ಜಿತೇಂದ್ರ ಕಾಂಬಳೆ, ದಿಗ್ವಿಜಯ ನ್ಯೂಸ್
ಬೆಳಗಾವಿ:ದೇಶ ಸೇವೆಯೇ ಈಶ ಸೇವೆ ಅಂತಾ ಹೇಳ್ತರಾರೆ. ಈ ಗ್ರಾಮದಲ್ಲಿ ಪ್ರತಿಯೊಬ್ಬ ಹುಟ್ಟಿದ ಮಗನೂ ಈಶ ಸೇವೆ ಅಂತಾ ತಿಳಿದು ದೇಶ ಸೇವೆ ಮಾಡ್ತಾ ಇದ್ದಾರೆ. ಈ ಗ್ರಾಮದಲ್ಲಿ ಹುಟ್ಟಿದ ಮಗು ವೀರ ಯೋಧನಾಗಬೇಕು ಅಥವಾ ಶಿಕ್ಷಕನಾಗಬೇಕು ಇದು ಈ ಗ್ರಾಮದ ಕಟ್ಟಪ್ಪಣೆ. ಅದಕ್ಕಾಗಿ ಈ ಗ್ರಾಮವನ್ನು ವೀರು ಯೋಧರ ಗ್ರಾಮ ಅಂತಾನೇ ಕರಿತ್ತಾರೆ ಹೀಗಾ ಈ ಪುಟ್ಟ ಹಳ್ಳಿ ರಾಜ್ಯದ ಗಮನ ಸೆಳೆದಿದೆ.
ಹೌದು ನಾವು ಹೇಳಲು ಹೊರಟಿರುವುದು ಬೆಳಗಾವಿ ಜಿಲ್ಲೆಯ ಸೈನಿಕರ ಗ್ರಾಮವೊಂದರ ಕಥೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗ್ರಾಮದ ನೇಗಿನಾಳ ಗ್ರಾಮ. ಈ ಪುಟ್ಟ ಗ್ರಾಮದಲ್ಲಿ ಅಂದಾಜು 1200 ಮನೆಗಳಿವೆ. ಇಲ್ಲಿ ಹುಟ್ಟಿದ ಪ್ರತಿ ಮನೆಯ ಸದಸ್ಯ ಸೈನಿಕನಾಗಬೇಕು ಅಥವಾ ಶಿಕ್ಷಕರಾಗಬೇಕು ಎನ್ನುವುದು ಇಲ್ಲಿನ ಜನರ ಮಹದಾಸೆಯಾಗಿದೆ.
ಇದನ್ನೂ ಓದಿ:ಚೀನಾದ ಫೇಕ್​ಸ್ಕೈ ಅಟ್ಯಾಕ್​ನ ಟಾರ್ಗೆಟ್ ನೀವೂ ಆಗಿರಬಹುದು- ಹುಷಾರಾಗಿರಿ!
ಇಂಡಿಯನ್ ಆರ್ಮಿ ಅಂದ್ರೆ ಅದು ದೇಶ ಪ್ರೇಮ. ಅದರಲ್ಲಿ ಸೇವೆ ಮಾಡೋದ ಪ್ರೀತಿಯೊಬ್ಬ ಭಾರತೀಯನ ಆಸೆ.. ಯಾಕೆಂದರೆ ಅಲ್ಲಿ ಸಿಸ್ತು ಸಂಯಮ, ದೇಶ ಭಕ್ತಿ ಇರುತ್ತದೆ.ಇಲ್ಲಿರುವ ಶಿಸ್ತು ಎಲ್ಲಿಯೂಇಲ್ಲಾ. ಶಿಸ್ತಿನ ಸಿಪಾಯಿಗಳಾಗಿ ದೇಶ ಸೇವೆ ಮಾಡ್ತೇವೆ. ಹೀಗಾಗಿ ಇಂತಹ ಯೋಧರ ಗ್ರಾಮದಲ್ಲಿ ಹುಟ್ಟಿ ಖುಷಿ ಇದೆ. ನಾನೂ ಕೂಡ ಈ ದೇಶ ಕಾಯೋ ಯೋಧನಾಗಿದ್ದೆ ಹೆಮ್ಮೆ ಇದೆ. ನಾನೊಬ್ಬ ಯೋಧನಾಗಿದ್ದೆ ಅಂತಾ ಹೆಮ್ಮೆಯಿಂದ ಹೇಳ್ತೇನೆ. ಜೈ ಹಿಂದ್.ಅಮೀರ ಬಸರಿಕಟ್ಟಿ, ನಿವೃತ್ತ ಸೈನಿಕ..
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮ ಅಂದ್ರೆ ಯೋಧರ ಗ್ರಾಮ ಅಂತಾನೇ ನೆನಪಿಗೆ ಬರುತ್ತದೆ. ವೀರರ ನಾಡಿನಲ್ಲಿ ಹುಟ್ಟಿದ್ದು ಅದರಲ್ಲೂ ನೇಗಿನಹಾಳ ಗ್ರಾಮದಲ್ಲಿ ಕುಟುಂಬ ಸದಸ್ಯರಲ್ಲಿ ಮನೆಗೆ ಒಬ್ಬ ಯೋಧನಾಗುತ್ತಾ ಅಥವಾ ಶಿಕ್ಷಕನಾಗುತ್ತಾನೆ. ಇದು ಹೆಮ್ಮೆಯಿಂದ ಹೇಳ್ತೇನೆ. ಈ ಗ್ರಾಮದಲ್ಲಿ ನಾನು ಹುಟ್ಟಿದ್ದು ಖುಷಿ ಆಗುತ್ತೆ. ದೇಶ ಕಾಯೋ ಯೋಧರಿಗೆ ನನ್ನದೊಂದು ಸಲಾಮ್…ಬಸವರಾಜ್. ನೇಗಿನಹಾಳ ಗ್ರಾಮದ ನಿವಾಸಿ
ಹೀಗಾಗಿ ಈ ಗ್ರಾಮದಲ್ಲಿ ಹೀಗಾಗಿ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ‌ಯೋಧರೆಂದರೆ ನೆನೆಪಿಗೆ ಬರೋದೇ ಈ ಪುಟ್ಟ ಗ್ರಾಮ ನೇಗಿನಾಳ. ಇನ್ನು ಈ ಗ್ರಾಮದ ಮಾಜಿ ಹಾಗೂ ಹಾಲಿ ಸೈನಿಕರು ಸೇರಿ ಒಟ್ಟು ಅಂದಾಜು 400 ಕ್ಕೂ ಅಧಿಕ ಸೈನಿಕರಿದ್ದಾರೆ. ಇವರು ಬಿಎಸ್ ಎಫ್, ಸಿಆರ್ ಪಿಎಫ್ ಸೇರಿ ಎಲ್ಲ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಂದು ಈ ಗ್ರಾಮದ ವಿಶೇಷ ಅಂದ್ರೆ ಈಗಾಗಲೇ ಸೈನ್ಯಕ್ಕೆ ಸೇರಿದ ಪ್ರತಿಯೊಬ್ಬ ಸೈನಿಕನೂ ಗ್ರಾಮದಲ್ಲಿ ಸೈನಿಕನಾಗಬೇಕೆಂದ ಆಸೆ, ಕನಸು ಕಂಡ ಯುವಕರಿಗೆ ಕನಸಿಗೆ ಆಸೆ ನೀರೆರೆದು ಬೆಳೆಸಿ ಆಸೆ ಈಡೆರುವಂತೆ ಮಾಡ್ತಾರೆ. ಹಾಗೇ ನಿವೃತ್ತಿ ನಂತರ ಗ್ರಾಮಕ್ಕೆ ಬರುವ ಯೋಧರು ತಮ್ಮ ಸಂಬಂಧಿಗಳಿಗೆ ಹಾಗೂ ಗ್ರಾಮದ ಯುವಕರನ್ನ ಸೇನೆ ಸೇರಲು ಪ್ರೇರಿಪಿಸುತ್ತಾರೆ. ಅಷ್ಟೇ ಅಲ್ಲ ಸೇನಾ ಭರ್ತಿ ಕುರಿತು ಯುವಕರಲ್ಲಿ ಜಾಗೃತಿ ಜೊತೆಗೆ ತರಬೇತಿ‌ನೀಡೊದು ಇನ್ನೊಂದು ವಿಶೇಷ. ಹೀಗಾಗಿ ಇದೇ ಕಾರಣಕ್ಕಾಗಿ ಸೇನಾ ಭರ್ತಿ ರಾಲಿಯಲ್ಲಿ ನೂರಾರು ಯುವಕರು ಸೇನೆ ಸೇರುತ್ತಾರೆ.
ಇದನ್ನೂ ಓದಿ:ಮತ್ತೊಂದು ಮಾರಕ ಕಾಯಿಲೆಯ ಎಚ್ಚರಿಕೆ ರವಾನಿಸಿದೆ ಚೀನಾ!
ಇದೇ ಕಾರಣಕ್ಕಾಗಿ ಗ್ರಾಮದ ಪ್ರತಿ‌ಗ್ರಾಮಕ್ಕೊಬ್ಬ ಯೋಧ ಸಿಗುತ್ತಾನೆ. ಇನ್ನು ಒಂದೇ ಮನೆಯಲ್ಲಿ ಇಬ್ಬರೂ, ಮೂವರು ಇದ್ದಾರೆ. ಇನ್ನೂ ಈ ಗ್ರಾಮದಿಂದ ಇದುವರೆಗೆ ಸೇವೆ ಸಲ್ಲಿಸಿದ ಯಾವೊಬ್ಬ ಯೋದ ಹುತಾತ್ಮ ಆಗಿಲ್ಲ, ದೇಶ ಸೇವೆ ಮಾಡುವ ಯೋಧನಿಗೆ ಈಶನ ಆಶೀರ್ವಾದ ಇದೆ ಅನ್ನೊದಕ್ಕೇ ಇದೇ ಸಾಕ್ಷಿ. ಈ ಗ್ರಾಮದ ಯುವಕರು ದುಶ್ಚಟಗಳನ್ನ ಬಿಟ್ಟು ಅಭ್ಯಾಸದ ಜತೆಗೆ ಸೈನ್ಯಕ್ಕೆ ಸೇರಬೇಕಾದ ಪಿಜಿಕಟ್ ಪಿಟನೇಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಹಾಗಾಗಿ ಯಾವುದೇ ಭಾಗದಲ್ಲಿ ಸೈನಿಕ ಭರ್ತಿ ನಡೆಯಲಿ ನೇಗಿನಾಳದ ಗ್ರಾಮದ ಯುವಕರು ಅತಿ ಹೆಚ್ಚಿನದಾಗಿ ಸಂಖ್ಯೆಯಲ್ಲಿ ಸೇನೆಗೆ ನೇಮಕವಾಗುತ್ತಾರೆ. ಹೀಗಾಗಿ ಈ ಗ ಸೈನಿಕರ ಗ್ರಾಮ ಬೆಳಗಾವಿ ಜಿಲ್ಲೆಯಲ್ಲಿದೆ ಅನ್ನೊದು ಹೆಮ್ಮೆಪಡುತ್ತಿದ್ದಾರೆ ಜಿಲ್ಲೆಯ ಜನರು. ಈ ಗ್ರಾಮದಲ್ಲಿನ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿಯು ಒಬ್ಬರು ದೇಶಕಾಯೋ ಯೋಧನಾದರೆ ಇನ್ನೊಬ್ಬರು ಸಮಾಜವನ್ನು ತಿದ್ದಿ ತೀಡುವ ಶಿಕ್ಷಕನಾಗುತ್ತಾನೆ. ಈ ಯೋಧರ ಗ್ರಾಮಕ್ಕೆ ನಮ್ಮದೊಂದು ಸಲಾಮ್.
ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡಲ್ಲಿ 100ಕ್ಕೆ ಕರೆ ಮಾಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 1 =
Remember me
