ಬೆಂಗಳೂರು:ಕೋವಿಡ್-19 ಸೋಂಕಿನಿಂದ ಸರ್ಕಾರಿ ಕೋಟಾದಡಿ ಚಿಕಿತ್ಸೆಗೆ ದಾಖಲಾಗುವ ಬಡ ರೋಗಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೋವಿಡ್ ನೋಡೆಲ್ ಏಜೆನ್ಸಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಮೊದಲು ರೋಗಿಗಳಿಂದಲೇ ಚಿಕಿತ್ಸೆಯ ಮಾಹಿತಿ ಪಡೆದು ನಂತರ ಹಣ ಬಿಡುಗಡೆ ಮಾಡಲು ಮುಂದಾಗಿದೆ. ಸರ್ಕಾರಿ ಕೋಟಾದಡಿ ಚಿಕಿತ್ಸೆ ಪಡೆದವರಿಂದ ಹಣ ವಸೂಲಿ ಮಾಡುತ್ತಿರುವ ಕೆಲ ಖಾಸಗಿ ಆಸ್ಪತ್ರೆಗಳು ಮತ್ತೊಂದೆಡೆ ಅದೇ ರೋಗಿಗಳ ಹೆಸರಲ್ಲಿ ಸರ್ಕಾರದಿಂದಲೂ ಪ್ಯಾಕೇಜ್ ಹಣ ಪಡೆಯುತ್ತಿವೆ. ಇದರಿಂದ ರೋಗಿಗಳಿಗೆ ತೊಂದರೆಯಾಗುವುದಷ್ಟೇ ಅಲ್ಲದೆ, ಸರ್ಕಾರಕ್ಕೂ ನಷ್ಟವಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಹಣ ಬಿಡುಗಡೆ ಮಾಡುವ ಮುನ್ನ ರೋಗಿಗಳಿಂದ ಚಿಕಿತ್ಸೆಯ ಸಂಪೂರ್ಣ ಮಾಹಿತಿ ಪಡೆದು, ಆಸ್ಪತ್ರೆಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹಣ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
22.14 ಕೋಟಿ ರೂ. ಬಿಡುಗಡೆ: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ 14,789 ಪ್ರಕರಣಗಳಿಗೆ ಈಗಾಗಲೇ ಕ್ಲೈಮ್ ಸಲ್ಲಿಕೆಯಾಗಿವೆ. ಇದರ ಒಟ್ಟು ಮೊತ್ತ 52.95 ಕೋಟಿ ರೂ. ಆಗಲಿದೆ. ಈವರೆಗೂ 9,136 ಅರ್ಜಿಗಳನ್ನು ಇತ್ಯರ್ಥಗೊಳಿಸಿ, 22.14 ಕೋಟಿ ರೂ. ಚಿಕಿತ್ಸಾ ಮೊತ್ತವನ್ನು ಖಾಸಗಿ ಆಸ್ಪತ್ರೆಗಳಿಗೆ ಪಾವತಿ ಮಾಡಲಾಗಿದೆ. 80ಕ್ಕೂ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೋಗಿಗಳಿಂದ ಮಾಹಿತಿ ಸಂಗ್ರಹ
ಸರ್ಕಾರಿ ಕೋಟಾದಡಿ ಈವರೆಗೂ 42 ಸಾವಿರಕ್ಕೂ ಅಧಿಕ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾಗೆ ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ಚಿಕಿತ್ಸಾ ದರದ ಪ್ರಕಾರ ಈ ರೋಗಿಗಳ ಚಿಕಿತ್ಸಾ ವೆಚ್ಚ 169 ಕೋಟಿ ರೂ. ಆಗಬಹುದೆಂದು ಟ್ರಸ್ಟ್ ಅಂದಾಜು ಮಾಡಿದೆ. ಸದ್ಯ ಟ್ರಸ್ಟ್​ನಿಂದ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿದೆ. ರೋಗಿಗಳಿಗೆ ಕರೆ ಮಾಡಿರುವ ಟ್ರಸ್ಟ್​ನ ಸಿಬ್ಬಂದಿ ಯಾವಾಗ, ಯಾವ ಯಾವ ವಾರ್ಡ್​ನಲ್ಲಿ ಎಷ್ಟೆಷ್ಟು ದಿನ ಚಿಕಿತ್ಸೆ ಪಡೆದಿದ್ದೀರ, ಬಿಡುಗಡೆ ವೇಳೆ ಆಸ್ಪತ್ರೆಗೆ ಹಣ ಪಾವತಿ ಮಾಡಿದ್ದೀರಾ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. 45 ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹಣ ಪಡೆದಿರುವ ಮಾಹಿತಿ ಇದೆ ಎಂದು ಟ್ರಸ್ಟ್​ನ ಮೂಲಗಳು ತಿಳಿಸಿವೆ.
ಶಾಸಕರಿಗೆ ಪ್ಲಾಸ್ಮಾ ಚಿಕಿತ್ಸೆ
ಕರೊನಾದಿಂದ ಬಳಲುತ್ತಿರುವ ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಆರೋಗ್ಯ ಸ್ಥಿತಿ ಏರುಪೇರಾಗಿದ್ದು, ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದೆ.
ನರಸೀಪುರದಲ್ಲಿ ಔಷಧ ವಿತರಣೆ
ಶಿವಮೊಗ್ಗ ಜಿಲ್ಲೆ ನರಸೀಪುರ ಗ್ರಾಮದ ಖ್ಯಾತ ನಾಟಿ ವೈದ್ಯರಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹೆಸರಾಗಿದ್ದ ನಾರಾಯಣ ಮೂರ್ತಿ ಅವರ ಮನೆಯಲ್ಲಿ ಗುರುವಾರ ಮತ್ತೆ ನಾಟಿ ಔಷಧ ವಿತರಣೆ ಆರಂಭಗೊಂಡಿದೆ. ಕರೊನಾ ಹಿನ್ನೆಲೆಯಲ್ಲಿ ಮಾರ್ಚ್ ಮೊದಲ ವಾರದಿಂದ ಔಷಧ ವಿತರಣೆ ಸ್ಥಗಿತಗೊಳಿಸಲಾಗಿತ್ತು.
ಗುತ್ತೇದಾರ್​ಗೆ ಸೋಂಕು
ಮಾಜಿ ಸಚಿವರಾದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಕರೊನಾ ಸೋಂಕು ತಗುಲಿದೆ. ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ಕರೊನಾ ದೃಢಪಟ್ಟಿದೆ.
ಮಾಜಿ ಶಾಸಕ ಅಪ್ಪಾಜಿ ನಿಧನ
ಶಿವಮೊಗ್ಗ: ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಬುಧವಾರ ತಡರಾತ್ರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾದರು. ಬಳಿಕ ಕರೊನಾ ಟೆಸ್ಟ್ ಮಾಡಿದಾಗ ಸೋಂಕು ಇರುವುದು ದೃಢಪಟ್ಟಿದೆ. ಎರಡು ಬಾರಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮಂಡ್ಯ ಜಿಲ್ಲೆಯ ಎಂ.ಜೆ. ಅಪ್ಪಾಜಿ, ವಿಐಎಸ್​ಎಲ್ ಉದ್ಯೋಗಿಯಾಗಿದ್ದು 1989ರಲ್ಲಿ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣ ಪ್ರವೇಶ ಮಾಡಿದ್ದರು. 1994 ಹಾಗೂ 99ರ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. 2013ರಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2018ರಲ್ಲಿ ಸೋತಿದ್ದರು.
ಸಾವಿನ ತಡೆಗೆ ರೆಮ್ೆಸಿವರ್
ಕೋವಿಡ್ -19 ರೋಗಿಗಳ ಸಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ಅತ್ಯಂತ ಗಂಭೀರ ಪ್ರಕರಣಗಳಲ್ಲಿ ರೋಗಿಗಳಿಗೆ ರೆಮ್ೆಸಿವಿರ್ ಚುಚ್ಚುಮದ್ದು ಬಳಕೆ ಕುರಿತು ಮಾರ್ಗಸೂಚಿ ಪ್ರಕಟಿಸಿದೆ. ಈ ಚುಚ್ಚುಮದ್ದು ದುಬಾರಿ ಮಾತ್ರವಲ್ಲದೆ ಪರಿಣಾಮಕಾರಿ ಆಗಿರುವುದರಿಂದ ಅಗತ್ಯ ಇರುವ ರೋಗಿಗಳಿಗೆ ಮಾತ್ರವೇ ನೀಡಬೇಕು. ನೀಡಿದ ನಂತರ ಶೀಶೆಯನ್ನು ವಿಭಾಗೀಯ ಮೇಲ್ವಿಚಾರಣಾ ತಂಡದ ಅಧಿಕಾರಿಗಳ ಪರಿಶೀಲನೆಗೆ ಅನುವಾಗುವಂತೆ ಸಂರಕ್ಷಿಸಿಡಬೇಕು ಎಂದು ಸೂಚಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + twelve =
Remember me
