ಬೆಂಗಳೂರು:ಶಿಕ್ಷಣ ಇಲಾಖೆ 2020-21ನೇ ಸಾಲಿಗೆ ಪ್ರವೇಶ ಪ್ರಕ್ರಿಯೆ ಮುಂದೂಡಿದ್ದರೂ ಕೆಲವು ಪ್ರತಿಷ್ಠಿತ ಶಾಲೆಗಳು ಆನ್​ಲೈನ್​ನಲ್ಲಿ ತರಗತಿ ನಡೆಸುವ ನೆಪದಲ್ಲಿ ಪಾಲಕರಿಂದ ಶುಲ್ಕ ವಸೂಲಿಗೆ ಮುಂದಾಗಿದ್ದು, ಏ.22ರೊಳಗೆ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕ ಪಾವತಿಸುವಂತೆ ಡೆಡ್​ಲೈನ್ ನಿಗದಿ ಪಡಿಸಿವೆ.
ದೇಶಾದ್ಯಂತ ಲಾಕ್​ಡೌನ್ ಘೋಷಿಸಲಾಗಿದ್ದು, ಈ ಸಮಯ ವ್ಯರ್ಥ ಮಾಡದೆ ಏ.22ರಿಂದ ಆನ್​ಲೈನ್ ತರಗತಿ ಆರಂಭಿಸುತ್ತೇವೆ. ಕೊನೇ 10 ನಿಮಿಷ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು ಅವಕಾಶ ನೀಡಲಾಗುತ್ತದೆ. ಅಲ್ಲದೆ, ಶಾಲೆಯ ಮೊಬೈಲ್ ಆಪ್ ಮೂಲಕ ವಿದ್ಯಾರ್ಥಿಗಳಿಗೆ ಇ-ಬುಕ್ಸ್​ಗಳು ದೊರೆಯಲಿದೆ. ಶುಲ್ಕ ಪಾವತಿಸಿದರೆ, ಅವುಗಳನ್ನು ಡೌನ್​ಲೋಡ್ ಮಾಡಿಕೊಂಡು ವ್ಯಾಸಂಗ ಆರಂಭಿಸಬಹುದು. ಈ ಹಿನ್ನೆಲೆಯಲ್ಲಿ ಪಾಲಕರು ಏ.22ರೊಳಗೆ ಶುಲ್ಕ ಪಾವತಿ ಮಾಡಬೇಕು ಎಂದು ಶಾಲಾ ಆಡಳಿತ ಮಂಡಳಿಗಳು ಪಾಲಕರಿಗೆ ಕಳುಹಿಸಿರುವ ಸಂದೇಶದಲ್ಲಿ ತಿಳಿಸಲಾಗಿದೆ.
ನಿಯಮವೇನಿದೆ?: ದೇಶದಲ್ಲಿ ಲಾಕ್​ಡೌನ್ ಚಾಲ್ತಿಯಲ್ಲಿರುವುದರಿಂದ ಶಿಕ್ಷಣ ಇಲಾಖೆ ಸೂಚನೆ ನೀಡುವವರೆಗೂ 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಿಸುವಂತಿಲ್ಲ. ಈಗಾಗಲೇ ಪಾಲಕರಿಂದ ಶುಲ್ಕ ಪಡೆದಿದ್ದರೆ, ಅದನ್ನು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಶಾಲೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ. ಆದರೂ, ಕೆಲವು ಖಾಸಗಿ ಶಾಲೆಗಳು ಇದನ್ನು ಮೀರಿ ನಡೆಯುತ್ತಿದೆ.
ಕರೊನಾ ಭೀತಿಯ ನಡುವೆಯೇ ಬಾಹ್ಯಾಕಾಶ ಸಂಪನ್ಮೂಲ ಖರೀದಿಗೆ ಆದೇಶ ಹೊರಡಿಸಿದವರು ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 13 =
Remember me
