ಬೆಂಗಳೂರು:ಕಳೆದ ತಿಂಗಳು ನಡೆದಿದ್ದ ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಚುನಾವಣೆ ಫಲಿತಾಂಶ ಇಂದು(ಫೆ.4) ಪ್ರಕಟವಾಗಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ಎಂ.ಎಸ್​.ರಾಮಯ್ಯ ಕುಟುಂಬದ ರಕ್ಷಾ ರಾಮಯ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಮೊಬೈಲ್​ ಆ್ಯಪ್​ ಮೂಲಕ ಯುವ ಕಾಂಗ್ರೆಸ್​ ಸದಸ್ಯರ ನೋಂದಣಿ ಮತ್ತು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನ ಜಿಲ್ಲಾವಾರು ಮತದಾನ ನಡೆದಿತ್ತು. ಮತದಾನ ಸಂದರ್ಭದಲ್ಲಿ ಆ್ಯಪ್​ ಹ್ಯಾಕ್​ ಆಗಿದೆ ಎಂಬ ಆರೋಪಗಳು ಕೇಳಿಬಂದಿತ್ತು. ಫಲಿತಾಂಶದಲ್ಲಿ ರೋಚಕ ತಿರುವು ಕಂಡು ಬಂದಿದ್ದು, ಮಹತ್ವದ ಬೆಳವಣಿಗೆಯಲ್ಲಿ ಅತಿ ಹೆಚ್ಚು ಮತ ಪಡೆದಿದ್ದ ಶಾಂತಿನಗರ ಶಾಸಕ ಎನ್​.ಎ.ಹ್ಯಾರಿಸ್​ ಪುತ್ರ ಮೊಹಮದ್​ ನಲಪಾಡ್​ ಹ್ಯಾರಿಸ್​ ಅವರನ್ನು ಅನರ್ಹಗೊಳಿಸಲಾಗಿದೆ.ಇದನ್ನೂ ಓದಿರಿತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…
ನಲಪಾಡ್​ ಹ್ಯಾರಿಸ್ ಮೇಲೆ ಕ್ರಿಮಿನಲ್​ ಕೇಸ್​ ಇರುವ ಹಿನ್ನೆಲೆ ವಿರೋಧ ಪಕ್ಷಗಳಿಗೆ ಆಹಾರವಾಗಬಾರದೆಂದು ಚುನಾವಣೆ ಸಮಿತಿ ಈ ತೀರ್ಮಾನ ಮಾಡಿತೆಂದು ಮೂಲಗಳು ತಿಳಿಸಿವೆ. ರಕ್ಷಾ ರಾಮಯ್ಯ ಹೆಚ್ಚು ಮತ ಪಡೆದ ಎರಡನೇ ಅಭ್ಯರ್ಥಿಯಾಗಿದ್ದು, ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಪಡೆದ ಮತಗಳು:ಮೊಹಮದ್​ ನಲಪಾಡ್​- 64203. ರಕ್ಷಾ ರಾಮಯ್ಯ- 57271, ಮಂಜುನಾಥ್​- 18137, ಮಿಥುನ್​ ರೈ- 3104.
ಚುನಾವಣೆ ವೇಳೆ ಮುಂಚೂಣಿ ನಾಯಕರು ಯಾರೂ ಅಭ್ಯರ್ಥಿ ಪರವಾಗಿ ಕಾಣಿಸಿಕೊಳ್ಳಬಾರದೆಂದು ಪಕ್ಷ ಸೂಚನೆ ನೀಡಿತ್ತು. ಈ ನಡುವೆಯೂ ರಕ್ಷಾ ರಾಮಯ್ಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿತ ಎಂದು ಬಿಂಬಿಸಿಕೊಳ್ಳುವಲ್ಲಿ ಪ್ರಯತ್ನ ಮಾಡಿದ್ದರು. ಮಿಥುನ್​ ರೈ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಬೆಂಬಲಿಗರೆಂದೇ ಪಕ್ಷದಲ್ಲಿ ಗುರುತಿಸಲಾಗುತ್ತಿದೆ.
ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

ಸೇನೆಯಿಂದ ಸ್ವಗ್ರಾಮಕ್ಕೆ ಬಂದ ಕೋಲಾರದ ಯೋಧ ಪತ್ನಿಯ ಮಡಿಲಲ್ಲೇ ಪ್ರಾಣಬಿಟ್ಟರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
