ಬೆಂಗಳೂರು:ಮಳೆಗಾಲದಲ್ಲಿ ಕಂಡುಬರುತ್ತಿದ್ದ ಡೆಂಘೆ ಪ್ರಕರಣಗಳು ಬಿರುಬಿಸಿಲಿನಲ್ಲೂ ಕಾಡುತ್ತಿದ್ದು, ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 575 ಪ್ರಕರಣ ದೃಢಪಟ್ಟಿವೆ.
ಚಿತ್ರದುರ್ಗ (79), ಮಂಡ್ಯ (54), ಶಿವಮೊಗ್ಗ (46), ತುಮಕೂರು (42), ಕೊಪ್ಪಳ (41) ಹಾಸನ (34), ದಕ್ಷಿಣ ಕನ್ನಡ (34), ವಿಜಯಪುರ (34) ಜಿಲ್ಲೆಯಲ್ಲಿ ಅಧಿಕ ಪ್ರಕರಣ ವರದಿಯಾಗಿವೆ. ಕಳೆದ ವರ್ಷ 16,500ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, 9 ಮಂದಿ ಮೃತಪಟ್ಟಿದ್ದರು. ಈ ವರ್ಷದ ಆರಂಭದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ದೃಢಪಟ್ಟಿವೆ.
ಜ್ವರದ ಹಿನ್ನೆಲೆಯಲ್ಲಿ ಈವರೆಗೆ 11,389 ಶಂಕಿತರನ್ನು ಗುರುತಿಸಲಾಗಿದ್ದು, 6,010 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 575 ಮಂದಿ ಸೋಂಕಿಗೆ ಒಳಗಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಈ ವರ್ಷ ಚಿಕೂನ್‌ಗುನ್ಯಾ ಜ್ವರಕ್ಕೆ ಸಂಬಂಧಿಸಿ 2,151 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 161 ಮಂದಿಗೆ ಜ್ವರ ದೃಢಪಟ್ಟಿವೆ. 18 ಜಿಲ್ಲೆಗಳಲ್ಲಿ ಪ್ರಕರಣ ವರದಿಯಾಗಿದ್ದು, ಶಿವಮೊಗ್ಗದಲ್ಲಿ 35 ಪ್ರಕರಣಗಳು ಖಚಿತಪಟ್ಟಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
