ಬೆಂಗಳೂರು:ಪಕ್ಷಕ್ಕಿಂತ ವೈಯಕ್ತಿಕ ಹಿತವೇ ಮುಖ್ಯವೆಂದು ಮೂರು ಪಕ್ಷಗಳ ಕೆಲ ಮುಂಚೂಣಿ ನಾಯಕರು ‘ಸ್ವಯಂಕೃತ ತಪು್ಪ’ ನಡೆಯಿಂದಾಗಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ.
ತೆರೆಮರೆಯಲ್ಲಿ ನಡೆಸುತ್ತಿರುವ ರಾಜಿಸಂಧಾನದ ಕಸರತ್ತು ನಿರೀಕ್ಷಿತ ಫಲ ನೀಡಿಲ್ಲ. ಟಿಕೆಟ್ ವಂಚಿತರ ಅಸಹನೆ, ಬೆಂಬಲಿಗರ ಆಕ್ರೋಶವು ತಮಣಿಯಾಗಿಲ್ಲ. ಇದರಿಂದಾಗಿ ಜವಾಬ್ದಾರಿ ಹೊತ್ತ ಬಿಜೆಪಿ, ಕಾಂಗ್ರೆಸ್, ನಾಯಕರಿಗೆ ‘ಮಡಿಲಲ್ಲಿ ಕೆಂಡ’ ಕಟ್ಟಿಕೊಂಡ ಅನುಭವವಾಗುತ್ತಿದೆ. ರಣಾಂಗಣಕ್ಕೆ ಇಳಿಯಲೆಂದು ಬತ್ತಳಿಕೆಗೆ ಶಸ್ತ್ರ ಜೋಡಿಸಿಕೊಳ್ಳಬೇಕಾದವರು ಸಮರ್ಥ ಸೇನಾನಿಗಳನ್ನು ಹಿಡಿದಿಟ್ಟುಕೊಳ್ಳಲು ಬೆವರಿಳಿಸುತ್ತಿದ್ದಾರೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಕ್ಷ ತೊರೆದಿದ್ದಕ್ಕೆ ಬಹಳ ವರ್ಷ ಒಡನಾಡಿ ಪಕ್ಷ ತೊರೆದಿದ್ದಕ್ಕೆ ಬೇಸರವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತುಟಿಯಂಚಿನ ಅನುಕಂಪ ವ್ಯಕ್ತಪಡಿಸಿದ್ದಾರೆ.
ನಾಲ್ಕು ಜನರು ಪಕ್ಷ ಬಿಟ್ಟು ಹೋದರೆ ನಷ್ಟವಿಲ್ಲ. ಆದರೆ ಹೀಗೆ ಹೊರ ಹೋದವರಿಗೆ ಮತ್ತೆ ಪಕ್ಷಕ್ಕೆ ವಾಪಸ್ ಕರೆಯಿಸಿಕೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಚ್ಚರಿಕೆ ಮಿಶ್ರಿತ ಮನವೊಲಿಕೆ ದಾಳ ಉರುಳಿಸಿದ್ದಾರೆ.
ಬ್ಯಾಟಲ್ ಆಫ್ ವಿಟ್ಸ್:ಸಿಂಹಪಾಲು ಅಭ್ಯರ್ಥಿಗಳ ಹೆಸರು ಪ್ರಕಟಿಸಿರುವ ಬಿಜೆಪಿ ತರಹೇವಾರಿ ಭರವಸೆ, ಅವಕಾಶಗಳನ್ನು ಉದಾಹರಿಸಿ ಮನವೊಲಿಕೆ ಕೆಲಸ ಚುರುಕುಗೊಳಿಸಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯಡಿ ಅಭ್ಯರ್ಥಿಗಳ ಆಯ್ಕೆಯಾಗಿದೆ ಎಂದು ಪ್ರಮುಖರು ತೋರಿಕೆಗೆ ಹೇಳಿಕೊಳ್ಳುತ್ತಿದ್ದು, ಮೇಲುಗೈ ಸಾಧಿಸಲು ಎರಡು ದೊಡ್ಡ ಶಕ್ತಿಗಳ ‘ಬ್ಯಾಟಲ್ ಆಫ್ ವಿಟ್ಸ್ (ಬುದ್ಧಿವಂತಿಕೆ ಯುದ್ಧ)ನ ಪರಿಣಾಮವಿದು ಎಂದು ಹೇಳಲಾಗುತ್ತಿದೆ.
ಹೊಸ ಪ್ರಯೋಗ, ಅಚ್ಚರಿ ಹೆಸರಿನಲ್ಲಿ ಎಲ್ಲವನ್ನೂ ಗುಟ್ಟಾಗಿಟ್ಟಿದ್ದರಿಂದ ವಂಚಿತರು ಬಂಡಾಯ ಸಾರಿ, ಬೆಂಬಲಿಗರು ರೊಚ್ಚಿಗೇಳುವಂತಾಗಲು ‘ಸಂಘಟನೆ’ ವೈಫಲ್ಯ, ಪಕ್ಷದ ರಾಜ್ಯಾಧ್ಯಕ್ಷ ತಟಸ್ಥ ನಿಲುವು ಕಾರಣವೆಂದು ದೂರಲಾಗುತ್ತಿದೆ. ಅರುಣ್ ಜೇಟ್ಲಿ, ಅನಂತಕುಮಾರ್, ಬಿ.ಎಸ್. ಯಡಿಯೂರಪ್ಪ ಪಕ್ಷದ ಟ್ರಬಲ್ ಶೂಟರ್ಸ್ ಆಗಿದ್ದರು. ಇದೀಗ ಏಕಾಂಗಿಯಾಗಿರುವ ಯಡಿಯೂರಪ್ಪ ತಮ್ಮ ಶಕ್ತಿಮೀರಿ ಮನವೊಲಿಸಲು ಪ್ರಯತ್ನಿಸುತ್ತಿದ್ದರೆ, ಅಭ್ಯರ್ಥಿ ಆಯ್ಕೆಗೆ ಮುನ್ನ ಮೈಂಡ್ ಗೇಮ್ ಆಡಿದವರು ತಮ್ಮ ಆಪ್ತರ ಮುಖೇನ ಮೆದುವಾಗಿಸಲು ಪ್ರಯತ್ನಿಸುತ್ತಿದ್ದಾರೆ.
ಪಕ್ಷದಲ್ಲಿ ಟ್ರಬಲ್ ಮೇಕರ್ಸ್ ಹೆಚ್ಚಾಗಿರುವುದು ಎತ್ತಿ ತೋರಿಸುತ್ತಿದೆ. ಟಿಕೆಟ್ ವಂಚಿತರು, ಇದೇ ಕಾರಣಕ್ಕೆ ತೊರೆದವರು ಧ್ವನಿ ಏಕರೂಪವಾಗಿದೆ. ಪಕ್ಷದ ನಾಯಕರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ಕನಿಷ್ಠ ಪಕ್ಷ ಮುನ್ಸೂಚನೆ ನೀಡುವ ಸೌಜನ್ಯ, ಗೌರವವನ್ನೂ ಕಾಣಲಿಲ್ಲ ಎನ್ನುವುದಾಗಿದೆ.
ವರಿಷ್ಠರಿಗೆ ವಸ್ತುಸ್ಥಿತಿ ಅರಿವು:ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ನಂತರದ ಇಂಚಿಂಚು ಮಾಹಿತಿ ಪಡೆದಿರುವ ಪಕ್ಷದ ವರಿಷ್ಠರು ವಸ್ತುಸ್ಥಿತಿ ಅರಿತು, ಮಾಜಿ ಸಿಎಂ ಬಿಎಸ್​ವೈಗೆ ಹೆಚ್ಚಿನ ಜವಾಬ್ದಾರಿ ಒಪ್ಪಿಸಿದ್ದಾರೆ. ದೆಹಲಿ ನಾಯಕರ ಸೂಚನೆಯಂತೆ ಧಮೇಂದ್ರ ಪ್ರಧಾನ್, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಉಸ್ತುವಾರಿ ಅರುಣ್ ಸಿಂಗ್ ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದೀರ್ಘವಾಗಿ ಸಮಾಲೋಚಿಸಿದ್ದಾರೆ.
ಅಳುಕು: ಆಡಳಿತ ಬಿಜೆಪಿಯ ಬೆಳವಣಿಗೆಯು ಕಾಂಗ್ರೆಸ್, ಜೆಡಿಎಸ್​ನಲ್ಲಿ ಆಂತರಿಕ ಅಳುಕು ಹುಟ್ಟಿಸಿದ್ದು, ಅಂತಿಮ ಪಟ್ಟಿ ಬಿಡುಗಡೆಗೆ ಮೀನಮೇಷ ಎಣಿಸುತ್ತಿವೆ. ಹಾಲಿ ಶಾಸಕರಿರಲಿ, ಪ್ರಭಾವಿಗಳ ಎದುರು ಹಾಕಿಕೊಂಡಂತಾಗಲಿದೆ ಎಂಬ ಹಿಂಜರಿಕೆ ಕಾಂಗ್ರೆಸ್​ಗೆ ಕಾಡುತ್ತಿದ್ದು, ಆಂತರಿಕವಾಗಿ ಹಲವು ಬಣಗಳ ಮೇಲಾಟದಿಂದ ಉಳಿದ 58 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಗುಡುಗು, ಸಿಡಿಲಾಗಿರುವ ಭವಾನಿ ಹೆಸರು ಕೈಬಿಟ್ಟ ನಂತರ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂದು ದಳಪತಿಗಳು ವಾರೆಗಣ್ಣಿನಿಂದ ನೋಡುತ್ತಿದ್ದಾರೆ. ಬಿ.ಬಿ.ನಿಂಗಯ್ಯ ಅವರ ಮನವೊಲಿಸಿ ಮೂಡಿಗೆರೆಗೆ ಎಂ.ಪಿ.ಕುಮಾರಸ್ವಾಮಿಯನ್ನು ಇಳಿಸಿದ್ದು, ಎಚ್​ಡಿಕೆ ಭರವಸೆ ಮೇರೆಗೆ ಜೆಡಿಎಸ್ ಸೇರಿದ್ದ ಧನಂಜಯ್ ಬಂಡೇಳುವ ಸಾಧ್ಯತೆಯಿದೆ. ಆದರೂ ಕಡೂರು ಕ್ಷೇತ್ರಕ್ಕೆ ವೈಎಸ್​ವಿ ದತ್ತಾ ಅವರ ಹೆಸರನ್ನೇ ಫೈನಲ್ ಮಾಡಿದ್ದಾರೆ. ‘ಸಮರ್ಥ ಅಭ್ಯರ್ಥಿಗಳ’ ಕೊರತೆ ಸರಿದೂಗಿಸಿಕೊಳ್ಳಲು ಬೇರೆ ಪಕ್ಷಗಳ ಅಸುಂತಷ್ಟರಿಗೆ ಮಣೆ ಹಾಕುತ್ತಿದೆ. ಇದೇ ಕಾರಣಕ್ಕೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಮೆ ನಡಿಗೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಯಡಿಯೂರಪ್ಪ ಒಂದು ವಾರ ಮೊಬೈಲ್ ಸ್ವಿಚ್ಡ್​ಆಫ್ ಮಾಡಿದರೆ ರಾಜ್ಯದಲ್ಲಿ ಬಿಜೆಪಿ 50 ಸ್ಥಾನ ದಾಟಲ್ಲ. ಸಿ.ಟಿ. ರವಿ ಬಿಜೆಪಿಗೆ ಮಾರಕವಾಗಿ ಪರಿಣಮಿಸು ತ್ತಾರೆ. ಮುಂದಿನ ಬಾರಿ ಜನರೇ ತಕ್ಕ ಪಾಠ ಕಲಿಸುತ್ತಾರೆ.
|ಎಂ.ಪಿ. ಕುಮಾರಸ್ವಾಮಿಮೂಡಿಗೆರೆ ಶಾಸಕ
ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಹೈಕಮಾಂಡ್​ಗೆ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಸ್ವತಃ ನಾನು ಮತ್ತು ಶೆಟ್ಟರ್ ಒಟ್ಟಿಗೆ ಸೇರಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶೆಟ್ಟರ್ ಅವರಿಗೆ ಟಿಕೆಟ್ ಹಂಚಿಕೆ ವಿಷಯದಲ್ಲಿ ಎಲ್ಲವೂ ಒಂದೆರಡು ದಿನಗಳಲ್ಲಿ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 50ಕ್ಕೂ ಹೆಚ್ಚು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. ಪಕ್ಷಕ್ಕಾಗಿ ದುಡಿದ ಇತರರಿಗೂ ಟಿಕೆಟ್ ನೀಡುವ ಹೊಸ ಪ್ರಯೋಗದಿಂದ ಕೆಲವೆಡೆ ಅಸಮಾಧಾನವಿದೆ. ಒಂದೆರಡು ದಿನಗಳಲ್ಲಿ ಶೇ. 99 ಗೊಂದಲ ಬಗೆಹರಿಸುತ್ತೇವೆ ಎಂದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗುವ ಬಗ್ಗೆ ಈಗಲೂ ಆಶಾವಾದಿಯಾಗಿದ್ದೇನೆ. ಶನಿವಾರ ಟಿಕೆಟ್ ಘೋಷಣೆ ಆಗದೇ ಹೋದರೆ ಮುಂದಿನ ನಡೆಯ ಬಗ್ಗೆ ಯೋಚನೆ ಮಾಡುತ್ತೇನೆ. ಇನ್ನು 12 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಮಾತ್ರ ಘೋಷಣೆಯಾಗಬೇಕಿದೆ. ಮೂರನೇ ಲಿಸ್ಟ್ ಅನ್ನು ಎಲ್ಲಿಯವರೆಗೆ ಕಾಯಲು ಆಗುತ್ತದೆ? ಎಲ್ಲದಕ್ಕೂ ಒಂದು ತಾಳ್ಮೆಯ ಗಡಿ ಇರುತ್ತದೆ.
|ಜಗದೀಶ್ ಶೆಟ್ಟರ್ಮಾಜಿ ಮುಖ್ಯಮಂತ್ರಿ

ಜೆಡಿಎಸ್​ನಲ್ಲಿ ಈಗ ಮೂವರು ಕುಮಾರಸ್ವಾಮಿಗಳು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fifteen =
Remember me
