ವಿಜಯವಾಣಿ ಸುದ್ದಿಜಾಲ ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ (ಹಾವೇರಿ)
ಐದನೇ ತರಗತಿವರೆಗೆ ಕನ್ನಡ ಕಲಿಕೆ ಕಡ್ಡಾಯ. ತದನಂತರ ನಿಮ್ಮ ಬೌದ್ಧಿಕ ಸಾಮರ್ಥ್ಯದ ಮೇಲೆ ಎಷ್ಟು ಭಾಷೆಗಳನ್ನಾದರೂ ಕಲಿಯಿರಿ. ಅದಕ್ಕೆ ನಮ್ಮ ವಿರೋಧವಿಲ್ಲ ಎಂಬ ಸಂದೇಶ ಸಾರುವ ಮೂಲಕ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಕನ್ನಡಿಗರಿಗೆ ಕನ್ನಡಾಭಿಮಾನದ ಪಾಠ ಮಾಡಿದರು. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ. ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಮಲಯಾಳಿ ಶಿಕ್ಷಕರ ನೇಮಕ ಮಾಡುತ್ತಿರುವುದು ಖಂಡನೀಯ. ಇಂಗ್ಲಿಷ್ ಭಾಷೆಯ ವ್ಯಾಮೋಹ ತೊರೆದು ಭಾಷಾಪ್ರೇಮ ಬೆಳೆಸಬೇಕು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ ಉಳಿಸಿ ಬೆಳೆಸುವಂತೆಯೂ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕನ್ನಡವೇ ಮೊದಲು, ಉಳಿದಿದ್ದೆಲ್ಲ ಆಮೇಲೆ, ಇದು ಕನ್ನಡದ ಸೈದ್ಧಾಂತಿಕ ಕರ್ತವ್ಯ. ಎಡ, ಬಲ, ಮಧ್ಯಮಗಳೇನೆ ಇರಲಿ, ಕನ್ನಡ ಎಂಬುದು ಅನ್ನದ ಹಕ್ಕಿನ ಭಾಷೆ. ಮಹತ್ವಾಕಾಂಕ್ಷೆಯ ಭಾಷೆ, ಉದ್ಯೋಗಶೀಲತೆಯ ಭಾಷೆ, ಕ್ರಿಯಾಶೀಲ ಭಾಷೆ ನಮ್ಮ ಕನ್ನಡ ಎನ್ನುವುದನ್ನು ಯಾರೂ ಮರೆಯಬಾರದು ಎಂದು ದೊಡ್ಡರಂಗೇಗೌಡರು ಕಿವಿಮಾತು ಹೇಳಿದರು.
ಶಾಸ್ತ್ರೀಯ ಸ್ಥಾನಮಾನ:ಕನ್ನಡಕ್ಕೆ ದೊರೆತಿರುವ ಶಾಸ್ತ್ರಿಯ ಭಾಷೆ ಸ್ಥಾನಮಾನದ ಪ್ರಯೋಜನ ಪಡೆದುಕೊಳ್ಳಬೇಕಾದರೆ ರಾಜ್ಯ ಸರ್ಕಾರದ ಇಚ್ಛಾಶಕ್ತಿ ಅತ್ಯಗತ್ಯ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ಅನುಗುಣವಾಗಿ ಹೆಚ್ಚಿನ ಸೌಲಭ್ಯಗಳು ಹಾಗೂ ಅನುದಾನ ತರುವುದಕ್ಕೆ ಮಂತ್ರಿಗಳು, ಸಂಸದರ ಹೋರಾಟ ಅತೀ ಅವಶ್ಯ. ನಿಮ್ಮ ಜತೆ ನಾವು ದೆಹಲಿಗೆ ಬರುತ್ತೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇರುವುದರಿಂದ ಕನ್ನಡ ಭಾಷೆಯ ಬೆಳವಣಿಗೆ ಅದರ ಉಪಯೋಗ ದಕ್ಕಬೇಕಿದೆ. ಕನ್ನಡ ಬಿಟ್ಟು ಕನ್ನಡಿಗ, ಕನ್ನಡಿಗ ಬಿಟ್ಟು ಕರ್ನಾಟಕ ಇಲ್ಲ ಎಂದು ಸಮ್ಮೇಳನಾಧ್ಯಕ್ಷರು ಸ್ಪಷ್ಟಪಡಿಸಿದರು.
ಸಹಜೀವನ ನಮ್ಮ ಸಂಸ್ಕೃತಿಯಲ್ಲ:ನಾನು ಆಂಗ್ಲ ವಿರೋಧಿ ಅಲ್ಲ. ಆದರೆ, ಕನ್ನಡಕ್ಕೆ ಮೊದಲ ಆದ್ಯತೆ ನನ್ನದು. ಕನ್ನಡಿಗರು ಎಲ್ಲ ಭಾಷೆಯನ್ನು ತಲೆಯ ಮೇಲೆ ಹೊತ್ತು ತಿರುಗಿ, ನಮ್ಮ ತಾಯಿ ಭಾಷೆ ಯನ್ನು ಹೊರಹಾಕುತ್ತಿದ್ದೇವೆ. ತುಂಡು ಬಟ್ಟೆ ಉಟ್ಟವರ ಮೇಲೆ ವ್ಯಾಮೋಹಕ್ಕೆ (ಆಂಗ್ಲಭಾಷೆ) ಒಳಗಾಗುತ್ತಿರುವ ನಾವು, ಹರಿದ ಸೀರೆಯೂಟ್ಟ ತಾಯಿಯನ್ನು ತಾಯಿ ಎನ್ನುತ್ತಿಲ್ಲ. ಸಹಜೀವನ (ಲಿವಿಂಗ್ ಟುಗೆದರ್) ಸಂಪ್ರದಾಯ ನಾಡಿನ ಸಂಸ್ಕೃತಿಗೆ ವಿರುದ್ಧ. ಹೀಗಾಗಬಾರದು. ಇದು ಕನ್ನಡದ ಸಂಸ್ಕೃತಿಯಲ್ಲ. ಎಲ್ಲ ಭಾಷೆಯನ್ನು ಕಲಿಯಿರಿ. ಆದರೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನಿರಿ. ಕನ್ನಡ ಈಗ ವಿಶ್ವಮುಖಿ ಎಂದು ಉದ್ಘರಿಸಿದರು.
ರಾಜ್ಯದಲ್ಲಿ ಕನ್ನಡಿಗನೇ ಸಾರ್ವಭೌಮ, ಉದ್ಯೋಗದ ವಿಷಯದಲ್ಲೂ ಕೂಡ. ಕೈಗಾರಿಕೆಗಳಲ್ಲಿ ಶೇ.80ರಷ್ಟು ಕನ್ನಡಿಗರಿಗೆ ಕೆಲಸ ನೀಡುವುದನ್ನು ಕಡ್ಡಾಯಗೊಳಿಸುವ ಕಾನೂನು ಶೀಘ್ರ ಜಾರಿ ಆಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಶುಕ್ರವಾರ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಮುಂಬರುವ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ಅನುಮೋದನೆ ಪಡೆಯಲಾಗುವುದು. ಇದಕ್ಕೂ ಮುನ್ನ ವಿಧಾನಸಭೆ ಒಳ-ಹೊರಗೆ ಈ ಬಗ್ಗೆ ಸುದೀರ್ಘ ಚರ್ಚೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ವಿಧೇಯಕಕ್ಕೆ ಕಾನೂನು ಆಯೋಗ ಸ್ಪಷ್ಟ ಅಭಿಪ್ರಾಯ ನೀಡಿದೆ. ಆದರೆ, ಇದರಲ್ಲಿ ಸಾಹಿತ್ಯಕ ಅಂಶಗಳಿಲ್ಲ ಎಂದು ಸಾಹಿತ್ಯ ಪರಿಷತ್ ಕೆಲ ಬದಲಾವಣೆ ಕೋರಿದೆ. ಗಡಿನಾಡು ಕನ್ನಡಿಗರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಸಮ್ಮೇಳನದ ಚರ್ಚೆಗಳ ಆಧಾರದಲ್ಲಿ ಸಮಾರೋಪದಲ್ಲಿ ತೀರ್ಮಾನಿಸಿ ಭರವಸೆ ನೀಡಲಾಗುವುದು ಎಂದರು.
ಮುಖ್ಯಾಂಶಗಳು:ಗಡಿನಾಡು, ಹೊರನಾಡು, ಒಳನಾಡಿಗೆ ಸಮಾನ ಸ್ಥಾನಮಾನ; ಕನ್ನಡಕ್ಕೆ ಭಾಷೆಗೆ ಕಾನೂನು ಸ್ವರೂಪ
ಮದುವೆ ಆಗಿಲ್ಲ ಅಂದ್ರೆ ಮನೆ ಖಾಲಿ ಮಾಡಿ: ಬಾಡಿಗೆದಾರರಿಗೆ ವಿಚಿತ್ರ ಎಚ್ಚರಿಕೆ

ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + four =
Remember me
