ಬೆಂಗಳೂರು:ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ 2019-20ರಲ್ಲಿ ಅಧಿಸೂಚನೆ ಹೊರಡಿಸಿ ಈಗಾಗಲೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಿದ್ದರೂ ಈವರೆಗೆ ನೇಮಕಾತಿ ಪೂರ್ಣಗೊಂಡಿಲ್ಲ.
ಅಗ್ನಿ ಶಾಮಕ, ಅಗ್ನಿ ಶಾಮಕ ಚಾಲಕ ಮತ್ತು ಚಾಲಕ ತಂತ್ರಜ್ಞ ಹುದ್ದೆಗಳು ಸೇರಿ 1244 ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ನೌಕರಿ ಬಯಸಿ ಸಾವಿರಾರು ಮಂದಿ 250 ಮತ್ತು 100 ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದರು. ಆಯ್ಕೆ ವಿಧಾನ ದೈಹಿಕ, ವಾಹನ ಚಾಲನ ಮತ್ತು ವೈದ್ಯಕೀಯ ಪರೀಕ್ಷೆ ಎಂದು ಮೂರು ಹಂತದಲ್ಲಿ ನಡೆಸುವುದಾಗಿ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ತಿಳಿಸಿತು.
ಅರ್ಜಿ ಸಲ್ಲಿಸಿ 10 ತಿಂಗಳ ಬಳಿಕ 2021ರ ಏ.23ರಂದು ದೈಹಿಕ ಪರೀಕ್ಷೆ ನಡೆಸಿತ್ತು. ವಾಹನ ಚಾಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಿರಲಿಲ್ಲ. 2022ರ ಜನವರಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಇದಾದ ಮೇಲೆ ವಾಹನ ಚಾಲನ ಪರೀಕ್ಷೆ ವಿಳಂಬ ಮಾಡಿ ಕೊನೆಗೆ ಚಾಲಕ ತಂತ್ರಜ್ಞ ಹುದ್ದೆಯ 121 ಅಭ್ಯರ್ಥಿಗಳಿಗೆ ಮತ್ತು ಅಗ್ನಿ ಶಾಮಕ ಚಾಲಕ ಹುದ್ದೆಯ 577 ಅಭ್ಯರ್ಥಿಗಳು ಸೇರಿ 698 ಅಭ್ಯರ್ಥಿಗಳಿಗೆ ಭಾರೀ ವಾಹನ ಚಾಲನಾ ಪರೀಕ್ಷೆಯನ್ನು ಫೆಬ್ರವರಿ ನಡೆಸಲಾಯಿತು.
ಮತ್ತೊಂದೆಡೆ ಅಗ್ನಿ ಶಾಮಕ ಹುದ್ದೆ ನೇಮಕಾತಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಿ ಸಿಂಧುತ್ವ ಪರೀಕ್ಷೆ ನಡೆಸಿತ್ತು. ಎಸ್​ಎಸ್​ಎಲ್​ಸಿ ನಕಲಿ ಅಂಕಪಟ್ಟಿ ಸಲ್ಲಿಸಿದ ಆರೋಪಿಗಳು ಸೆರೆಸಿಕ್ಕಿದ್ದರು. ಆದರೆ, ಅಗ್ನಿ ಶಾಮಕ ಚಾಲಕ ಮತ್ತು ಚಾಲಕ ತಂತ್ರಜ್ಞರ ಹುದ್ದೆಗಳ ಪರೀಕ್ಷೆ ನಡೆದು 3 ತಿಂಗಳು ಕಳೆದರೂ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಗೆ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಉದ್ಯೋಗ ಆಕಾಂಕ್ಷಿಗಳು ಕಾಯುತ್ತಿದ್ದು, ಸರ್ಕಾರ ಗಮನಹರಿಸಬೇಕಾಗಿದೆ.
ಸಿಐಡಿ ತನಿಖೆ ಭಯ:ಅಗ್ನಿ ಶಾಮಕ ಚಾಲಕ ಮತ್ತು ಚಾಲಕ ತಂತ್ರಜ್ಞರ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಗೆ ವಿಳಂಬದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದಾಗ 545 ಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಭಯ ಎಂದು ಹೇಳುತ್ತಿದ್ದಾರೆ. ಸಿಐಡಿ ತನಿಖೆ ಮುಗಿಯುವವರೆಗೂ ಬಿಡುಗಡೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ವಯಂ ಆದೇಶ ಹೊರಡಿಸಿಕೊಂಡಿದ್ದಾರೆ. ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಿದ ಮೇಲೆ ಎಲ್ಲಿ ಅಕ್ರಮದ ಆರೋಪ ಕೇಳಿಬಂದರೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕೆಂಬ ಭಯದಲ್ಲಿ ಅಗ್ನಿ ಶಾಮಕ ಅಧಿಕಾರಿಗಳು ಒಳಗಾಗಿದ್ದಾರೆ. ಈಗಾಗಲೇ ಅಗ್ನಿ ಶಾಮಕ ಸಿಬ್ಬಂದಿ ಸಿಂಧುತ್ವದಲ್ಲಿ ಏಳು ಮಂದಿ ಎಸ್​ಎಸ್​ಎಲ್​ಸಿ ನಕಲಿ ಅಂಕಪಟ್ಟಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ಆಸಕ್ತಿ ತೋರದ ಅಧಿಕಾರಿಗಳು:ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನೇಮಕಾತಿಗೆ ಅಧಿಕಾರಿಗಳೇ ಆಸಕ್ತಿ ತೋರಿಲ್ಲ ಎಂಬ ಆರೋಪ ಕೇಳಿಬಂದಿದೆ. ನೋಟಿಫಿಕೇಷನ್ ಹೊರಡಿಸಿ ಅರ್ಜಿ ಸ್ವೀಕರಿಸಿದ ಮೇಲೆ ಹಂತ ಹಂತವಾಗಿ ವಿಶೇಷ ತಂಡ ರಚನೆ ಮಾಡಿ ನೇರ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಹಿರಿಯ ಅಧಿಕಾರಿಗಳು ಕೈ ಜೋಡಿಸದ ಕಾರಣ ನೇಮಕಾತಿಗೆ ಬೇಕಾದ ವೇದಿಕೆ ಸಜ್ಜಾಗದೆ ತಡವಾಗುತ್ತಿದೆ. ಇದೀಗ ನೇಮಕಾತಿ ಪ್ರಕ್ರಿಯೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ನಾನು ಏನು ಹೇಳುತ್ತೇನೋ ಅದನ್ನು ಮಾತ್ರ ಮಾಡುತ್ತೇನೆ… ಶುರುವಾಯ್ತು ಉಪ್ಪಿ ‘UI’

ಬೆಂಕಿ ಹೊತ್ತಿ ಉರಿದ ಟೀ ಅಂಗಡಿ; ಶೇ. 50 ಸುಟ್ಟ ಗಾಯಗಳಿಗೆ ಒಳಗಾದ ಬಾಲಕಿ, ಜೀವನ್ಮರಣ ಹೋರಾಟ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 4 =
Remember me
