ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ವಿಜಯರೇಖೆ ದಾಟಿಸಲು ಬಗೆಬಗೆಯ ತಂತ್ರ ರೂಪಿಸುತ್ತಿರುವ ಆಡಳಿತಾರೂಢ ಬಿಜೆಪಿಯು ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ಗೆ ಪ್ರಮುಖ ಜವಾಬ್ದಾರಿ ನೀಡಿದೆ. ಯಾರು ಯಾವುದೇ ರೀತಿ ತರ್ಕ ಮಾಡಿದರೂ, ನಾಯಕರ ನಡುವೆ ‘ತಂದುಹಾಕಲು’ ಪ್ರಯತ್ನಿಸಿದರೂ ಪಕ್ಷದ ಆಸ್ತಿಯಾಗುವ ಕ್ರಿಯಾಶೀಲ, ಚಾಣಾಕ್ಷ ನಾಯಕರನ್ನು ನಾವು ಬಿಟ್ಟುಕೊಡು ವುದಿಲ್ಲ ಎಂದು ವರಿಷ್ಠರು ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಚುನಾವಣೆಗೆ ಜನ ಸಮುದಾಯ ಒಗ್ಗೂಡಿಸಿ ಸಂಘಟನೆ ಕಟ್ಟಲು ಬಿ.ವೈ. ವಿಜಯೇಂದ್ರ ಅವರನ್ನು ಮತ್ತು ಬೌದ್ಧಿಕ ತಂತ್ರಗಾರಿಕೆಗೆ ಸುಧಾಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ವಿಶ್ಲೇಷಣೆ ಪಕ್ಷದಲ್ಲಿದೆ. ಚುನಾವಣೆಗಾಗಿ ಪಕ್ಷವು 4 ಹಂತದ ಯಾತ್ರೆ ಸಂಘಟಿಸುತ್ತಿದೆ. ಅದೇ ರೀತಿ ಮೋರ್ಚಾಗಳ ಜಿಲ್ಲಾ ಸಮಾವೇಶ, ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ, ಪ್ರಣಾಳಿಕೆ ತಯಾರಿಗೆ ಸಮಿತಿ ರಚಿಸಲಾಗಿದೆ.
ಈ ಸಮಿತಿಯಲ್ಲಿ ವಿಜಯೇಂದ್ರ, ಕೆ. ಸುಧಾಕರ್, ಸಿ.ಸಿ. ಪಾಟೀಲ್ ಪ್ರಮುಖ ಸ್ಥಾನ ನಿಭಾಯಿಸುತ್ತಿದ್ದಾರೆ. ಒಬಿಸಿ ಮೋರ್ಚಾ, ಎಸ್ಸಿ, ಎಸ್​ಟಿ, ಮಹಿಳಾ, ಯುವ, ಅಲ್ಪಸಂಖ್ಯಾತ ಮೋರ್ಚಾದಿಂದ ಜಿಲ್ಲಾವಾರು ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಈ ಸಮಾವೇಶಗಳನ್ನು ನಡೆಸಲು ವಿಜಯೇಂದ್ರ ಸಂಚಾಲಕ ರಾಗಿರುತ್ತಾರೆ. ಇವರೊಂದಿಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಯಶಪಾಲ್ ಸುವರ್ಣ ಸಹಸಂಚಾಲಕ ರಾಗಿರುತ್ತಾರೆ. ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ ನಡೆಸುತ್ತಿದ್ದು, ಕೆ.ಸುಧಾಕರ್ ಇದರ ಸಂಚಾಲಕರಾದರೆ, ಸಹಸಂಚಾಲಕರಾಗಿ ಶಿಕ್ಷಣ ಸಚಿವ ನಾಗೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಸುರೇಶ್​ಕುಮಾರ್ ಸೇರಿದಂತೆ ಐವರು ಶಾಸಕರು, ವಿಧಾನ ಪರಿಷತ್ ಸದಸ್ಯರು, ಐದು ವಿವಿಧ ಪ್ರಕೋಷ್ಠಗಳ ಪ್ರಮುಖರಿಗೆ ಸ್ಥಾನ ನೀಡಲಾಗಿದೆ. ಪ್ರಣಾಳಿಕೆಗಾಗಿ ಈ ತಂಡ ವಿವಿಧ ವರ್ಗ, ಸಮುದಾಯಗಳೊಂದಿಗೆ ಸಮಾಲೋಚಿಸಿ ಜನರ ನಾಡಿಮಿಡಿತವನ್ನು ಕಟ್ಟಿಕೊಡಲಿದೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಮರಳಬೇಕೆಂಬ ಉದ್ದೇಶದಿಂದ ವಿವಿಧ ಮೋರ್ಚಾಗಳ ಸಮಾವೇಶವನ್ನು ಯಶಸ್ವಿಯಾಗಿ ಮಾಡಲಾಗುವುದು.
|ಬಿ.ವೈ. ವಿಜಯೇಂದ್ರಬಿಜೆಪಿ ರಾಜ್ಯ ಉಪಾಧ್ಯಕ್ಷ
ಎಲ್ಲ ಸಮುದಾಯ,ವರ್ಗಗಳ ಆಶೋತ್ತರಕ್ಕೆ ಸ್ಪಂದಿಸುವ, ‘ನವಭಾರತಕ್ಕಾಗಿ ನವ ಕರ್ನಾಟಕ’ ಎಂಬ ನಮ್ಮ ಧ್ಯೇಯಕ್ಕೆ ಪೂರಕವಾಗುವ ‘ಸರ್ವ ರ್ಸ³, ಸರ್ವ ವ್ಯಾಪಿ’ ಪ್ರಣಾಳಿಕೆ ರೂಪಿಸುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ.
|ಡಾ.ಕೆ. ಸುಧಾಕರ್ಆರೋಗ್ಯ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 10 =
Remember me
