ಬೆಂಗಳೂರು:ಮಾರಕ ಕರೊನಾ ಪಿಡುಗು ಕಟ್ಟಿ ಹಾಕುವುದಕ್ಕೆ ಇನ್ನು ಮುಂದೆ ಸೂಕ್ಷ್ಮ ಕಾರ್ಯ ಯೋಜನೆ ರೂಪಿಸಿ, ವಿಕೇಂದ್ರೀಕರಣ ವ್ಯವಸ್ಥೆಯಡಿ ಅನುಷ್ಠಾನಕ್ಕೆ ತರಲು ಗಂಭೀರ ಚಿಂತನೆ ನಡೆದಿದೆ.
ಶಂಕಿತರು-ಸೋಂಕಿತರ ಪತ್ತೆ, ಚಿಕಿತ್ಸೆ, ಕ್ವಾರಂಟೈನ್ ಇತ್ಯಾದಿ ಕ್ರಮಗಳು ರಾಜ್ಯಮಟ್ಟದಿಂದ ಜಿಲ್ಲಾ ಹಂತಕ್ಕೆ ಈವರೆಗೆ ವ್ಯವಸ್ಥೆಯಾಗಿದೆ. ನಿರ್ದಿಷ್ಟ ಪ್ರದೇಶಗಳು ಸೋಂಕಿನಿಂದ ಬಾಧಿತವಾಗಿದ್ದು, ಹೊಸ ಪ್ರಕರಣಗಳು ಹೆಚ್ಚಾಗಿ ಇದೇ ಮೂಲದಿಂದ ಹೊರ ಬರುತ್ತಿವೆ. ಜತೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೆರವಿನಿಂದ ನಿಯಂತ್ರಿತ ಹಾಗೂ ಹಾಟ್​ಸ್ಪಾಟ್ ವಲಯಗಳಲ್ಲಿ ಆರೋಗ್ಯ ತಪಾಸಣೆ ಮೂಲಕ ಪ್ರಕರಣಗಳ ಪತ್ತೆ ಪ್ರಯತ್ನ ನಡೆದಿದೆ. ಇದಕ್ಕೆ ಪೂರಕವಾಗಿ ರಾಜ್ಯ ಕೇಂದ್ರೀತ ಬದಲಿಗೆ ತಳಮಟ್ಟದಿಂದ ಕಾರ್ಯಾಚರಣೆಗೆ ಯೋಚಿಸಲಾಗುತ್ತಿದೆ.
ನುರಿತವರ ಸಲಹೆಗಳು: ಮಾರಕ ಪಿಡುಗಿನ ಪ್ರಭಾವ ತಕ್ಷಣಕ್ಕೆ ತಗ್ಗುವ ಲಕ್ಷಣಗಳಿಲ್ಲ. ಹಾಗಂತ ಹೆಚ್ಚು ದಿನ ಲಾಕ್​ಡೌನ್ ಮುಂದುವರಿಸಿದರೆ ಜನಜೀವನ ದುರ್ಬರವಾಗಲಿದೆ. ಜನರ ಆರೋಗ್ಯ ರಕ್ಷಣೆ ಮತ್ತು ಸೋಂಕು ತಡೆ ಎರಡನ್ನೂ ಸಮರ್ಥವಾಗಿ ನಿಭಾಯಿಸುವಂಥ ಕಾರ್ಯತತ್ಪರತೆ ರೂಪಿಸಿಕೊಳ್ಳಬೇಕು ಎಂದು ಆಡಳಿತಾತ್ಮಕವಾಗಿ ನುರಿತವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಹಸಿರು ವಲಯದ ಸುರಕ್ಷತೆ, ಕೆಂಪು, ಕಿತ್ತಳೆ ಹಾಗೂ ಹಳದಿ ವಲಯಗಳಲ್ಲಿ ಹಂತಹಂತವಾಗಿ ಪರಿಸ್ಥಿತಿ ನಿಯಂತ್ರಿಸಿ ಹಸಿರು ವಲಯಗಳನ್ನಾಗಿ ಪರಿವರ್ತಿಸುವುದು. ಮುಂದಿನ ದಿನಗಳಲ್ಲಿ ಕರೊನಾ ವೈರಸ್ ಕಾಟ ನಿಯಂತ್ರಣ, ಸಹಜ ಜನಜೀವನಕ್ಕೆ ಅನುವು ಮಾಡಿಕೊಡುವುದು ಕಾರ್ಯತಂತ್ರದ ಭಾಗವಾಗಬೇಕು ಎನ್ನುವುದು ಬದಲಾವಣೆಯ ತಿರುಳಾಗಿದೆ.
ಕರೊನಾ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಸೇವೆಗಳ ಕ್ಷೇತ್ರದ ವೃತ್ತಿಪರರನ್ನು ಬಳಸಿಕೊಳ್ಳಲು ಸಾಧ್ಯವಿದೆ. ಜಿಲ್ಲಾ ಮತ್ತು ತಾಲೂಕುಮಟ್ಟದಲ್ಲಿ ಇಂಥವರು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯರಿದ್ದು, ಸೂಕ್ತ ಮಾರ್ಗದರ್ಶನ ಮತ್ತು ಅಲ್ಪಾವಧಿ ತರಬೇತಿ ನೀಡಿದರೆ ವೈದ್ಯರ ಕೊರತೆಯನ್ನು ನಿವಾರಿಸಬಹುದು. ಈ ಕ್ರಮದಿಂದ ವಿಶೇಷ ತಜ್ಞ ವೈದ್ಯರ ಮೇಲೆ ಅತಿ ಹೆಚ್ಚಿನ ಅವಲಂಬನೆ ತಗ್ಗುತ್ತದೆ. ಅಲ್ಲದೆ, ಸೀಮಿತ ಸಂಖ್ಯೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲಿನ ಕಾರ್ಯಭಾರದ ಹೊರೆ ಸ್ವಲ್ಪಮಟ್ಟಿಗೆ ಇಳಿಸುವುದಕ್ಕೂ ನೆರವಾಗುತ್ತದೆ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ಕರೊನಾ ಸೋಂಕು ನಿರ್ದಿಷ್ಟ ಪ್ರದೇಶಕ್ಕೆ ಬಾಧಿಸುತ್ತಿದ್ದು, ಸ್ಪಷ್ಟ ಕಾರಣಗಳು ಗೊತ್ತಾಗಿರುವುದರಿಂದ ಇನ್ನು ಮುಂದೆ ಕಾರ್ಯವಿಧಾನ ಬದಲಿಸಿಕೊಳ್ಳುವುದು ಸೂಕ್ತ. ವಿಕೇಂದ್ರೀಕೃತ ವ್ಯವಸ್ಥೆ ಹಾಗೂ ಸೂಕ್ಷ್ಮ ಯೋಜನೆ, ತಳಹಂತದಲ್ಲಿ ಅನುಷ್ಠಾನ ತಂಡಗಳನ್ನು ರಚಿಸಬೇಕು.
| ಎಂ.ಮದನ್ ಗೋಪಾಲ್ನಿವೃತ್ತ ಐಎಎಸ್ ಅಧಿಕಾರಿ
ಗ್ರಾಮ ಪಂಚಾಯತ್ ಹಾಗೂ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳನ್ನು ಒಂದು ಘಟಕವನ್ನಾಗಿ ಪರಿಗಣಿಸಿ ವಾರ್ಡ್ ಮಟ್ಟದಲ್ಲಿ ಸೂಕ್ಷ್ಮ ಯೋಜನೆ ರೂಪಿಸಬೇಕು. ಸಮುದಾಯದ ಸಹಭಾಗಿತ್ವದಿಂದ ಮಾತ್ರ ಪರಿಣಾಮಕಾರಿ ಜಂಟಿ ಕಾರ್ಯಾಚರಣೆ ಕೈಗೂಡಲಿದೆ. ಆರೋಗ್ಯ, ಪೊಲೀಸ್, ಮುನಿಸಿಪಾಲಿಟಿ, ಪಂಚಾಯಿತಿ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು, ಯುವ ಸಂಘಟನೆಗಳು, ಮಹಿಳಾ ಮಂಡಳಿಗಳನ್ನು ತಂಡಗಳು ಒಳಗೊಂಡಿರಬೇಕು. ಆರೋಗ್ಯ ಶಿಕ್ಷಣ, ಮಾಹಿತಿ, ಪ್ರಚಾರ ಹಾಗೂ ಜಾಗೃತಿ, ಲಾಕ್​ಡೌನ್ ಬಳಿಕ ದಿನಚರಿ ಹೇಗಿರಬೇಕು, ದೈಹಿಕ ದೂರ ಅಂತರ, ವೈಯಕ್ತಿಕ ಶುಚಿತ್ವ, ಸ್ವಚ್ಛತೆ ಇನ್ನಿತರ ಕಾರ್ಯಕ್ರಮಗಳನ್ನು ರೂಪಿಸಬೇಕೆಂಬ ಸಲಹೆಗಳನ್ನು ನೀಡಿದ್ದು, ಈ ನಿಟ್ಟಿನಲ್ಲಿ ಉನ್ನತಾಧಿಕಾರಿಗಳು ವಿಚಾರ ವಿನಿಮಯ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೀವು ‘ಕರೊನಾ ರೆಡ್​ ಝೋನ್​’ನಲ್ಲಿದ್ರೆ ಇದನ್ನೊಮ್ಮೆ ಓದಿಕೊಂಡು ಬಿಡಿ; ಕೇಂದ್ರದ ಖಡಕ್​ ನಿಯಮಗಳು ಇವು..ಮೀರೋ ಹಾಗಿಲ್ಲ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 17 =
Remember me
