ವಿಜಯಪುರ:ವಚನಗಳ ಪಿತಾಮಹ ಡಾ. ಫ.ಗು. ಹಳಕಟ್ಟಿ ಪತ್ರಿಕಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದ ಕಂದಗಲ್ಲ ಹನುಮಂತರಾಯ ರಂಗ ಮಂದಿರದಲ್ಲಿ ಭಾನುವಾರ ನಡೆದ 37ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪತ್ರಿಕೆ ನಡೆಸಲು ಹಳಕಟ್ಟಿ ಅವರು ಮನೆಯನ್ನೂ ಮಾರಿದ್ದರು. ಅವರ ಬದ್ಧತೆಯನ್ನು ಇಂದಿನ ಪತ್ರಕರ್ತರು ಅಳವಡಿಸಿಕೊಳ್ಳಬೇಕು. ಫ.ಗು. ಹಳಕಟ್ಟಿ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ ಬಸವಾದಿ ಶರಣರ ವಚನಗಳನ್ನು ಪ್ರಸಾರ ಮಾಡಿದರು. ಹಾಗೆಯೇ ಅವರೊಬ್ಬ ಪತ್ರಕರ್ತರೂ ಆಗಿದ್ದರು. 35 ವರ್ಷಗಳ ಕಾಲ ನವಕರ್ನಾಟಕ ವಾರ ಪತ್ರಿಕೆ ಹಾಗೂ ಶಿವಾನುಭವ ಮಾಸ ಪತ್ರಿಕೆಯನ್ನು 25 ವರ್ಷಗಳ ಕಾಲ ಮುನ್ನಡೆಸಿದ್ದರು ಎಂದು ತಿಳಿಸಿದರು. ಇಂದು ಎಲ್ಲ ಕ್ಷೇತ್ರಗಳೂ ಕಲುಷಿತಗೊಂಡಿವೆ. ಎಲ್ಲ ಕಡೆಗೂ ಒಳ್ಳೆಯವರು ಇದ್ದಂತೆ ಕೆಟ್ಟವರು ಇದ್ದಾರೆ. ಅದು ಪತ್ರಿಕಾರಂಗಕ್ಕೂ ಅನ್ವಯವಾಗುತ್ತದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ಜವಾಬ್ದಾರಿ ಅಧಿಕವಾಗಿದೆ. ಪ್ರಜಾತಂತ್ರ ವ್ಯವಸ್ಥೆ ಉಳಿಯಲು ಈ ನಾಲ್ಕು ಅಂಗಗಳು ಒಂದಾಗಿ ಕೆಲಸ ಮಾಡಬೇಕಿದೆ. ಸಮಾಜ ತಿದ್ದುವ ಕೆಲಸದಲ್ಲಿ ಪತ್ರಿಕಾ ಕ್ಷೇತ್ರದ ಮಾರ್ಗದರ್ಶನ ಇರಲಿ ಎಂದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸುದ್ದಿಯ ಭರಾಟೆಯಲ್ಲಿ ಪತ್ರಕರ್ತರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯಬಾರದು. ಸುದ್ದಿ ರೋಮಾಂಚನಕಾರಿ ಆಗಬಾರದು. ಕೋವಿಡ್ ವೇಳೆ ಸಾವಿನ ಸುದ್ದಿಗಳು ಜನರಲ್ಲಿ ಭೀತಿ ಮೂಡಿಸಿದ್ದವು.
ರಾಷ್ಟ್ರದ ಸಮಸ್ಯೆಗಳ ವಿಚಾರದಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಎರಡು ದಿನಗಳ ಸಮ್ಮೇಳನ ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡರು.
ಪತ್ರಕರ್ತರ ಅಂತರಾಳದ ಅನಾವರಣ: ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿಯ ಏಳು ಸಾಧಕರು ಸೇರಿ ಒಟ್ಟು 66 ಸಾಧಕರಿಗೆ ಪ್ರಶಸ್ತಿ ಪ್ರದಾನ, ಎರಡು ದಿನಗಳ ಕಾಲ ಅರ್ಥಪೂರ್ಣ ವಿಚಾರಗೋಷ್ಠಿ, ರಾಜ್ಯದ ನಾನಾ ಭಾಗಗಳಿಂದ ಬಂದ ಹಿರಿ-ಕಿರಿಯ ಪತ್ರಕರ್ತರ ಸಮಾಗಮ, ಪತ್ರಿಕೋದ್ಯಮ ಕ್ಷೇತ್ರದ ಸಾಧಕ-ಬಾಧಕಗಳ ಕುರಿತ ಚರ್ಚೆ ಹಾಗೂ ರಾಜಕೀಯ ಧುರೀಣ ಸಹಭಾಗಿತ್ವದೊಂದಿಗೆ ಪತ್ರಕರ್ತರ ರಾಜ್ಯ ಮಟ್ಟದ 37ನೇ ಸಮ್ಮೇಳನ ಸಂಪನ್ನಗೊಂಡಿತು.
ಪತ್ರಿಕೋದ್ಯಮದ ಹರಿಕಾರ ಖ್ಯಾತಿಯ ಮೊಹರೆ ಹನುಮಂತರಾಯ ವೇದಿಕೆಯಲ್ಲಿ ಎರಡು ದಿನಗಳ ಕಾಲ ಪತ್ರಕರ್ತರು ತಮ್ಮ ತಮ್ಮ ಮನದಾಳದ ನೋವು- ನಲಿವುಗಳನ್ನು ಬಿಚ್ಚಿಟ್ಟರು. ಪ್ರಸ್ತುತ ಮಾಧ್ಯಮ ಲೋಕ ಮುಂದಿರುವ ಸವಾಲುಗಳ ಬಗ್ಗೆ ಪರಸ್ಪರ ರ್ಚಚಿಸಿ ಮುಂದೆ ಆಗಬಹುದಾದ ಬದಲಾವಣೆಗಳ ಕುರಿತು ಸಮಗ್ರವಾಗಿ ಸಮಾಲೋಚಿಸಲಾಯಿತು.
ವಿಜಯವಾಣಿ ದಿಗ್ವಿಜಯ ವಾಹಿನಿ ಸಪ್ತ ಸಾಧಕರಿಗೆ ಪ್ರಶಸ್ತಿ:ದಿಗ್ವಿಜಯ ನ್ಯೂಸ್ ಚಾನಲ್ ಸಂಪಾದಕ ಸಿದ್ದು ಕಾಳೋಜಿ (ವಿದ್ಯುನ್ಮಾನ ವಿಭಾಗ), ವಿಜಯವಾಣಿ ಡೆಪ್ಯೂಟಿ ಎಡಿಟರ್ ನಾಗರಾಜ ಭಟ್ (ಅತ್ಯುತ್ತಮ ಡೆಸ್ಕ್ ಸಂಪಾದಕೀಯ), ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ (ವಿಶೇಷ ಪ್ರಶಸ್ತಿ), ಚೀಫ್ ಗ್ರಾಫಿಕ್ ಡಿಸೈನರ್ ಹರೀಶ್ ಕುಮಾರ್ ಆರ್. (ಅತ್ಯುತ್ತಮ ಪುಟ ವಿನ್ಯಾಸ), ಹಿರಿಯ ವರದಿಗಾರ ಜಗನ್ ರಮೇಶ್ (ನ್ಯಾಯಾಂಗ ವಿಭಾಗ), ಮೈಸೂರಿನ ಉಪ ಸಂಪಾದಕ ಅವಿನಾಶ ಜೈನಹಳ್ಳಿ (ಅತ್ಯುತ್ತಮ ಕ್ರೀಡಾ ವರದಿಕೆಗಾಗಿ ನೆಟ್ಟಕಲ್ಲಪ್ಪ ಪ್ರಶಸ್ತಿ), ಕಡೂರ ವರದಿಗಾರ ಎಚ್.ಆರ್. ದೇವರಾಜ್ (ಗ್ರಾಮಾಂತರ ವರದಿಗಾರಿಕೆಗಾಗಿ ನೀಡುವ ಮಂಡಿಬೆಲೆ ಶಾಮಣ್ಣ) ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಾವಣಗೆರೆಯಲ್ಲಿ ಮುಂದಿನ ಸಮ್ಮೇಳನ:ಕರ್ನಾಟಕ ರಾಜ್ಯ ಪತ್ರಕರ್ತರ 38ನೇ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ವಿಸ್ತರಣೆ, ನಿವೃತ್ತ ಪತ್ರಕರ್ತರಿಗೆ 20 ಸಾವಿರ ರೂ. ಪಿಂಚಣಿ ಸೌಲಭ್ಯ ಸೇರಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮೊದಲ ದಿನವೇ ಸಿಎಂ ಸಮ್ಮುಖ ಹಕ್ಕೊತ್ತಾಯ ನಿರ್ಣಯ ಮಂಡಿಸಿದ್ದರು.
ವರ್ಕೌಟ್​ ಆದ 50% ಆಫರ್​: ಮೂರನೇ ದಿನವೂ ಕೋಟಿಗಟ್ಟಲೆ ಟ್ರಾಫಿಕ್​ ಫೈನ್​ ಸಂಗ್ರಹ; ಒಟ್ಟು ಮೊತ್ತವೆಷ್ಟು?

ಪ್ರಿಯತಮನ ಮರೆಯಲು ಅರಿವಳಿಕೆಯ ಮೊರೆಹೋದ ನರ್ಸ್; ಆಮೇಲಾಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + one =
Remember me
