ಬೆಂಗಳೂರು:ರಾಜ್ಯ ಸಾರಿಗೆ ಇಲಾಖೆ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಡಿಎಲ್, ಆರ್​ಸಿ ಕಾರ್ಡ್​ಗಾಗಿ ಇನ್ನು ಮುಂದೆ ಆರ್​ಟಿಒ ಕಚೇರಿಗೆ ಅಲೆದಾಡ ಬೇಕಿಲ್ಲ. ಏಕೆಂದರೆ, ಅವುಗಳನ್ನು ಮನೆ ಬಾಗಿಲಿಗೆ ತೆಲುಪಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದೆ.
ಇನ್ನು ಮುಂದೆ ಆರ್​ಸಿ ಕಾರ್ಡ್ ಮತ್ತು ಡಿಎಲ್ ಅನ್ನು ಪೋಸ್ಟಲ್ ಮೂಲಕವೇ ಸಾರಿಗೆ ಇಲಾಖೆ ಮನೆಗಳಿಗೆ ಕೊರಿಯರ್ ಮಾಡಲಿದೆ. ಎನ್ವಲಪ್ ಕವರ್​ನಲ್ಲಿ ಸೂಚನಾ ಫಲಕಗಳೊಂದಿಗೆ ಕೊರಿಯರ್ ವ್ಯವಸ್ಥೆ ಇರಲಿದೆ. ಈ ಸಂಬಂಧ ಅಂಚೆ ಇಲಾಖೆಯೊಂದಿಗೆ ಆರ್​ಟಿಒ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ಸರ್ಕಾರದಿಂದಲೂ ಅನುಮೋದನೆ ಪಡೆದುಕೊಂಡಿದ್ದು, ಸಾರಿಗೆ ಸಚಿವರ‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಆದೇಶ ಮಾಡಲಾಗಿದೆ.
ಮುಖ್ಯ ಅಂಚೆ ಕಚೇರಿ ಆಯುಕ್ತ, ಸಾರಿಗೆ ಮುಖ್ಯ ಆಯುಕ್ತರು ಸಭೆಯಲ್ಲಿ ಭಾಗಿಯಾಗಿ ನೂತನ ವ್ಯವಸ್ಥೆಗೆ ಅಸ್ತು ಎಂದಿದ್ದು, ಇನ್ಮುಂದೆ ಸ್ಪೀಡ್ ಪೋಸ್ಟ್ ಮೂಲಕವೇ ಆರ್​ಸಿ- ಡಿಎಲ್​ ಕಾರ್ಡ್​ಗಳು ಮನೆಬಾಗಿಲಿಗೆ ಶಿಫ್ಟ್ ಆಗಲಿವೆ. ಅರ್ಜಿದಾರರು ಆನ್​ಲೈನ್​ ಮೂಲಕವೂ ದಾಖಲೆಗಳನ್ನು ಟ್ರ್ಯಾಕ್ ಮಾಡಲು ಅವಕಾಶ ಇದೆ.
ಇದನ್ನೂ ಓದಿ:ಊಟದ ಬಳಿಕ ಹೊಟ್ಟೆ ಉಬ್ಬುತ್ತದೆಯೇ? ಈ ಟಿಪ್ಸ್​ ಫಾಲೋ ಮಾಡಿದ್ರೆ ತಕ್ಷಣ ಸಿಗಲಿದೆ ಪರಿಹಾರ!
ಈ ನೂತನ ವ್ಯವಸ್ಥೆ ಬಗ್ಗೆ ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ ನೋಡಿ

ವಿನಾಕಾರಣ ಪ್ರಾಣತೆತ್ತ ದಂಪತಿ: ಆ ಕ್ಷಣ ಅಂಕಣ..

ವಿಶ್ವ ಅಥ್ಲೆಟಿಕ್ಸ್​ನಲ್ಲಿ ಮೊದಲ ದಿನ ಭಾರತೀಯರಿಗೆ ನಿರಾಸೆ

ಏಷ್ಯಾಕಪ್​ನಲ್ಲಿ ಭಾರತ-ಪಾಕ್​ಗೆ ಮುನ್ನ ಲಂಕಾ-ಬಾಂಗ್ಲಾ ಪಂದ್ಯದ ಟಿಕೆಟ್​ ಸೋಲ್ಡ್​ಔಟ್​!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × one =
Remember me
