| ಅರವಿಂದ ಅಕ್ಲಾಪುರಶಿವಮೊಗ್ಗಹುಣಸೋಡು ಸ್ಪೋಟದ ಬಳಿಕ ಗಣಿಗಾರಿಕೆ ಹಾಗೂ ಕಾಯ್ದೆ ಕುರಿತು ಅಗೆದಷ್ಟೂ ಲೋಪಗಳು ಸ್ಪೋಟಗೊಳ್ಳುತ್ತಿವೆ. ಕಾಯ್ದೆಯಲ್ಲಿನ ಸಡಿಲಿಕೆಗಳೇ ಅಕ್ರಮಕ್ಕೆ ದಾರಿಯಾಗುತ್ತಿವೆ ಎಂಬ ಅಂಶಗಳು ಗೋಚರಿಸುತ್ತಿವೆ.
ಸ್ಪೋಟಕ ಸಾಗಣೆ ಸಂಬಂಧ ರಾಜ್ಯ ಸರ್ಕಾರಗಳು ಯಾವುದೇ ನಿಯಂತ್ರಣ ಹೊಂದಿಲ್ಲ. ಗಣಿಗಾರಿಕೆಗೆ ಬಳಸುವ ಸ್ಪೋಟಕಗಳ ಮಾರಾಟದ ವೇಳೆಯಲ್ಲಷ್ಟೇ ಒಂದಷ್ಟು ನಿರ್ಬಂಧ ಪಾಲನೆಯಾಗುತ್ತದೆ. ಒಮ್ಮೆ ಸ್ಪೋಟಕ ವ್ಯಾಪಾರವಾಯಿತೆಂದರೆ ಅದು ಎಲ್ಲಿ ಹೋಗುತ್ತದೆ? ಹೇಗೆ ಬಳಕೆಯಾಗುತ್ತದೆ ಎಂಬ ಬಗ್ಗೆ ಯಾರಿಗೂ ಮಾಹಿತಿಯೇ ಸಿಗುವುದಿಲ್ಲ!
ಇದೇ ಕಾರಣದಿಂದ ದೂರದ ಅನಂತಪುರಂನಿಂದ ಒಂದು ಲಾರಿ ಭರ್ತಿ ಸ್ಪೋಟಕ ಸರಾಗವಾಗಿ ಶಿವಮೊಗ್ಗ ತಲುಪಿತು. ಅವಘಡ ಸಂಭವಿಸದಿದ್ದರೆ ಇನ್ನೂ ಒಂದಷ್ಟು ಸ್ಪೋಟಕ ಬರುವ ಸಾಧ್ಯತೆಗಳಿತ್ತು.
ಮಾರಾಟ ಸಕ್ರಮ-ಬಳಿಕ ಅಕ್ರಮ:ಕಲ್ಲು ಕ್ವಾರಿಗಳಿಗೆ ಬಳಸುವ ಸ್ಪೋಟಕಗಳನ್ನು ಕೇವಲ ಪರವಾನಗಿ ಹೊಂದಿದ ವ್ಯಕ್ತಿಗಳಿಗೆ ಸಕ್ರಮವಾಗಿಯೇ ಮಾರಾಟ ಮಾಡಲಾಗುತ್ತದೆ. ಬಳಿಕ ಅಲ್ಲಿಯೂ ಮಧ್ಯವರ್ತಿಗಳು ಸೃಷ್ಟಿಯಾಗುತ್ತಾರೆ. ಕಳೆದ ವಾರ ಶಿವಮೊಗ್ಗಕ್ಕೆ ಸ್ಪೋಟಕ ಬಂದಿದ್ದೂ ಮಧ್ಯವರ್ತಿ ಮೂಲಕವೇ. ಪ್ರವೀಣ್ ಎಂಬಾತನೇ ಏಜೆಂಟ್ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಲಾರಿಯಲ್ಲಿ ಬಂದಿದ್ದ ಅಷ್ಟೂ ಸ್ಪೋಟಕ ಒಂದೇ ಕ್ವಾರಿಗೆಂದು ತಂದಿರಲಿಲ್ಲ. ಬೇರೆಡೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುವವರಿಗೆ ಸಕ್ರಮವಾಗಿ ಸ್ಪೋಟಕ ಖರೀದಿಸಿ ತರಲಾಗಿತ್ತು. ಒಂದು ವೇಳೆ ಸಾಗಣೆ ಸಮಯದಲ್ಲಿ ಇದನ್ನು ತಪಾಸಣೆ ಮಾಡಿದ್ದರೂ ಸಾಗಣೆ ಮಾಡುವವರ ಬಳಿ ಸಕ್ರಮದ ಬಿಲ್ ಇತ್ತು. ಹೀಗಾಗಿ ಕಾನೂನು ಕ್ರಮ ಜರುಗಿಸಲು ಸಾಧ್ಯವಾಗುತ್ತಿರಲಿಲ್ಲ.
ಶಿವಮೊಗ್ಗದಲ್ಲಿ ಸುಮಾರು 200 ಕಲ್ಲು ಕ್ವಾರಿ, ಕ್ರಷರ್​ಗಳಿವೆ. ಇವುಗಳ ಪೈಕಿ 20ಕ್ಕೂ ಹೆಚ್ಚು ಕ್ವಾರಿಗಳು ಸ್ಪೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಪಡೆದಿವೆ. ಆದರೆ ಇವು ಕ್ರಮಬದ್ಧವಾಗಿ ಸ್ಪೋಟಕ ಬಳಸುತ್ತಿವೆಯೇ ಎಂಬುದನ್ನು ಪರಿಶೀಲಿಸುವ ಅವಕಾಶ ಜಿಲ್ಲಾ ಮಟ್ಟದ ಅಧಿಕಾರಿಗಳಿಗಿಲ್ಲ. ಕೇಂದ್ರ ಸರ್ಕಾರದ ಅಧಿಕಾರಿಗಳೇ ಇದನ್ನು ಗಮನಿಸಬೇಕು. ಆದರೆ ಈ ಅಧಿಕಾರಿಗಳ ಕೇಂದ್ರ ಸ್ಥಾನ ಚಿತ್ರದುರ್ಗ. ಹೀಗಾಗಿ ಶಿವಮೊಗ್ಗದಲ್ಲಿ ನಿರಾತಂಕವಾಗಿ ಸ್ಪೋಟಕ ಬಳಸಲಾಗುತ್ತಿತ್ತು.
ಸಾಗಣೆ ಮಾನದಂಡ ನಿರ್ಲಕ್ಷ:ಸ್ಪೋಟಕ ಸಾಗಣೆಗೂ ಹಲವು ಮಾನದಂಡಗಳಿವೆ. ನಿಗದಿಪಡಿಸಿದ ವಾಹನಗಳಲ್ಲಿ, ನಿರ್ದಿಷ್ಟ ಪ್ರಮಾಣದ ಸ್ಪೋಟಕವನ್ನಷ್ಟೇ ಸಾಗಣೆ ಮಾಡಬೇಕು. ಆದರೆ ಇದನ್ನು ಗಮನಿಸುವವರೇ ಇಲ್ಲ. ಮಾರ್ಗಸೂಚಿ ಪ್ರಕಾರ ಸ್ಪೋಟಕ ಸಾಗಿಸಿದರೆ ಸಾಗಣೆ ವೆಚ್ಚ ತುಸು ಹೆಚ್ಚಾಗುತ್ತದೆ. ಕೇವಲ ಲಾಭದ ಮೇಲೆ ಕಣ್ಣಿಟ್ಟ ಕ್ವಾರಿ ಮಾಲೀಕರು ಮಾರ್ಗಸೂಚಿ ಗಾಳಿಗೆ ತೂರಿ ಕಡಿಮೆ ಖರ್ಚಿನಲ್ಲಿ ಸ್ಪೋಟಕ ತರಿಸಿಕೊಳ್ಳುತ್ತಾರೆ. ಅದರ ಪರಿಣಾಮವೇ ಹುಣಸೋಡು ಸ್ಫೋಟ ಎನ್ನುತ್ತಾರೆ ಅಧಿಕಾರಿಗಳು.
ಕಾರ್ವಿುಕರ ವಿಷಯದಲ್ಲೂ ಅಸಡ್ಡೆ:ಕ್ವಾರಿ ಹಾಗೂ ಕ್ರಷರ್ ಮಾಲೀಕರು ಕೇವಲ ಸ್ಪೋಟಕ ಸಾಗಣೆ ವಿಷಯದಲ್ಲಿ ಮಾತ್ರವಲ್ಲ ಕಾರ್ವಿುಕರ ವಿಷಯದಲ್ಲೂ ಅಸಡ್ಡೆ ತೋರುತ್ತಿರುವ ಅಂಶ ಬಯಲಾಗಿದೆ. ಹೊರ ರಾಜ್ಯಗಳ ಕಾರ್ವಿುಕರನ್ನು ಕ್ವಾರಿ ಹಾಗೂ ಕ್ರಷರ್​ನಲ್ಲಿ ದುಡಿಸಿಕೊಳ್ಳಲಾಗುತ್ತದೆ. ಹೀಗೆ ಕಾರ್ವಿುಕರನ್ನು ಕರೆತರುವ ಮಾಫಿಯಾದ್ದು ಸ್ಪೋಟಕಕ್ಕಿಂತಲೂ ಕರಾಳ ಹಸ್ತ.
ಹೊರ ರಾಜ್ಯಗಳಿಂದ ಬರುವ ಕಾರ್ವಿುಕರ ಬಗ್ಗೆ ಮಾಲೀಕರ ಬಳಿ ಯಾವುದೇ ದಾಖಲೆಗಳಿರುವುದಿಲ್ಲ. ಕಾರ್ವಿುಕರ ಆಧಾರ್ ಕಾರ್ಡ್, ಬೇರೆ ಯಾವುದೇ ಗುರುತಿನ ಚೀಟಿಯನ್ನೂ ಪಡೆಯುವುದಿಲ್ಲ. ಯಾವುದಾದರೂ ಅವಘಡ ಸಂಭವಿಸಿದರೆ ಕಾರ್ವಿುಕನ ವಿಳಾಸ ಪತ್ತೆ ಮಾಡುವುದೇ ಕಷ್ಟದ ಕೆಲಸ. ಹೊರ ರಾಜ್ಯದ ಕಾರ್ವಿುಕರಿಗೆ ಕಡಿಮೆ ವೇತನ ನೀಡಿ ಹೆಚ್ಚು ದುಡಿಸಿಕೊಳ್ಳುತ್ತಾರೆ. ಕಾರ್ವಿುಕರು ಅವಘಡದಿಂದ ಜೀವ ಕಳೆದುಕೊಂಡರೆ ಕ್ವಾರಿ, ಕ್ರಷರ್ ಮಾಲೀಕರು ಒಂದಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಾರೆ.
ಸ್ಪೋಟಕ ಸಾಗಣೆ ಕಾಯ್ದೆ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು. ಹೀಗಾಗಿ ಸ್ಪೋಟಕ ಖರೀದಿಸಿದ್ದು ಯಾರು? ಯಾವ ಉದ್ದೇಶಕ್ಕೆ ಖರೀದಿಸಿದ್ದಾರೆ? ಪ್ರಮಾಣವೆಷ್ಟು? ಎಲ್ಲಿ ಖರೀದಿಸಿ ಅಂತಿಮವಾಗಿ ಎಲ್ಲಿಗೆ ತಲುಪುತ್ತದೆ? ಎಂಬ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಇದನ್ನು ತಡೆಯುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.| ಕೆ.ಬಿ.ಶಿವಕುಮಾರ್ಜಿಲ್ಲಾಧಿಕಾರಿ
ಸ್ಪೋಟಕ ಸಾಗಣೆ, ಸಂಗ್ರಹದ ಜತೆಗೆ ಕ್ವಾರಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ವಿುಕರಿಗೆ ಸೂಕ್ತ ಪರಿಹಾರ ಒದಗಿಸುವುದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಕಾರ್ವಿುಕ ಇಲಾಖೆಗೂ ಇಲ್ಲಿ ಹೆಚ್ಚು ಅಧಿಕಾರ ಚಲಾಯಿಸುವ ಅವಕಾಶವಿಲ್ಲ. ಕ್ವಾರಿಯ ಕಾರ್ವಿುಕರು ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ವಲಸೆ ಹೋಗುವುದರಿಂದ ಅವರನ್ನು ಗುರುತಿಸುವುದೂ ಕಷ್ಟ.| ವಿಶ್ವನಾಥ್ಕಾರ್ವಿುಕ ಇಲಾಖೆ ಜಿಲ್ಲಾಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
