ಬೆಂಗಳೂರು:ನ್ಯಾಯಾಲಯಗಳಲ್ಲಿ ಪ್ರತಿವರ್ಷ ಖುಲಾಸೆಗೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ! ಸುಳ್ಳು ದೂರು, ಸಾಕ್ಷ್ಯಾಧಾರ ಕೊರತೆ, ದೂರುದಾರರ ಹೇಳಿಕೆ ಬದಲು, ಪೊಲೀಸರ ತನಿಖಾ ವೈಫಲ್ಯದಿಂದಾಗಿ ರಾಜ್ಯದಲ್ಲಿ ವರದಿಯಾಗುವ ಒಟ್ಟಾರೆ ಅಪರಾಧ ಪ್ರಕರಣಗಳಲ್ಲಿ ಕಳೆದ 3 ವರ್ಷದಲ್ಲಿ 66,997 ಪ್ರಕರಣಗಳು ಕೆಳಹಂತದ ನ್ಯಾಯಾಲಯಗಳಲ್ಲಿ ಖುಲಾಸೆಯಾಗಿವೆ.
ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್​ಸಿಆರ್​ಬಿ) ಅಂಕಿ-ಅಂಶಗಳ ಪ್ರಕಾರ 2016ರಲ್ಲಿ 32,776 ಹಾಗೂ 2017ರಲ್ಲಿ 32,204 ಪ್ರಕರಣಗಳಲ್ಲಿ ಕ್ಲೀನ್​ಚಿಟ್ ಸಿಕ್ಕಿದೆ. 2018ರಲ್ಲಿ 2,017 ಕೇಸ್​ಗಳು ಖುಲಾಸೆಯಾಗಿರುವುದು ಸಮಾಧಾನದ ಸಂಗತಿ. ಚತ್ತೀಸ್​ಗಢದಲ್ಲಿ 4,694, ಮಹಾರಾಷ್ಟ್ರದಲ್ಲಿ 4,761, ಮಧ್ಯಪ್ರದೇಶದಲ್ಲಿ 4,696, ಬಿಹಾರದಲ್ಲಿ 4,555 ಪ್ರಕರಣಗಳು ಪ್ರತಿವರ್ಷ ಖುಲಾಸೆಯಾಗುತ್ತಿವೆ.
ಕೋರ್ಟ್​ನಲ್ಲಿ ಕೇಸ್​ಗಳು ಬಿದ್ದುಹೋಗುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ತನಿಖೆ ಸಂದರ್ಭದಲ್ಲಿ ಪೊಲೀಸರು ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ. ತನಿಖಾ ಕ್ರಮ, ಮಹಜರು, ಆರೋಪಿಗಳ ಹೇಳಿಕೆ, ಚಾರ್ಜ್​ಶೀಟ್ ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಖಾಕಿಗೆ ಸರ್ಕಾರ ಖಡಕ್ ಸೂಚನೆ:ಪ್ರಕರಣ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ದೂರುದಾರರ ಸ್ಪಷ್ಟ ಹೇಳಿಕೆ, ಸಾಕ್ಷಿದಾರರ ಹೇಳಿಕೆ ಹಾಗೂ ಪಂಚನಾಮೆ ಬರೆದ ಅಧಿಕಾರಿ ಸಹಿಯನ್ನು ಕಡ್ಡಾಯವಾಗಿ ಪಡೆಯಬೇಕು. ದೂರುದಾರರು ಹಾಗೂ ಸಾಕ್ಷಿದಾರರ ಬಾಂಡ್​ಗಳನ್ನು ಪಡೆದು ಅಂತಿಮ ವರದಿಯೊಂದಿಗೆ ಕೋರ್ಟ್​ಗೆ ಹಾಜರುಪಡಿಸಬೇಕು. ಆರೋಪಿತರ, ದೂರುದಾರರ, ಸಾಕ್ಷ್ಯಗಳ ಪೂರ್ಣ ವಿಳಾಸ, ಸರ್ಕಾರ ವಿತರಿಸುವ ಗುರುತಿನ ಪತ್ರದ ದೃಢೀಕೃತ ಪತ್ರವನ್ನು ಚಾರ್ಜ್​ಶೀಟ್ ಜತೆ ಕೋರ್ಟ್​ಗೆ ಸಲ್ಲಿಸಬೇಕು. ಇದನ್ನು ಪಾಲನೆ ಮಾಡುತ್ತಿರುವ ಕುರಿತು ಘಟಕಾಧಿಕಾರಿಗಳು ಮಾಸಿಕ ಅಪರಾಧ ಪರಿಶೀಲನಾ ಸಭೆಗಳಲ್ಲಿ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.
ತನಿಖಾಧಿಕಾರಿಗಳು ತನಿಖೆ ನಡೆಸದೆ, ಸೂಕ್ತ ಸಾಕ್ಷ್ಯ ಸಂಗ್ರಹಿಸದೆ ದೋಷಾರೋಪ ಪಟ್ಟಿ ಸಲ್ಲಿಸುವುದು, ಸರ್ಕಾರಿ ಅಭಿ ಯೋಜಕರು ಸರಿಯಾಗಿ ವಾದ ಮಂಡಿಸದಿರುವುದರಿಂದ ಕೋರ್ಟ್​ನಲ್ಲಿ ಹಲವು ಪ್ರಕರಣ ಖುಲಾಸೆಗೊಳ್ಳಲು ಕಾರಣವಾಗುತ್ತಿದೆ.
| ಶ್ರೀರಾಮ್ ಸರ್ಕಾರಿ ಅಭಿಯೋಜಕರು
ಕಾರಣವೇನು?
ಎಲ್ಲಿ ನಿರ್ಲಕ್ಷ್ಯ?
ತನಿಖಾಧಿಕಾರಿಗಳು ಸಾಕ್ಷಿ ಹೇಳಲು ಕೋರ್ಟ್​ಗೆ ಬಂದಾಗ ಆರೋಪಿ ಪರ ವಕೀಲರು, ದೂರುದಾರರ, ಸಾಕ್ಷಿದಾರರ ಹೇಳಿಕೆ, ಪಂಚನಾಮೆ ತೋರಿಸಿ ಅವುಗಳಲ್ಲಿರುವ ಅಕ್ಷರಗಳು ಒಂದೇ ರೀತಿ ಇವೆ. ಯಾರ ಹಸ್ತಾಕ್ಷರ ಎಂದು ಪ್ರಶ್ನಿಸಿದಾಗ, ಠಾಣಾ ಬರಹಗಾರರದ್ದೆಂದು ತನಿಖಾಧಿಕಾರಿ ಹೇಳುತ್ತಾರೆ. ಠಾಣಾ ಬರಹಗಾರ ನಿಮ್ಮ ಸಮ್ಮುಖದಲ್ಲಿ ಬರೆದಿದ್ದಾರೆ ಎಂಬುದಕ್ಕೆ ದಾಖಲೆ ಮೇಲೆ ಸಹಿ ಮಾಡಿಲ್ಲ ಎಂದು ಪ್ರಶ್ನಿಸಿದಾಗ ತನಿಖಾಧಿಕಾರಿ ತಡಬಡಾಯಿಸುತ್ತಾರೆ. ಇದು ಆರೋಪಿಗಳಿಗೆ ಲಾಭವಾಗುತ್ತಿದೆ. ವಿಳಾಸ ಪೂರ್ಣವಾಗಿಲ್ಲದ ಕಾರಣ ಆರೋಪಿ ವಿರುದ್ಧ ಸಮನ್ಸ್ ಜಾರಿಯಾಗುತ್ತಿಲ್ಲ. ಹೀಗಾಗಿ ಹಲವು ಪ್ರಕರಣಗಳನ್ನು ನ್ಯಾಯಾಲಯಗಳು ಖುಲಾಸೆಗೊಳಿಸುತ್ತಿವೆ. ದೂರುದಾರ ನೀಡಿರುವ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದು ಪಂಚಾಯಿತಿ ಕಾರ್ಯದರ್ಶಿ ಪ್ರಮಾಣ ಪತ್ರದೊಂದಿಗೆ ಸಮನ್ಸ್ ಮರಳಿಸಿದರೆ ಕೋರ್ಟ್​ನಲ್ಲಿ ಸಾಕ್ಷ್ಯ ದುರ್ಬಲವಾಗುತ್ತದೆ.
| ಅವಿನಾಶ ಮೂಡಂಬಿಕಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − six =
Remember me
