ಬೆಂಗಳೂರು:ಬಸ್​ನಲ್ಲಿ ಪ್ರಯಾಣಿಸುವ ಒಂಟಿ ಮಹಿಳೆಯರೇ ಎಚ್ಚರ! ನಿಮ್ಮ ಪಕ್ಕದ ಸೀಟಿನಲ್ಲೇ ಕೂರಲು ಬರ್ತಾರೆ ಖತರ್ನಾಕ್​ ಕಳ್ಳಿಯರು. ನೋಡೋಕೆ ಮುಗ್ಧರಂತೆ ಕಾಣುವ ಅವರ ಕೈಯಲ್ಲೊಂದು ಮಗು ಕೂಡ ಇರುತ್ತೆ… ಕೆಲವೇ ಕ್ಷಣದಲ್ಲಿ ನಿಮ್ಮ ಹಣ-ಚಿನ್ನಾಭರಣ ಲೂಟಿ ಮಾಡಿಕೊಂಡು ಪರಾರಿಯಾಗ್ತಾರೆ…
ಹೌದು, ಪ್ರಯಾಣಿಕರ ಸೋಗಿನಲ್ಲಿ ಬಸ್​ ಹತ್ತುವ ಕಳ್ಳರ ಗ್ಯಾಂಗ್​ಗೆ ಒಂಟಿ ಮಹಿಳೆಯರೇ ಟಾರ್ಗೆಟ್​. ಇಂತಹದ್ದೇ ಪ್ರಕರಣದಲ್ಲಿ ಆದಿಲ್ ಪಾಷ (26) ಎಂಬಾತನನ್ನು ಆರ್.ಎಂ.ಸಿ. ಯಾರ್ಡ್ ಪೊಲೀಸರು ಬುಧವಾರ ಬಂಧಿಸಿದ್ದು, ಬಸ್​ನಲ್ಲಿ ಕಳ್ಳನ ಮಾಡುತ್ತಿದ್ದ ತನ್ನ ಗ್ಯಾಂಗ್​ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಅಂದ ಹಾಗೇ ಈ ಗ್ಯಾಂಗ್​ನ್ನು ಈತನೇ ಮಾನಿಟರ್​ ಮಾಡುತ್ತಿದ್ದ!ಇದನ್ನೂ ಓದಿರಿಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್​ ಸುರಿದು ಬೆಂಕಿಯಿಟ್ಟು ವಿಕೃತಿ ಮೆರೆದ ಗಂಡ-ಅತ್ತೆ!
ಬಸ್ ಹತ್ತುತ್ತಿದ್ದ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆದಿಲ್ ಪಾಷ, ಈ ಕೃತ್ಯಕ್ಕೆ ಇಬ್ಬರು ಮಹಿಳೆಯರನ್ನು ಬಳಸಿಕೊಂಡಿದ್ದ. ಈ ಮಹಿಳೆಯರು ಕಂಕುಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಪಕ್ಕಾ ಗೃಹಿಣಿಯರಂತೆ ಬಸ್​ ಹತ್ತುತ್ತಿದ್ದರು. ಇವರನ್ನು ಒಂಟಿ ಮಹಿಳೆ ಕುಳಿತ್ತಿದ್ದ ಪಕ್ಕದ ಸೀಟಿನಲ್ಲೇ ಆದಿಲ್​ ಪಾಷ ಕೂರಿಸುತ್ತಿದ್ದ. ಪ್ರಯಾಣಿಸುವ ಮಹಿಳೆಯ ಬ್ಯಾಗ್​ ಮೇಲೆ ಬೇಕಂತಲೇ ಚಿಲ್ಲರೆ ಕಾಸನ್ನು ಬೀಳಿಸುತ್ತಿದ್ದ ಕಳ್ಳಿಯರು ಅದನ್ನು ತೆಗೆದುಕೊಳ್ಳುವ ನೆಪದಲ್ಲಿ ಪ್ರಯಾಣಿಕಳ ಬ್ಯಾಗಿನಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚುತ್ತಿದ್ದರು. ಕಳ್ಳಿಯರ ಕೈಯಲ್ಲಿ ಮಗು ಇರುತ್ತಿದ್ದರಿಂದ ಪ್ರಯಾಣಿಸುವವರಿಗೂ ಅನುಮಾನ ಬರುತ್ತಿರಲಿಲ್ಲ. ತಾವು ಅಂದುಕೊಂಡದ್ದನ್ನು ಸಾಧಿಸಿದ ಕೂಡಲೇ ಮುಂದಿನ ನಿಲ್ದಾಣದಲ್ಲೇ ಬಸ್​ನಿಂದ ಇಳಿದುಕೊಂಡು ಬಿಡುತ್ತಿದ್ದರು. ಕದ್ದ ಮಾಲನ್ನು ಆದಿಲ್ ಪಾಷಗೆ ಆ ಕಳ್ಳಿಯರು ಕೊಡುತ್ತಿದ್ದರು.
ಆರೋಪಿ ಆದಿಲ್ ಪಾಷ ಈ ಹಿಂದೆಯೂ ಅನೇಕ ಕಡೆ ಕಳ್ಳತನ ಮಾಡಿ ಜೈಲು ಸೇರಿದ್ದ. ಈತನೊಂದಿಗೆ ಕುಕೃತ್ಯಕ್ಕೆ ಇಳಿದಿದ್ದ ಕಳ್ಳಿಯರಿಬ್ಬರು ತಲೆಮರೆಸಿಕೊಂಡಿದ್ದಾರೆ. ಬಂಧಿತನಿಂದ 10 ಲಕ್ಷ ರೂ. ಮೌಲ್ಯದ 155 ಗ್ರಾಂ ಚಿನ್ನ ಹಾಗೂ 2 ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಮಾಚಾರ ನೆಪದಲ್ಲಿ ವಿಧವೆ ಬಳಿ 8.12 ಕೋಟಿ ಹಣ ಪೀಕಿದ, ಖಾಸಗಿ ವಿಡಿಯೋ ಇಟ್ಟುಕೊಂಡು ಹಿಂಸಿಸಿದ!

ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅರ್ಚಕನಿಗೆ 14 ವರ್ಷ ಜೈಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 13 =
Remember me
