|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಕಟ್ಟಡ ಬೈಲಾ ಉಲ್ಲಂಘಿಸಿರುವ ವಸತಿ ಸಮುಚ್ಛಯ, ಅನಧಿಕೃತ ಹಾಗೂ ಅಕ್ರಮ ಬಡಾವಣೆಗಳಿಗೆ ಬೇಕಾಬಿಟ್ಟಿಯಾಗಿ ಸಾಲ ನೀಡುತ್ತಿರುವುದಕ್ಕೆ ಬ್ರೇಕ್ ಹಾಕಬೇಕು ಎಂದು ಸರ್ಕಾರ ಬ್ಯಾಂಕ್​ಗಳಿಗೆ ಎಚ್ಚರಿಕೆ ನೀಡಿದೆ.
ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಎಲ್ಲ ಬ್ಯಾಂಕ್​ಗಳ ಮುಖ್ಯಸ್ಥರಿಗೆ ವಿವರವಾದ ಪತ್ರ ಬರೆದು, ಈ ರೀತಿ ಸಾಲ ನೀಡುವುದರಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಸೂಕ್ಷ್ಮವಾಗಿ ಗಮನ ಸೆಳೆದಿದ್ದಾರೆ. ಯಾವುದೋ ಆಮೀಷ ಅಥವಾ ಒತ್ತಡ, ಶಿಫಾರಸ್ಸಿಗೆ ಒಳಗಾಗಿ ಅಕ್ರಮ ಯೋಜನೆಗಳಿಗೆ ಸಾಲ ನೀಡುವುದರಿಂದ ಜನ ಸಾಮಾನ್ಯರು ಮುಂದೆ ಸಮಸ್ಯೆ ಎದುರಿಸುಂತಾಗುತ್ತದೆ. ಅಲ್ಲದೇ ಜನರ ಹಣ ವ್ಯಾಜ್ಯ ರೂಪದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದ್ದು, ಮುಂದೆ ನಿಯಮಬದ್ಧ ಆಸ್ತಿಗಳ ಅಭಿವೃದ್ಧಿಗೆ ಮಾತ್ರ ಹಣಕಾಸು ನೆರವು ನೀಡಬೇಕೆಂದು ಹಣಕಾಸು ಇಲಾಖೆ ತಾಕೀತು ಮಾಡಿದೆ.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಬೆಂಗಳೂರು ಕೇಂದ್ರವು ಅಧ್ಯಯನ ನಡೆಸಿ, ಅಕ್ರಮ ಹಾಗೂ ಅನಧಿಕೃತ ಬಡಾವಣೆ, ಕಟ್ಟಡ ನಿರ್ವಣಕ್ಕೆ ಬ್ಯಾಂಕ್​ಗಳು ಸಾಲ ಕೊಡುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿತ್ತು. ಇತ್ತೀಚೆಗೆ ಇಂತಹ 35 ಸಾಲ ಕೊಟ್ಟ ಉದಾಹರಣೆ ಪತ್ತೆಯಾಗಿದ್ದನ್ನು ಸರ್ಕಾರದ ಗಮನಕ್ಕೂ ತಂದಿತ್ತು. ಬ್ಯಾಂಕಿನಲ್ಲಿರುವ ಹಣ ಜನರದ್ದು. ಅದು ನ್ಯಾಯಬದ್ಧವಾಗಿ ಬಳಕೆಯಾಗಬೇಕು. ಆದರೆ ಅಕ್ರಮಕ್ಕೆ ಆರ್ಥಿಕ ನೆರವು ನೀಡುವುದು ಸರಿಯಲ್ಲ, ಹೀಗೆ ಮುಂದುವರಿದರೆ ಪರಿಣಾಮ ಬೇರೆ ರೀತಿಯಲ್ಲಿರಲಿದೆ ಎಂದು ವಾದ ಮುಂದಿಟ್ಟಿತ್ತು. ಅಷ್ಟೇ ಅಲ್ಲದೆ ಅಧ್ಯಯನ ವರದಿಯೊಂದನ್ನು ಪ್ರಸ್ತಾಪಿಸಿ, ಶೇ.95 ಕಟ್ಟಡ ನಿಯಮ ಉಲ್ಲಂಘಿಸಿ ನಿರ್ವಣವಾಗಿದೆ. ಪರಿಸ್ಥಿತಿ ಹೀಗಿರುವಾಗ ತಕ್ಷಣವೇ ಅಕ್ರಮ ಕಟ್ಟಡ ಅಥವಾ ಬಡಾವಣೆಗೆ ಸಾಲ ಕೊಡುವುದನ್ನು ನಿಲ್ಲಿಸಲು ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿ ಯರ್ಸ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿತ್ತು. ಈ ಕೋರಿಕೆಯನ್ನು ಕೂಲಂಕಷವಾಗಿ ಪರಿಗಣಿಸಿದ ಮುಖ್ಯಕಾರ್ಯದರ್ಶಿ, ಹಣಕಾಸು ಇಲಾಖೆಗೆ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಇದೀಗ ಹಣಕಾಸು ಇಲಾಖೆ ಕೆಲವು ಅಂಶಗಳನ್ನು ಪಟ್ಟಿ ಮಾಡಿ ಬ್ಯಾಂಕುಗಳ ಗಮನ ಸೆಳೆದಿದೆ.
ಫ್ಲೋರ್ ಏರಿಯಾ ರೇಷಿಯೋ (ಎಫ್​ಎಆರ್) ಉಲ್ಲಂಘನೆ ಮಾಡಿ ನಿರ್ವಣಗೊಂಡ ವಸತಿ ಸಮುಚ್ಛಯ ಅಥವಾ ಕಟ್ಟಡಗಳು, ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಅನುಮತಿ ಪಡೆಯದೆ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಿರುವುದು, ಡಿಸಿ ಕನ್ವರ್ಷನ್​ಗಳನ್ನೇ ಅನುಮತಿ ಎಂದು ತಪ್ಪಾಗಿ ಪರಿಭಾವಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಲೇ ಔಟ್​ಗಳ ನಿರ್ಮಾಣ ಮಾಡಿದ ಪ್ರಕರಣಗಳನ್ನು ಮುಖ್ಯ ಕಾರ್ಯದರ್ಶಿ ಪಟ್ಟಿ ಮಾಡಿ ಬ್ಯಾಂಕ್​ಗಳ ಮುಂದಿಟ್ಟಿದ್ದಾರೆ.
ನಿಯಮ ಉಲ್ಲಂಘನೆಗೂ ಮಣೆ!:ಮಹತ್ವದ ವಿಚಾರವೆಂದರೆ, ಗ್ರಾಮ ಪಂಚಾಯಿತಿ ಅಧ್ಯಕ್ಷರ ಅನುಮತಿ ಪಡೆಯಲಾಗಿದೆ ಎಂದು ಅಭಿವೃದ್ಧಿ ಚಟುವಟಿಕೆ ಮುಂದುವರಿಸುವುದು ಮತ್ತೊಂದು ರೀತಿಯ ಅಕ್ರಮವಾಗಿರುತ್ತದೆ. ಸ್ಥಳೀಯ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಜವಾಬ್ದಾರಿ ನೀಡ ಲಾಗಿದ್ದರೂ ಪಂಚಾಯಿತಿ ಅಧ್ಯಕ್ಷರ ಅನುಮತಿ ಪತ್ರ ಪಡೆದಿರುವ ಉದಾಹರಣೆಗಳಿವೆ. ಅಲ್ಲದೆ, ನಿಯಮ ಉಲ್ಲಂಘನೆಗಳಿದ್ದರೂ ತಾಂತ್ರಿಕ ನಿರ್ವಹಣೆ ಮಾಡುವ ಸಿವಿಲ್ ಇಂಜಿನಿಯರ್​ಗಳು ಪ್ರಮಾಣ ಪತ್ರ ನೀಡುತ್ತಿದ್ದಾರೆ ಎಂಬುದನ್ನೂ ಎಸಿಎಸ್ ಉಲ್ಲೇಖಿಸಿ ದ್ದಾರೆ. ಅಂತಿಮವಾಗಿ ಯಾವುದೇ ಕಾರಣಕ್ಕೂ ಅಡ್ಡ ದಾರಿಯಲ್ಲಿ ಹಣಕಾಸು ನೆರವು ಪಡೆದುಕೊಳ್ಳಲು ಬರುವ ಅಕ್ರಮ ಬಡಾವಣೆ ಹಾಗೂ ನಿರ್ಮಾಣ ಚಟುವಟಿಕೆಗೆ ಅವಕಾಶ ಕೊಡಕೂಡದು, ಮುನ್ನೆಚ್ಚರಿಕೆ ವಹಿಸಿ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.
ಓವರ್​ ಹೆಡ್​ ಟ್ಯಾಂಕ್​​ ಮೇಲೆ ಕಾಲೇಜು ಯುವಕ-ಯುವತಿಯರ ಮೋಜು ಮಸ್ತಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
