ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ನಿರ್ಧಾರವು ರಾಜಕೀಯ ವಲಯದಲ್ಲಿ ವಿವಿಧ ಲೆಕ್ಕಾಚಾರಗಳಿಗೆ ಆಹಾರ ಒದಗಿಸಿದೆ. ಹಳೇ ಮೈಸೂರು ಭಾಗದ ರಾಜಕೀಯ ನಕ್ಷೆ, ಜಾತಿ ಸಮೀಕರಣ ಮತ್ತು ಚುನಾವಣಾ ಮಾರ್ಗಪಥ ಬದಲಾವಣೆ ಅಂದಾಜಿದ್ದು, ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಆಡಳಿತ ಬಿಜೆಪಿ ತಂತ್ರಗಾರಿಕೆ ಹೆಣೆಯುವ ಚಿಂತನೆ ನಡೆಸಿದೆ. ಸೋಲಿನ ಭಯದಿಂದ ಸಿದ್ದರಾಮಯ್ಯ ಕ್ಷೇತ್ರ ಬದಲಿಸಿದ್ದಾರೆ. ಕೋಲಾರದಲ್ಲಿ ಗೆಲ್ಲುವುದು ಕಷ್ಟವೆಂದು ಕಮಲಪಡೆ ನಾಯಕರು ಭವಿಷ್ಯ ನುಡಿಯಲಾರಂಭಿಸಿದ್ದು, ಗಂಭೀರವಾಗಿ ಪರಿಗಣಿಸಿರುವುದು ಎದ್ದು ಕಾಣುತ್ತಿದೆ.
ಸೂಕ್ಷ್ಮ ಅವಲೋಕನ:‘ಮಿಷನ್ ದಕ್ಷಿಣ’ ಕಾರ್ಯಸೂಚಿಯಡಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಪಕ್ಷದ ವರಿಷ್ಠರು ಒತ್ತು ನೀಡಿ, ಸ್ವಯಂ ಜತೆಗೆ ರಾಜ್ಯ ನಾಯಕರಿಗೂ ಕಾರ್ಯಸೂಚಿ ಅನುಷ್ಠಾನದ ಜವಾಬ್ದಾರಿ ಹಂಚಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಅಧಿಕ ಸ್ಥಾನಗಳನ್ನು ಜಯಿಸಿದರೆ 150 ಸ್ಥಾನಗಳ ಗುರಿ ತಲುಪಿ, ಸ್ವಂತ ಬಲದ ಮೇಲೆ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸುಲಭ ಸಾಧ್ಯವೆಂದು ರ್ತಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಅನ್ಯಪಕ್ಷಗಳ ಪ್ರಭಾವಿಗಳಿಗೆ ಗಾಳ ಹಾಕಿರುವಾಗ ಸಿದ್ದರಾಮಯ್ಯ ನಡೆಯು ಹೊಸದಾಗಿ ರಣತಂತ್ರ ರೂಪಿಸಲು ಪ್ರೇರೇಪಿಸಿದೆ. ಕೋಲಾರದಿಂದ ಕಣಕ್ಕಿಳಿದರೆ ಉಂಟಾಗುವ ಪರಿಣಾಮ, ಪ್ರಭಾವಗಳ ಬಗ್ಗೆ ಸೂಕ್ಷ್ಮ ಅವಲೋಕನ ಪ್ರಾರಂಭಿಸಿದ್ದು, ಬದಾಮಿಗಿಂತ ವಿಭಿನ್ನ ಕಾರ್ಯತಂತ್ರ ಹೆಣೆಯಲಿದೆ. ಬಿ.ಶ್ರೀರಾಮುಲು ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು. ಬದಾಮಿ ಕ್ಷೇತ್ರದ ಪ್ರಚಾರಕ್ಕೆ ಕಾಲಾವಕಾಶದ ಕೊರತೆಯು ಪ್ರತಿಸ್ಪರ್ಧಿ ಸಿದ್ದರಾಮಯ್ಯಗೆ ವರದಾನವಾಗಿತ್ತು. ಈ ವೈಫಲ್ಯವು ಕೋಲಾರದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸುವ ಜತೆಗೆ ಸಿದ್ದರಾಮಯ್ಯ ಹೆಚ್ಚುದಿನ ಕ್ಷೇತ್ರದಿಂದ ಹೊರಹೋಗದಂತೆ ನೋಡಿಕೊಳ್ಳಲು ಯೋಚಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹೆಚ್ಚಿನ ಸಮಯ ಮೀಸಲಿಡಲೆಂದು ‘ಸುರಕ್ಷಿತ’ ಕ್ಷೇತ್ರವನ್ನು ಸಿದ್ದರಾಮಯ್ಯ ಆಯ್ದುಕೊಂಡಿರುವುದು ಬಿಜೆಪಿ ಮನಗಂಡಿದೆ. ಒಕ್ಕಲಿಗರು ಹಾಗೂ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಹೊಸ ಜಾತಿ ಸಮೀಕರಣ ಹೆಣೆಯುವ ಮೂಲಕ ಸಿದ್ದರಾಮಯ್ಯಗೆ ದಿಗ್ಬಂಧನ ವಿಧಿಸಲು ಚಿಂತನೆ ನಡೆಸಿದೆ. ಕಳೆದ ಬಾರಿಗೆ ಹೋಲಿಸಿದರೆ ಕೋಲಾರ ಕ್ಷೇತ್ರದಲ್ಲಿ ಪಕ್ಷದ ನೆಲೆ ಗಟ್ಟಿಯಾಗ ತೊಡಗಿದ್ದು, ಪಕ್ಷದ ಸಂಸದರಿದ್ದಾರೆ. ಜತೆಗೆ ಭಾವನಾತ್ಮಕ ವಿಚಾರಗಳು, ಎಸ್​ಸಿ-ಎಸ್​ಟಿ ಮೀಸಲು ಹೆಚ್ಚಳವೂ ಈ ಬಾರಿ ನೆರವಿಗೆ ಬರಲಿದೆ ಎನ್ನುವುದು ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ.
ವಲಸಿಗರಿಗೂ ಬದ್ಧತೆ ಸಾಬೀತು ಸವಾಲು:ಸಿದ್ದರಾಮಯ್ಯ ಸ್ಥಳಾಂತರವು ಬಿಜೆಪಿಗೆ ವಲಸೆ ಬಂದು ಸಚಿವರಾದವರಿಗೂ ಪಕ್ಷದ ಬದ್ಧತೆ ಸಾಬೀತುಪಡಿಸುವ ಸವಾಲುವೊಡ್ಡಿದೆ ಎಂದು ವಿಶ್ಲೇಷಿಸಲಾಗಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸ್ಥಾನಗಳ ವೃದ್ಧಿ ಜವಾಬ್ದಾರಿ ನೀಡಿದ್ದು, ಕಾಂಗ್ರೆಸ್ ನಾಯಕನ ನಡೆಯು ವಲಸಿಗರ ಮೇಲೆ ನಿರೀಕ್ಷೆಯ ಭಾರ ಹೆಚ್ಚಿಸಿ, ವೈಯಕ್ತಿಕ ವರ್ಚಸ್ಸು ಓರೆಗಲ್ಲಿಗೆ ಹಚ್ಚಿದೆ. ಸಚಿವತ್ರಯರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್ ಮತ್ತು ಮುನಿರತ್ನ ಅವರು ತಮ್ಮ ಪ್ರಭಾವ, ತಾಕತ್ತು ತೋರಿಸಿ ಹೆಚ್ಚಿನ ಸ್ಥಾನಮಾನ ಗಿಟ್ಟಿಸಿಕೊಳ್ಳುವ ಅವಕಾಶವೂ ಹೌದು ಎಂದು ಪಕ್ಷದ ಮೂಲಗಳು ಹೇಳಿವೆ.
ಯುವ ಜನೋತ್ಸವಕ್ಕೆ ಸರ್ವ ಸಿದ್ಧತೆ:ಧಾರವಾಡ: ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಗರದಲ್ಲಿ ಜ.12ರಿಂದ 16ರವರೆಗೆ ಆಯೋಜಿಸಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ. ಜ.12ರಂದು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಯುವ ಜನೋತ್ಸವ ಉದ್ಘಾಟಿಸುವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಷ್ಟ್ರೀಯ ಯುವ ಜನೋತ್ಸವ ಕುರಿತು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ನಂತರ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಉತ್ಸವದಲ್ಲಿ 28 ರಾಜ್ಯಗಳ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಅಂದಾಜು 7,500 ಯುವ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಕ್ರೀಡಾ ಇಲಾಖೆಯಿಂದ ವಿವಿಧ ಚಟುವಟಿಕೆಗಳ ಸಿದ್ಧತೆ ನಡೆದಿವೆ. ಉದ್ಘಾಟನಾ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಉಳಿದ ಎಲ್ಲ ಸಾಂಸ್ಕೃತಿಕ- ಕ್ರೀಡಾ ಚಟುವಟಿಕೆಗಳು ಧಾರವಾಡದಲ್ಲಿ ನಡೆಯಲಿವೆ. ವಿವಿಧ ರಾಜ್ಯಗಳಿಂದ ಬರುವ ಯುವಕರು, ಗಣ್ಯರು, ಅತಿಥಿಗಳಿಗೆ ಕರ್ನಾಟಕ ಕಾಲೇಜು, ಕೃಷಿ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎಲ್ಲರಿಗೂ ಸಾರಿಗೆ, ವಸತಿ, ಊಟ, ನೀರಿನ ವ್ಯವಸ್ಥೆ ಒದಗಿಸಲಾಗುತ್ತದೆ ಎಂದರು. ಹುಬ್ಬಳ್ಳಿಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ರಾಜ್ಯಗಳ 7,500 ಯುವ ಪ್ರತಿನಿಧಿಗಳು ಪಥಸಂಚಲನ ನಡೆಸುವರು. ಕಾರ್ಯಕ್ರಮದಲ್ಲಿ ಯುವಜನರು ಪಾಲ್ಗೊಳ್ಳಲು ನೋಂದಣಿ ವ್ಯವಸ್ಥೆ ಮಾಡಲಾಗಿದ್ದು, ಈವರೆಗೆ 30,000 ಜನರು ಹೆಸರು ನೋಂದಾಯಿಸಿದ್ದಾರೆ ಎಂದರು.
‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + twenty =
Remember me
