ಬೆಂಗಳೂರು:ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬುಕ್ ಬ್ರಹ್ಮ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯ ಜತೆಗೆ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ ಪುರಸ್ಕಾರ ನೀಡಲು ನಿರ್ಧರಿಸಿದೆ.
2022ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತಿದೆ. ಈ ಒಂದು ಲಕ್ಷದಲ್ಲಿ 75 ಸಾವಿರ ರೂ. ಲೇಖಕರಿಗೆ ಹಾಗೂ 25 ಸಾವಿರ ರೂ. ಪ್ರಕಾಶಕರಿಗೆ ವಿತರಿಸಲಾಗುತ್ತಿದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂ. ಬಹುಮಾನ ನೀಡಲಾಗುತ್ತಿದೆ. ಈ ಪೈಕಿ 3 ಸಾವಿರ ರೂ. ಲೇಖಕರಿಗೆ ಹಾಗೂ 2 ಸಾವಿರ ರೂ. ಪ್ರಕಾಶಕರಿಗೆ ನೀಡಲು ನಿರ್ಧರಿಸಿದೆ.
ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಕಥೆಗೆ 50 ಸಾವಿರ ರೂ. ನಗದು ಬಹುಮಾನ ಇರಲಿದೆ. ದ್ವಿತೀಯ ಸ್ಥಾನ ಪಡೆಯುವ ಕಥೆಗೆ 25 ಸಾವಿರ ರೂ., ತೃತೀಯ ಸ್ಥಾನಕ್ಕೆ 15 ಸಾವಿರ ರೂ. ನಗದು ಬಹುಮಾನ ಇರಲಿದೆ. ಉಳಿದಂತೆ ಐದು ಕಥೆಗಳಿಗೆ ತಲಾ 5 ಸಾವಿರ ರೂ. ನಗದು ಒಳಗೊಂಡ ಸಮಾಧಾನಕರ ಬಹುಮಾನ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ 17 ಕಥೆಗಳಿಗೆ ತಲಾ ಎರಡು ಸಾವಿರ ರೂ. ನೀಡಲಾಗುತ್ತಿದೆ. ಆಯ್ಕೆಯಾದ ಈ 25 ಕಥೆಗಳನ್ನು ಒಳಗೊಂಡ ಪುಸ್ತಕ ಪ್ರಕಟಿಸಲು ನಿರ್ಧರಿಸಿದೆ.
1. ಕಾದಂಬರಿಯು ಸ್ವತಂತ್ರವಾಗಿರಬೇಕು ಮತ್ತು 2022ರಲ್ಲಿ ಮೊದಲ ಮುದ್ರಣಗೊಂಡಿರಬೇಕು.2. ಅನುವಾದ ಹಾಗೂ ಭಾಷಾಂತರಗೊಂಡ ಕಾದಂಬರಿಗಳನ್ನು ಪರಿಗಣಿಸುವುದಿಲ್ಲ.3. ಸ್ಪರ್ಧೆಗೆ ಲೇಖಕರು/ ಪ್ರಕಾಶಕರು ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಕಳುಹಿಸಬೇಕು.4. ತೀರ್ಪುಗಾರರ ನಿರ್ಣಯವೇ ಅಂತಿಮ.5. ಕಾದಂಬರಿಗಳನ್ನು ಕಳುಹಿಸಲು ಏಪ್ರಿಲ್‌ 15, 2023 ಕೊನೆಯ ದಿನ.6. ಕನ್ನಡದ ಪ್ರಮುಖ ಕಾದಂಬರಿಕಾರರು ಹಾಗೂ ವಿಮರ್ಶಕರು ಸ್ಪರ್ಧೆಯ ನಿರ್ಣಾಯಕರಾಗಿರುತ್ತಾರೆ.7. ಆಯ್ಕೆಗೆ ಸಂಬಂಧಿಸಿದಂತೆ ’ಬುಕ್ ಬ್ರಹ್ಮ’ ಆಡಳಿತ ಮಂಡಳಿಯ ನಿರ್ಣಯವೇ ಅಂತಿಮ.8. ಆಗಸ್ಟ್‌ 1, 2023 ಮಂಗಳವಾರದಂದು ಅಂತಿಮ ಸುತ್ತನ್ನು ಪ್ರವೇಶಿಸುವ 5 ಕಾದಂಬರಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.9. ಆಗಸ್ಟ್ 15, 2023 ಮಂಗಳವಾರದಂದು ನಡೆಯಲಿರುವ ಸಮಾರಂಭದಲ್ಲಿ ಕಥೆಗಳ ಘೋಷಣೆ ಮತ್ತು ಪ್ರಶಸ್ತಿ ವಿತರಣೆ ಎರಡನ್ನೂ ಮಾಡಲಾಗುವುದು.10. ಬುಕ್‌ಬ್ರಹ್ಮ ಪ್ರೈವೇಟ್ ಲಿಮಿಟೆಡ್ (Book Brahma Pvt. Ltd.), ಫರ್ಬೆಂಡನ್‌ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್ (Verbinden Communication Pvt. Ltd.) ಮತ್ತು ಕಾಗ್ನಿಕ್ವೆಸ್ಟ್‌ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (Cogniquest Technologies” width=”300″>pvt. Ltd.) ಸಂಸ್ಥೆಯ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸ್ಫರ್ಧೆಯಲ್ಲಿ ಭಾಗವಹಿಸುವಂತಿಲ್ಲ.11. ಅಂತಿಮ ಸುತ್ತಿಗೆ ಆಯ್ಕೆಯಾದ ಕಾದಂಬರಿಕಾರರು ಬಹುಮಾನ ವಿತರಣಾ ಸಮಾರಂಭದಲ್ಲಿ ತಪ್ಪದೇ ಭಾಗವಹಿಸಬೇಕು. ಸಮಾರಂಭದ ದಿನ ಬೆಳಿಗ್ಗೆ ನಡೆಯುವ ʻಕಥಾ-ಕಾದಂಬರಿ ಸಂವಾದ’ದಲ್ಲಿ ಭಾಗವಹಿಸುವುದು ಅಪೇಕ್ಷಣೀಯ.12. ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ – ಕನ್ನಡ, ಮೂರನೇ ಮಹಡಿ, ಆರ್. ಕೆ ಕಾಂಪ್ಲೆಕ್ಸ್, ಕೆಎಸ್ಎಸ್ಐಡಿಸಿ ಕಾಂಪೌಂಡ್, ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತ, ಬೆಂಗಳೂರು-560100 ವಿಳಾಸಕ್ಕೆ ಏಪ್ರಿಲ್‌ 15ರೊಳಗೆ ಕಳುಹಿಸಬೇಕು.ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 78926 08118
1. ಕಥೆಯು ಸ್ವತಂತ್ರವಾಗಿರಬೇಕು. ಅನುವಾದ, ಅನುಕರಣವಾಗಿರಬಾರದು.2. ಕಥೆಯು ಅಪ್ರಕಟಿತವಾಗಿರಬೇಕು. ಮುದ್ರಣ ಅಥವಾ ಯಾವುದೇ ವಿದ್ಯುನ್ಮಾನ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು.3. ಕಥೆಗೆ ಯಾವುದೇ ರೀತಿಯ ಪದಮಿತಿ ಇರುವುದಿಲ್ಲ.4. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧ ಇಲ್ಲ.5. ಹಸ್ತಪ್ರತಿ ಅಥವಾ ಟೈಪ್ ಮಾಡಿದ ಕಥೆಯಿರುವ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಬಾರದು. ಕಥೆ ಮುಗಿದ ನಂತರ ಪ್ರತ್ಯೇಕ ಪುಟದಲ್ಲಿ ತಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇರಬೇಕು.6. ಕಥೆಗಾರರು ನಿಬಂಧನೆಗಳಿಗೆ ಒಪ್ಪಿದ ಮತ್ತು ಸಹಿ ಮಾಡಿದ ಪ್ರತ್ಯೇಕ ಒಂದು ಪತ್ರ ಇಡಬೇಕು.7. ಬುಕ್‌ಬ್ರಹ್ಮ ಪ್ರೈವೇಟ್ ಲಿಮಿಟೆಡ್ (Book Brahma Private Limited), ಫರ್ಬೆಂಡನ್‌ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್ (Verbinden Communication Private Limited) ಮತ್ತು ಕಾಗ್ನಿಕ್ವೆಸ್ಟ್‌ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (CogniquestTechnologies Private Limited) ಸಂಸ್ಥೆಯ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸ್ಫರ್ಧೆಯಲ್ಲಿ ಭಾಗವಹಿಸುವಂತಿಲ್ಲ.8. ಕನ್ನಡದ ಪ್ರಮುಖ ಕಥೆಗಾರರು/ವಿಮರ್ಶಕರು ಸ್ಪರ್ಧೆಯ ನಿರ್ಣಾಯಕರಾಗಿರುತ್ತಾರೆ.9. ಆಯ್ಕೆಗೆ ಸಂಬಂಧಿಸಿದಂತೆ ʻಬುಕ್ ಬ್ರಹ್ಮ’ ಆಡಳಿತ ಮಂಡಳಿಯ ನಿರ್ಣಯವೇ ಅಂತಿಮ.10. ಕಥೆಗಳನ್ನು ಕಳುಹಿಸಲು ಕೊನೆಯ ದಿನ ಬುಧವಾರ, ಮೇ 31, 2023.11. ಆಗಸ್ಟ್‌ 1, 2023 ರಂದು ಮಂಗಳವಾರ, ಅಂತಿಮ ಸುತ್ತನ್ನು ಪ್ರವೇಶಿಸುವ 25 ಕಥೆಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.12. ಆಗಸ್ಟ್ 15, 2023 ರಂದು ಮಂಗಳವಾರ, ನಡೆಯಲಿರುವ ಸಮಾರಂಭದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಕಥೆಗಳ ಘೋಷಣೆ ಮತ್ತು ಪ್ರಶಸ್ತಿ ವಿತರಣೆ ಎರಡನ್ನೂ ಮಾಡಲಾಗುವುದು.13. ಅಂತಿಮ ಸುತ್ತಿಗೆ ಆಯ್ಕೆಯಾದ 25 ಕಥೆಗಳನ್ನು ಪುಸ್ತಕ, ಇ-ಪುಸ್ತಕ, ಆಡಿಯೋ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಈ 25 ಕಥೆಗಳ ಪೈಕಿ ಬಹುಮಾನ ಪಡೆಯದೇ ಉಳಿಯುವ 17 ಕಥೆಗಳಿಗೆ ತಲಾ 2000 ರೂಪಾಯಿ ಗೌರವಧನ ನೀಡಲಾಗುವುದು. ಈ ಎಲ್ಲಾ 25 ಕಥೆಗಳ ಹಕ್ಕುಸ್ವಾಮ್ಯ ಕಥೆಗಾರರು ಮತ್ತು ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇಬ್ಬರಿಗೂ ಜಂಟಿಯಾಗಿ (ಶೇಕಡಾ 50) ಸೇರಿರುತ್ತದೆ.14. ಅಂತಿಮ ಸುತ್ತಿಗೆ ಆಯ್ಕೆಯಾದ ಕಥೆಗಾರರು ಬಹುಮಾನ ವಿತರಣಾ ಸಮಾರಂಭದಲ್ಲಿ ತಪ್ಪದೇ ಭಾಗವಹಿಸಬೇಕು. ಸಮಾರಂಭದ ದಿನ ಬೆಳಿಗ್ಗೆ ನಡೆಯುವ ʻಕಥಾ-ಕಾದಂಬರಿ ಸಂವಾದ’ದಲ್ಲಿ ಭಾಗವಹಿಸುವುದು ಅಪೇಕ್ಷಣೀಯ.15. ಒಬ್ಬರು ಒಂದು ಕಥೆಯನ್ನು ಮಾತ್ರ ಕಳಿಸಬೇಕು. ಕಾದಂಬರಿ ಸ್ಪರ್ಧೆಗೆ ಪುಸ್ತಕ ಕಳುಹಿಸಿದವರೂ ಕೂಡ ಕಥೆಗಳನ್ನು ಕಳುಹಿಸಬಹುದು.16. ಕಥೆಗಳನ್ನು ಈ-ಮೇಲ್ ಮೂಲಕ (ನುಡಿ/ಯೂನಿಕೋಡ್ ಫಾಂಟ್ ಬಳಸಿ ಟೈಪ್ ಮಾಡಿದ ಪ್ರತಿ)[email protected]ಅಥವಾ ಹಸ್ತಪ್ರತಿಯನ್ನು ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ ಕನ್ನಡ, ಮೂರನೇ ಮಹಡಿ, ಆರ್ ಕೆ ಕಾಂಪ್ಲೆಕ್ಸ್ ಕೆಎಸ್ಎಸ್ಐಡಿಸಿ ಕಾಂಪೌಂಡ್, ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತ, ಬೆಂಗಳೂರು-560100 ಕ್ಕೆ ಕಳುಹಿಸಿಕೊಡಬಹುದು.ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 78926 08118
ಇದನ್ನೂ ಓದಿ:ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿಲ್ಲ ಅಂದ್ರೆ ನಾವು ಮಾಡ್ತೀವಿ; ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 + 9 =
Remember me
