ಬಾಗಲಕೋಟೆ:ಟಗರು ಕಾಳಗದ ಚಾಂಪಿಯನ್ 7 ಸ್ಟಾರ್ ಸುಲ್ತಾನ್ ಹೆಸರಿನ ಟಗರಿನ ಕುರ್ಬಾನಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬಕ್ರೀದ್​ ಹಿನ್ನೆಲೆ ಟಗರನ್ನು ಬಲಿ ಕೊಡಲು ಮುಂದಾಗಿದ್ದು, ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ.
ಈ ಟಗರು ಸ್ಪರ್ಧೆಗಳಲ್ಲಿ ಲಕ್ಷ ಲಕ್ಷ ರೂಪಾಯಿ ಬಹುಮಾನವನ್ನು ಗೆದ್ದಿದೆ. ಬೈಕ್ ಮತ್ತು ಚಿನ್ನವನ್ನು ಸಹ ಬಾಚಿದೆ. ಗಮನಿಸಬೇಕಾದ ಸಂಗತಿ ಏನೆಂದರೆ, ಡಾಲಿ ಧನಂಜಯ್ ನಿರ್ಮಾಣದ “ಟಗರು ಪಲ್ಯಾ” ಸಿನಿಮಾದಲ್ಲಿಯೂ ಈ ಟಗರು ಅಭಿನಯಿಸಿದೆ. ರಾಜ್ಯಾದ್ಯಂತ ಅಭಿಮಾನಿ ಬಳಗವನ್ನೇ ಹೊಂದಿದೆ.
ಇದನ್ನೂ ಓದಿ:ಹೈದರಾಬಾದ್‌ನಲ್ಲಿ ಚಿನ್ನದ ಬಣ್ಣದ ರೇಂಜ್ ರೋವರ್ ಕಾರ್​​ ಹೊಂದಿರುವ ಏಕೈಕ ನಟ ಮಹೇಶ್ ಬಾಬು
ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ ಮೊಹಮ್ಮದ್ ಯೂನಿಸ್ ಗಡೇದ್ ಎಂಬುವರು ಎರಡೂವರೆ ವರ್ಷಗಳ ಹಿಂದೆ ಟಗರು ಖರೀದಿ ಮಾಡಿದ್ದರು. ರಾಂಪುರ ಗ್ರಾಮದಲ್ಲಿ ಬಸು ಎಂಬುವರಿಂದ 1,88,500 ರೂಪಾಯಿ ಕೊಟ್ಟು ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಮಾಡುವುದಕ್ಕೆಂದು ಟಗರು ಖರೀದಿಸಿದ್ದರು. ಕುರುಬಾನಿ ಮಾಡುವ ಮುನ್ನ ಟಗರಿನ ಕಾಳಗಕ್ಕೆ ಬಿಟ್ಟು ಮೊದಲ ಬಹುಮಾನ ಗೆದ್ದಿದ್ದರು.
ರಾಜ್ಯ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲೂ ಈ 7 ಸ್ಟಾರ್ ಸುಲ್ತಾನ್​ಗೆ ಫ್ಯಾನ್ಸ್ ಇದ್ದಾರೆ. ಇಲ್ಲಿವರೆಗೆ ರಾಜ್ಯಾದ್ಯಂತ 34 ಕಣದಲ್ಲಿ ಈ ಟಗರು ಭಾಗವಹಿಸಿದೆ. ಸತತ 34ಕ್ಕೂ ಕಣದಲ್ಲಿಯೂ ಪ್ರಥಮ ಸ್ಥಾನ ಜಯಿಸಿದೆ. ಇಲ್ಲಿವರೆಗೆ 20 ಲಕ್ಷಕ್ಕೂ ಅಧಿಕ ಹಣ, 1 ಬುಲೆಟ್ ಬೈಕ್, 1 ಹೆಚ್​.ಎಫ್​.ಡಿಲಕ್ಸ್, ಹೆಚ್.ಎಫ್. ಹಂಡ್ರೆಡ್, ಒಂದೂವರೆ ತೊಲೆ ಬಂಗಾರವನ್ನು 7 ಸ್ಟಾರ್ ಸುಲ್ತಾನ್ ಟಗರು ಗೆದ್ದಿದೆ.
ಇದನ್ನೂ ಓದಿ:ಕಣ್ಣಿಗೊಂದು ಸವಾಲ್​: ಈ ಫೋಟೋದಲ್ಲಿರುವ ಬೆಕ್ಕನ್ನು ಪತ್ತೆ ಹಚ್ಚಿ, ಈವರೆಗೂ ಯಾರೂ ಪತ್ತೆ ಹಚ್ಚಿಲ್ಲ!
ರೀಲ್ಸ್ ಹಾಗೂ ಫೇಸ್​ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಟಗರು ಕುರ್ಬಾನಿಗೆ ವಿರೋಧ ವ್ಯಕ್ತವಾಗುತ್ತಿದೆ. ಟಗರನ್ನು ಕುರ್ಬಾನಿಗೆ ಕೊಡಬಾರದೆಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಆದರೆ, ಕುರ್ಬಾನಿಗೆ ಅಂತಲೇ ಖರೀದಿ ಮಾಡಿದ್ದೆ, ಇದೀಗ ಹರಕೆ ತೀರಿಸಲೇಬೇಕು ಎಂದು ಟಗರು ಮಾಲೀಕ ಹೇಳುತ್ತಿದ್ದಾರೆ. ಟಗರು ಕುರ್ಬಾನಿ ಬಗ್ಗೆ ಬಿಎಸ್​ಎಫ್​ ಯೋಧನೊಬ್ಬ ಬೇಸರ ವ್ಯಕ್ತಪಡಿಸಿ ರೀಲ್ಸ್ ಹಾಕಿದ್ದಾರೆ.(ದಿಗ್ವಿಜಯ ನ್ಯೂಸ್​)
ಹಗಲು-ರಾತ್ರಿ ದುಡಿದು ಪತ್ನಿಯ ಓದಿಗೆ ನೆರವು: ಸರ್ಕಾರಿ ಕೆಲಸ ಸಿಗುತ್ತಿದ್ದಂತೆ ಗಂಡನಿಗೆ ಬಿಗ್ ಶಾಕ್!​

ಕೋತಿಗಳ ಹಾವಳಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಕರಡಿ ವೇಷದ ಮೊರೆ ಹೋದ ರೈತರು!

ನೀತಾ ಅಂಬಾನಿ ಧರಿಸಿದ್ದ ಸೀರೆಯನ್ನು ತಯಾರಿಸಲು 1 ತಿಂಗಳು ಬೇಕಾಯ್ತಂತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − seventeen =
Remember me
