ಉಡುಪಿ:ಬೀದಿನಾಯಿಗಳು ಒಂದನೇ ತರಗತಿಯ ಬಾಲಕಿಯ ಮೇಲೆ ತೀವ್ರ ದಾಳಿ ನಡೆಸಿದ್ದು, ಅವುಗಳು ಬಾಲಕಿಯ ತಲೆಗೇ ಕಚ್ಚಿರುವುದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಉಡುಪಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಉಡುಪಿಯ ಮಣಿಪಾಲ್ ಅಕಾಡೆಮಿ ಸ್ಕೂಲ್​ನ ಒಂದನೇ ತರಗತಿಯ ಬಾಲಕಿಯೊಬ್ಬಳ ಮೇಲೆ ಐದಾರು ಬೀದಿನಾಯಿಗಳು ದಾಳಿ ನಡೆಸಿವೆ. ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಆಕೆಯನ್ನು ಅಜ್ಜರಕಾಡಿನ ಆಸ್ಪತ್ರೆಗೆ ದಾಖಲಿಸಿದ್ದು, ಸುಮಾರು ಇಪ್ಪತ್ತು ಹೊಲಿಗೆಗಳನ್ನು ಹಾಕಲಾಗಿದೆ.
ಹಿರಿಯ ನ್ಯಾಯಾಧೀಶರಾದ ಶರ್ಮಿಳಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಕ್ಷೇಮದ ಕುರಿತು ವಿಚಾರಿಸಿದ್ದಾರೆ. ಉಡುಪಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಣಿಪಾಲ, ಇಂದ್ರಾಳಿ, ಸಿಟಿ ಬಸ್ ನಿಲ್ದಾಣ, ಅಜ್ಜರಕಾಡು, ಬೀಡಿನಗುಡ್ಡೆ ಪರಿಸರದಲ್ಲಿನ ಬೀದಿನಾಯಿಗಳ ಕಾಟ ನಿಯಂತ್ರಿಸುವಂತೆ ಜಿಲ್ಲಾ ನಾಗರಿಕರ ವೇದಿಕೆ ನಗರಸಭೆಗೆ ಮನವಿ ಮಾಡಿಕೊಂಡಿದೆ.
ಮಗನ ಶಿಕ್ಷಣದ ಖರ್ಚಿಗಾಗಿ ಎಲಾನ್​ ಮಸ್ಕ್ ಜತೆಗಿನ ಫೋಟೋ ಹರಾಜಿಗಿಟ್ಲು ಹಳೇ ಲವರ್​!
ಗಣೇಶನ ಹೆಸರಿರುವ 100 ಮಂದಿಗೆ ಚೌತಿಯಂದು ವಂಡರ್​ ಲಾಗೆ ಉಚಿತ ಪ್ರವೇಶ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
