ಬೆಂಗಳೂರು: ರಾಜ್ಯ ಸರ್ಕಾರದ ನಿರಂತರ ಪ್ರಯತ್ನದ ಲವಾಗಿ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆ ಸುಪರ್ದಿಗೆ ಪಡೆದಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ್ದೇ ಆದ ಏರ್‌ಲೈನ್ಸ್ ಕಂಪನಿ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದು ಕೈಗಾರಿಕೆ ಮತ್ತು ಮೂಲಸವಲತ್ತು ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏರ್‌ಲೈನ್ಸ್ ಕಂಪನಿ ಸ್ಥಾಪನೆ ವಿಚಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ರಾಜ್ಯ ಸರ್ಕಾರ ಬಯಸಿ ಮೊದಲನೆಯದಾಗಿ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆ ಹೊತ್ತುಕೊಂಡಿದೆ.
ಕೇಂದ್ರ ಸರ್ಕಾರದ ಮಾದರಿಯಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಾಪಿಸಲಾಗುವುದು. ಏರ್‌ಲೈನ್ಸ್ ಕಂಪನಿ ಚಿಂತನೆಗೆ ಪೂರಕವಾಗಿ ಖಾಸಗಿ ವಿಮಾನಯಾನ ಸಂಸ್ಥೆ ಉನ್ನತಾಧಿಕಾರಿಯೊಬ್ಬರ ಜತೆಗೆ ಅನೌಪಚಾರಿಕವಾಗಿ ಚರ್ಚಿಸಿ ಮಾಹಿತಿ ಪಡೆದಿರುವೆ.
ಒಂದು ವಿಮಾನದ ವೆಚ್ಚ 200 ಕೋಟಿ ರೂ.ಗಳಾಗಲಿದ್ದು, ಗುತ್ತಿಗೆ ಪಡೆದರೆ ವೆಚ್ಚದ ಮೊತ್ತ ಇನ್ನೂ ಕಡಿಮೆಯಾಗಲಿದೆ. ಮೈಸೂರು-ಕಲಬುರಗಿ, ಬೆಂಗಳೂರು-ಬೆಳಗಾವಿ, ವಿಜಯಪುರ-ಕಲಬುರಗಿ ಹೀಗೆ ಆಂತರಿಕವಾಗಿ ವಿಮಾನ ಸಂಚಾರವನ್ನು ಈ ಕಂಪನಿ ಮೂಲಕ ಆರಂಭಿಸಬೇಕು ಎನ್ನುವುದು ಚಿಂತನೆಗೆ ಮೂಲ ಕಾರಣವೆಂದು ಹೇಳಿದರು.
ಇಲಾಖೆ ಹಂತದ ಚಿಂತನೆ ಮಾಹಿತಿ ಪಡೆದ ಏರ್ ಇಂಡಿಯಾ ಕಂಪನಿ ಉನ್ನತಾಧಿಕಾರಿಯೊಬ್ಬರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸರ್ಕಾರ ಗಂಭೀರ ಹೆಜ್ಜೆಯಿಟ್ಟರೆ ಕಂಪನಿ ಸ್ಥಾಪನೆ ಹಾಗೂ ವಿಮಾನಯಾನ ರೂಪರೇಷೆ ತಯಾರಿಸಿಕೊಡಲು ಆಸಕ್ತಿವ್ಯಕ್ತಪಡಿಸಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ 600 ಕೋಟಿ ರೂ. ಹೂಡಿಕೆ ದೊಡ್ಡ ಮೊತ್ತವೇನಲ್ಲ ಎಂದರು.
ವಿಜಯಪುರ ವಿಮಾಣದ ನಿರ್ಮಾಣ ಕಾಮಗಾರಿ 2024ರ ಏಪ್ರಿಲ್‌ಗೆ ಪೂರ್ಣಗೊಳ್ಳಲಿದೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ಹಂತದಲ್ಲಿ ರಾಯಚೂರು, ಕೊಪ್ಪಳ ವಿಮಾನ ನಿಲ್ದಾಣ ನಿರ್ಮಾಣ ಪ್ರಾರಂಭಿಸುವ ಉದ್ದೇಶವಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + fifteen =
Remember me
