್ತಿದ್ದು, ಕೋವಿಡ್ ನಂತರ ಹಿಂದೆಂದಿಗಿಂತಲೂ ಪ್ರಮುಖವಾದ ಸ್ವಚ್ಛತಾ ಕಾರ್ಯವೂ ಸೇರಿದಂತೆ ಅನೇಕ ದೈನಂದಿನ ಚಟುವಟಿಕೆ ನಿರ್ವಹಿಸುವುದು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಈ ನೇಮಕಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಪಾಟೀಲ ಹೇಳಿದರು.
ಎಷ್ಟು? ಯಾವ ಹುದ್ದೆ ಮಂಜೂರು:ಕಾಲೇಜು ಶಿಕ್ಷಣ ವ್ಯಾಪ್ತಿಯಲ್ಲಿರುವ 449 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಕೇಂದ್ರ ಕಚೇರಿ, 06 ಪ್ರಾದೇಶಿಕ ಕಚೇರಿ, 1,309 ಅಟೆಂಡರ್ ಹುದ್ದೆ ಮತ್ತು 1,534 ಪರಿಚಾರಕ ಹುದ್ದೆಗಳು ಮಂಜೂರಾಗಿವೆ. ಒಟ್ಟು 2,843 ಗ್ರೂಪ್ ಡಿ ಹುದ್ದೆಗಳ ಪೈಕಿ 418 ಹುದ್ದೆಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 2,425 ಹುದ್ದೆಗಳು ಖಾಲಿ ಇವೆ. ಕಾಲೇಜು ಶಿಕ್ಷಣ ಇಲಾಖೆ ಹಾಗೂ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯಕವಿರುವ 347 ಗ್ರೂಪ್​ಡಿ ನೌಕರರು ಮತ್ತು 102 ಡೇಟಾ ಎಂಟ್ರಿ ಆಪರೇಟರ್​ಗಳು ಸೇರಿದಂತೆ ಒಟ್ಟು 449 ಹುದ್ದೆಗಳ ಸೇವೆಯನ್ನು ಅಂದಾಜು 11.30 ಕೋಟಿ ರೂ.ಗಳ ಮೊತ್ತದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪಡೆಯಲಾಗುತ್ತಿದೆ ಎಂದು ಎಚ್.ಕೆ.ಪಾಟೀಲ ವಿವರಿಸಿದರು.
ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿದರೆ ಸುಸ್ಥಿರ ಅಭಿವೃದ್ಧಿ: ಡಾ. ಶಾಲಿನಿ ರಜನೀಶ್ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + seventeen =
Remember me
