ಬೆಂಗಳೂರು:ಆ್ಯಪ್​ನಲ್ಲಿ ಷೇರು ಮಾರುಕಟ್ಟೆಗೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದ ನಾಲ್ವರು ಸೈಬರ್ ಕಳ್ಳರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ. ಬೆಂಗಳೂರಿನ ಎಂ. ಶಶಿಕುಮಾರ್ (25), ಎಂ. ಸಚಿನ್ (26), ಎಸ್.ಕೆ. ಕಿರಣ್ (25) ಮತ್ತು ಸಿ. ಚರಣ್ ರಾಜ್ (26) ಬಂಧಿತರು. 25 ಕೋಟಿ ರೂ. ಮೌಲ್ಯದ ನಗದು, ಮೊಬೈಲ್, ಡಿಜಿಟಲ್ ಸಾಕ್ಷ್ಯ ಸೇರಿ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸೋಮವಾರ ವಿಶೇಷ ಕೋರ್ಟ್​ಗೆ ಹಾಜರುಪಡಿಸಿ ಏಳು ದಿನ ಕಸ್ಟಡಿಗೆ ಪಡೆಯಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಭೀಕರ ಅಪಘಾತ; ಬೈಕ್​ಗೆ ಗುದ್ದಿ ಫ್ಲೈಓವರ್​ನಿಂದ ಕೆಳಗೆ ಬಿದ್ದ ಕಾರು
ಫೇಸ್​ಬುಕ್, ಇನ್​ಸ್ಟಾಗ್ರಾಂ ಸೇರಿ ಜಾಲತಾಣದಲ್ಲಿ ಅಮಾಯಕರಿಗೆ ಬಲೆಬೀಸಿ ಸ್ಟಾಕ್ ಮಾರ್ಕೆಟ್​ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಜಾಹೀರಾತು ನೀಡುತ್ತಿದ್ದರು. ಲಿಂಕ್ ಮೇಲೆ ಕ್ಲಿಕ್ ಮಾಡುವರ ಮೊಬೈಲ್ ನಂಬರ್ ಅನ್ನು ಟೆಲಿಗ್ರಾಂ ಅಥವಾ ವಾಟ್ಸ್​ಆಪ್ ಗ್ರೂಪ್ ಸದಸ್ಯರಾಗಿ ಮಾಡಿಕೊಳ್ಳುತ್ತಿದ್ದರು. ಬಳಿಕ ಆಪ್ ಡೌನ್​ಲೋಡ್ ಮಾಡಿಸಿ ಅದರಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನ ನೀಡುತ್ತಿದ್ದರು. ಹೂಡಿಕೆ ಮಾಡಿದ ಹಣ ದೋಚುತ್ತಿದ್ದ ಸೈಬರ್ ಕಳ್ಳರು, ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡುತ್ತಿದ್ದರು. ಬಂಧಿತರ ವಿರುದ್ಧ ಮನಿ ಲ್ಯಾಂಡರಿಂಗ್ ಆಕ್ಟ್-2002ರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ.
ಇದೇ ರೀತಿಯಾಗಿ ವಿವಿಧ ರಾಜ್ಯಗಳಲ್ಲಿ ಹಲವು ಎಫ್​ಐಆರ್ ದಾಖಲಾಗಿವೆ. ಹರಿಯಾಣದ ಫರಿದಾಬಾದ್​ನ ಯುವಕನೊಬ್ಬ, ನಕಲಿ ಆಪ್ ಮೂಲಕ ಷೇರು ಮಾರ್ಕೆಟ್​ನಲ್ಲಿ 7.59 ಕೋಟಿ ರೂ. ಹೂಡಿಕೆ ಮಾಡಿದ್ದನು. ವಾಟ್ಸ್​ಆಪ್​ನಲ್ಲಿ ವಿವಿಧ ಗ್ರೂಪ್​ಗಳಿಗೆ ಯುವಕನನ್ನು ಸದಸ್ಯನಾಗಿ ಮಾಡಿಕೊಂಡು ಆಮಿಷವೊಡ್ಡಿ ಹೂಡಿಕೆ ಮಾಡಿಕೊಂಡು ವಂಚಿಸಿದ್ದರು. ಇದೇ ರೀತಿ ಉತ್ತರ ಪ್ರದೇಶದ ನೋಯ್ಡಾ ಮೂಲದ ವ್ಯಕ್ತಿಯಿಂದ 9.09 ಕೋಟಿ ರೂ. ಮತ್ತು ಪಂಜಾಬ್​ನ ಬಟಿಂಡಾ ಮೂಲದ ವ್ಯಕ್ತಿಯಿಂದ 5.93 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದರು. ದೇಶದ ವಿವಿಧೆಡೆ ವಂಚನೆ ಮಾಡಿರುವ ಸಂಬಂಧ ಎಫ್​ಐಆರ್​ಗಳು ದಾಖಲಾಗಿ ರುವುದು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಫಾಫ್ ಡುಪ್ಲೆಸಿಸ್ ಉಳಿಸಿಕೊಳ್ಳಲ್ಲ RCB! ಅದಕ್ಕೆ ಈ ಮೂರು ಅಂಶಗಳೇ ಕಾರಣ

14 ತಿಂಗಳು ಕಿಡ್ನ್ಯಾಪರ್​ ಜತೆಗಿತ್ತು 2 ವರ್ಷದ ಕೂಸು! ಅರೆಸ್ಟ್​ ಆದ್ರೂ ತಾಯಿ ಬಳಿ ಹೋಗದೆ ಆತನನ್ನೇ ತಬ್ಬಿಡಿದು ಕಣ್ಣೀರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − one =
Remember me
