ಚಿಕ್ಕಮಗಳೂರು:ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ 2017, 2018 ಮತ್ತು 2019ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ ಭಾಜನರಾದವರ ಪಟ್ಟಿಯನ್ನು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಬಿಡುಗಡೆ ಮಾಡಿದರು.
ನಗರದಲ್ಲಿ ಭಾನುವಾರ ರಾಜ್ಯೋತ್ಸವ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಲ್ಲಿ ಏಕಲವ್ಯ ಪ್ರಶಸ್ತಿಗೆ 31 ಮಂದಿ, ಜೀವಮಾನ ಸಾಧನೆಗೆ 6, ಕ್ರೀಡಾರತ್ನ ಪ್ರಶಸ್ತಿಗೆ 27 ಮಂದಿ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ 5 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣೆ ನೀತಿ ಸಂಹಿತೆ ಹಾಗೂ ಆಯ್ಕೆ ಸಮಿತಿ ರಚನೆ ಆಗದಿರುವುದು ಸೇರಿ ಬೇರೆ ಬೇರೆ ಕಾರಣಕ್ಕೆ ಎರಡು ವರ್ಷಗಳಿಂದ ಪ್ರಶಸ್ತಿ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಇದೀಗ 2017, 2018 ಹಾಗೂ 19ನೇ ಸಾಲಿಗೆ ಸಂಬಂಧಿಸಿದಂತೆ ಸಹ ಸಾಧಕರನ್ನು ಪ್ರಶಸ್ತಿಗೆ ಗುರುತಿಸಲಾಗಿದೆ ಎಂದು ಹೇಳಿದರು.
ಏಕಲವ್ಯ ಪ್ರಶಸ್ತಿ ಏಕಲವ್ಯನ ಕಂಚಿನ ಪ್ರತಿಮೆ, ಸ್ಕ್ರೋಲ್, ಸಮವಸ್ತ್ರ ಮತ್ತು 2 ಲಕ್ಷ ನಗದು, ಜೀವಮಾನ ಸಾಧನೆ ಪ್ರಶಸ್ತಿಯು ಫಲಕ, ಸಮವಸ್ತ್ರ ಮತ್ತು 1.50 ಲಕ್ಷ ನಗದು, ಕ್ರೀಡಾರತ್ನ ಪ್ರಶಸ್ತಿಗೆ ಪ್ರಶಸ್ತಿ ಫಲಕ, ಸ್ಕ್ರೋಲ್, ಸಮವಸ್ತ್ರ ಮತ್ತು 1 ಲಕ್ಷ ನಗದು, ಕ್ರೀಡಾ ಪೋಷಕ ಪ್ರಶಸ್ತಿಯು ಪ್ರಮಾಣ ಪತ್ರ ಮತ್ತು 5 ಲಕ್ಷ ನಗದು ಒಳಗೊಂಡಿರಲಿದೆ ಎಂದರು.
2017ರಲ್ಲಿ 14 ಮಂದಿಗೆ ಏಕಲವ್ಯ ಪ್ರಶಸ್ತಿ
ಎಸ್.ರೀನಾ ಜಾರ್ಜ್ – ಶಾಂತಿನಗರ ಬೆಂಗಳೂರು (ಅಥ್ಲೆಟಿಕ್ಸ್), ಯು.ಕೆ.ಮಿಥುಲಾ – ಸಂಜಯನಗರ ಬೆಂಗಳೂರು (ಬ್ಯಾಡ್ಮಿಂಟನ್), ಎಂ.ಅವಿನಾಶ್ – ಬಸವನಗುಡಿ ಬೆಂಗಳೂರು (ಈಜು), ಅರ್ಜುನ್ ಹುಲಕುರ್ಕಿ – ಬೆವಿನಮಟ್ಟಿ ಬಾಗಲಕೋಟೆ (ಕುಸ್ತಿ), ಬಿ.ಕೆ.ಅನಿಲ್ ಕುಮಾರ್ – ಸಂಪಂಗಿರಾಮನಗರ ಬೆಂಗಳೂರು (ಬಾಸ್ಕೆಟ್ ಬಾಲ್), ಎನ್.ಉಷಾರಾಣಿ-ಯಶವಂತಪುರ ಬೆಂಗಳೂರು (ಕಬಡ್ಡಿ), ವಿ.ಖುಷಿ – ಸುಬ್ರಹ್ಮಣ್ಯಪುರ ಬೆಂಗಳೂರು (ಟೇಬಲ್ ಟೆನ್ನಿಸ್), ಎಂ.ಎನ್.ಪೊನ್ನಮ್ಮ – ಪೊನ್ನಂಪೇಟೆ ಕೊಡಗು (ಹಾಕಿ), ವಿನಾಯಕ ರೋಖಡೆ -ಶಿಂದೋಳಿ ಬೆಳಗಾವಿ (ವಾಲಿಬಾಲ್), ಎಂ.ದೀಪಾ – ಹಲಸೂರು ಬೆಂಗಳೂರು (ರೋಯಿಂಗ್), ರಾಜು ಅಡಿವೆಪ್ಪ ಭಾಟಿ – ಬಿಳಗಿ ಬಾಗಲಕೋಟೆ (ಸೈಕ್ಲಿಂಗ್), ಎಸ್.ವರ್ಷ – ರಾಜಾಜಿನಗರ ಬೆಂಗಳೂರು (ಬಿಲಿಯರ್ಡ್ಸ್), ಕೆ.ತೇಜಸ್ – ಕೆಂಗೇರಿ ಉಪನಗರ ಬೆಂಗಳೂರು (ಶೂಟಿಂಗ್), ಶೇಖರ್ ವೀರಾಸ್ವಾಮಿ – ಕೆ.ಎಸ್.ಗಾರ್ಡನ್ ಬೆಂಗಳೂರು (ಟೆನ್ನಿಸ್-ಪ್ಯಾರಾ).
2018ರಲ್ಲಿ 9 ಮಂದಿಗೆ ಏಕಲವ್ಯ ಪ್ರಶಸ್ತಿ
ಜಿ.ಕೆ.ವಿಜಯಕುಮಾರಿ – ಕಿಕ್ಕೇರಿ ಮಂಡ್ಯ (ಅಥ್ಲೆಟಿಕ್ಸ್), ಎಚ್.ಎಂ.ಬಾಂಧವ್ಯ -ಕೆ.ಆರ್.ಪೇಟೆ ಮಂಡ್ಯ (ಬಾಸ್ಕೆಟ್ಬಾಲ್), ಫೌವಾದ್ ಮಿರ್ಜಾ – ಕನ್ನಿಂಗ್ ಹ್ಯಾಂ ಕ್ರೆಸೆಂಟ್ ರಸ್ತೆ, ಬೆಂಗಳೂರು (ಈಕ್ವೆಸ್ಟ್ರಿಯನ್), ನಿಖಿನ್ ತಿಮ್ಮಯ್ಯ – ಜೆ.ಪಿ.ನಗರ ಬೆಂಗಳೂರು (ಹಾಕಿ), ಮೇಘಾ ಗೂಗಾಡ್ – ಕುಲಹಳ್ಳಿ ಬಾಗಲಕೋಟೆ (ಸೈಕ್ಲಿಂಗ್), ಶಕೀನಾ ಕಾತೂನ್ – ನಾಯಂಡಹಳ್ಳಿ ಬೆಂಗಳೂರು (ಪ್ಯಾರಾ ಪವರ್ ಲಿಫ್ಟಿಂಗ್), ಗೀತಾ ದಾನಪ್ಪ ಗೊಳ್ – ಮಲ್ಲೇಶ್ವರಂ ಬೆಂಗಳೂರು (ಜೂಡೊ), ಕೆ.ಎಲ್.ರಾಹುಲ್ – ಬೆನ್ಸೋನ್ ಕ್ರಾಸ್ ರಸ್ತೆ ಬೆಂಗಳೂರು (ಕ್ರಿಕೆಟ್), ಶ್ರೀಹರಿ ನಟರಾಜ್ (ಈಜು)
2019ರಲ್ಲಿ 8 ಮಂದಿಗೆ ಏಕಲವ್ಯ ಪ್ರಶಸ್ತಿ
ಅಭಿನಯ ಶೆಟ್ಟಿ – ಕಾರ್ಕಳ ಉಡುಪಿ (ಅಥ್ಲೆಟಿಕ್ಸ್), ಮಯಾಂಕ್ ಅಗರ್ವಾಲ್ -ಹೊಸೂರು ರಸ್ತೆ ಬೆಂಗಳೂರು (ಕ್ರಿಕೆಟ್), ವೇದಾ ಕೃಷ್ಣಮೂರ್ತಿ ಕಡೂರು ತಾಲೂಕು ಚಿಕ್ಕಮಗಳೂರು (ಕ್ರಿಕೆಟ್), ವೆಂಕಪ್ಪ ಕೆಂಕಲಗುತ್ತಿ – ತುಲಸಿಗೆರೆ ಬಾಗಲಕೋಟೆ (ಸೈಕ್ಲಿಂಗ್),  ಪುಲಿಂದ ಲೋಕೇಶ್ ತಿಮ್ಮಣ್ಣ – ವೀರಾಜಪೇಟೆ ಕೊಡಗು (ಹಾಕಿ), ಖುಷಿ ದಿನೇಶ್ – ಕೆ.ಆರ್.ರಸ್ತೆ ಬೆಂಗಳೂರು (ಈಜು), ಪುನೀತ್ ನಂದಕುಮಾರ್ -ವಿಜಯನಗರ ಬೆಂಗಳೂರು (ಪ್ಯಾರಾ ಈಜು), ಅಭಿಷೇಕ್ ಎಂ.ಶೆಟ್ಟಿ – ಪುತ್ತೂರು ದಕ್ಷಿಣ ಕನ್ನಡ(ಅಥ್ಲೆಟಿಕ್ಸ್).
3 ವರ್ಷಕ್ಕೆ ತಲಾ ಇಬ್ಬರು ಜೀವಮಾನ ಸಾಧಕರು
2017: ಎಂ.ಫೆಡ್ರಿಕ್ಸ್ – ಟಿ.ಸಿ.ಪಾಳ್ಯ ಬೆಂಗಳೂರು (ಹಾಕಿ), ಡಾ.ಪಟೇಲ್ ಮಹಮ್ಮದ್ ಇಲಿಯಾಸ್ – ರೂಬಿ ರೆಸಿಡೆನ್ಸಿ ಬೆಂಗಳೂರು (ವಾಲಿಬಾಲ್), 2018: ಸಿ.ಎ.ಕರುಂಬಯ್ಯ – ವಿಜಯನಗರ ಬೆಂಗಳೂರು (ಹಾಕಿ), ಆರ್.ಮಂಜುನಾಥ -ಹೆಬ್ಬಾಳ ಬೆಂಗಳೂರು (ಕಬಡ್ಡಿ). 2019: ಶಾಂತಾ ರಂಗಸ್ವಾಮಿ – ಬನಶಂಕರಿ ಬೆಂಗಳೂರು (ಕ್ರಿಕೆಟ್), ಸಂಜೀವ ಆರ್.ಕನಕ – ಗೋಪಾಲಗೌಡ ಬಡಾವಣೆ ಶಿವಮೊಗ್ಗ (ಖೋಖೋ).
11 ಮಂದಿಗೆ 2017ರ ಕ್ರೀಡಾರತ್ನ ಪ್ರಶಸ್ತಿ
ಎಂ.ವೀಣಾ – ಟಿ.ನರಸೀಪುರ  ಮೈಸೂರು (ಖೋಖೋ), ಕೆ.ಎಸ್.ಕೌಸಲ್ಯ -ಶ್ರೀರಂಗಪಟ್ಟಣ ಮಂಡ್ಯ (ಕಬಡ್ಡಿ), ಜಿ.ಜಯಲಕ್ಷ್ಮೀ – ಬಂಟ್ವಾಳ ದಕ್ಷಿಣ ಕನ್ನಡ (ಬಾಲ್ ಬ್ಯಾಡ್ಮಿಂಟನ್), ಎಚ್.ಎಸ್.ಅನುಶ್ರೀ – ಬೆಳವಿನಕೊಡುಗೆ, ಕೊಪ್ಪ ತಾಲೂಕು ಚಿಕ್ಕಮಗಳೂರು (ಕುಸ್ತಿ), ಎಂ.ರಂಜಿತಾ – ದೊಡ್ಡ ಬಳ್ಳಾಪುರ (ಥ್ರೋಬಾಲ್), ಭೀಮಪ್ಪ ಹಡಪದ – ತುಲಸಿಗೆರೆ, ಬಾಗಲಕೋಟೆ (ಮಲ್ಲಕಂಬ), ಮಹೇಶ್ ಆರ್.ಎರೆಮುನಿ – ಸವಣೂರು ಹಾವೇರಿ (ಆಟ್ಯಾ ಪಾಟ್ಯಾ), ಚಂದ್ರಶೇಖರ ಎಚ್.ಕಲ್ಲಹೊಲದ – ನಕ್ಕರಗೊಂದಿ ಬಾಗಲಕೋಟೆ (ಗುಂಡು ಎತ್ತುವುದು), ಗೋಪಾಲಕೃಷ್ಣ ಪ್ರಭು – ಸೂರತ್ಕಲ್ ದಕ್ಷಿಣ ಕನ್ನಡ (ಕಂಬಳ), ಶ್ರೀನಿವಾಸಗೌಡ-ಮಿಜಾರು ದಕ್ಷಿಣ ಕನ್ನಡ (ಕಂಬಳ), ಮಣಿಕಂದನ್ – ಗಾಂಧಿನಗರ, ಬೆಂಗಳೂರು (ಪ್ಯಾರಾ ಕ್ಲೈಂಬಿಂಗ್).
7 ಮಂದಿಗೆ 2018ರ ಕ್ರೀಡಾರತ್ನ ಪ್ರಶಸ್ತಿ
ಸಂಪತ್ ನಾಗಪ್ಪ ಯರಗಟ್ಟಿ – ರಾಮದುರ್ಗ ಬೆಳಗಾವಿ (ಆಟ್ಯಾಪಾಟ್ಯಾ), ಸುರೇಶ್ ಶೆಟ್ಟಿ – ಬೆಳ್ತಂಗಡಿ ದಕ್ಷಿಣ ಕನ್ನಡ (ಕಂಬಳ), ಎಚ್.ಎನ್.ಶಿವಕುಮಾರ್ – ಹಾಸನ (ಖೋಖೋ), ಬಿ.ಡಿ.ಲಾವಣ್ಯ – ಸೋಮವಾರಪೇಟೆ  ಕೊಡಗು (ಬಾಲ್ ಬ್ಯಾಡ್ಮಿಂಟನ್), ಯಮುನಪ್ಪ ಎಂ.ಕಲ್ಲೋಳಿ – ಗೋಕಾಕ್ ಬೆಳಗಾವಿ (ಮಲ್ಲಕಂಬ), ಮಲ್ಲಪ್ಪಗೌಡ ಪಾಟೀಲ್ – ದಾವಣಗೆರೆ (ಕುಸ್ತಿ), ಐ.ಕಿರಣ್ ಕುಮಾರ್ – ಹೆಬ್ಬಾಳ ಬೆಂಗಳೂರು (ಟೆನ್ನಿಕಾಯ್ಟ್).
9 ಮಂದಿಗೆ 2019ರ ಕ್ರೀಡಾರತ್ನ ಪ್ರಶಸ್ತಿ
ಅನಿತಾ ಬಿಚಗಟ್ಟೆ – ಧಾರವಾಡ (ಆಟ್ಯಾಪಾಟ್ಯಾ), ಎಸ್.ಕೆ.ಪಲ್ಲವಿ – ಮೂಡಬಿದಿರೆ ಮಂಗಳೂರು (ಬಾಲ್ ಬ್ಯಾಡ್ಮಿಂಟನ್), ಸುದರ್ಶನ್ – ಹಾಸನ (ಖೋಖೋ), ಎಸ್.ರಕ್ಷಿತ್ – ಕುಂಬಾರಕೊಪ್ಪಲು ಮೈಸೂರು (ಕಬಡ್ಡಿ), ಅನುಪಮಾ ಎಚ್.ಕೆರಕಲಮಟ್ಟಿ – ಕಲಾದಗಿ ಬಾಗಲಕೋಟೆ (ಮಲ್ಲಕಂಬ), ಕೆ.ಪ್ರವೀಣ್-ಮಂತ್ರಾಡಿ ದಕ್ಷಿಣ ಕನ್ನಡ (ಕಂಬಳ), ಮಂಜುನಾಥ ಎಚ್.-ಶಿವಮೊಗ್ಗ (ಥ್ರೋಬಾಲ್), ಸತೀಶ್ ಪಡತಾರೆ – ಮುಧೋಳ ಬಾಗಲಕೋಟೆ (ಕುಸ್ತಿ), ಅನಿಶಾ ಮಣೆಗಾರ್ – ಆರ್.ಟಿ.ನಗರ ಬೆಂಗಳೂರು (ಟೆನ್ನಿಕಾಯ್ಟ್).
5 ಸಂಸ್ಥೆಗಳಿಗೆ ಕ್ರೀಡಾ ಪೋಷಕ ಪ್ರಶಸ್ತಿ
2018-19ಕ್ಕೆ ಸ್ವರ್ಣ ಫುಟ್ಬಾಲ್ ಅಭಿವೃದ್ಧಿ ಸಂಸ್ಥೆ – ಮಂಡ್ಯ, ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ – ಹಳಿಯಾಳ, 2019-20ಕ್ಕೆ ಮಂಗಳೂರು ವಿಶ್ವ ವಿದ್ಯಾಲಯ – ಮಂಗಳೂರು, 2020-21ಕ್ಕೆ ಸಿದ್ದಗಂಗಾ ಮಠ ಸಂಸ್ಥೆ – ತುಮಕೂರು, ಮಾಣಿಕಪ್ರಭು ಸ್ಪೋರ್ಟ್ಸ್ ಅಕಾಡೆಮಿ-ಬೀದರ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − ten =
Remember me
