ಬೆಂಗಳೂರು: ಡ್ರಗ್ಸ್ ಮಾಫಿಯಾ ಜಾಲ ಭೇದಿಸುವ ನಿಟ್ಟಿನಲ್ಲಿ ಸಿಸಿಬಿಯವರೇ ಕ್ರಮಬದ್ಧವಾಗಿ ಹಾಗೂ ಶಿಸ್ತಿನಿಂದ ತನಿಖೆ ಮಾಡುತ್ತಿದ್ದಾರೆ. ಮತ್ತಷ್ಟು ಬಿಗಿ ಕ್ರಮದ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್ ಟಿ ನಗರದಲ್ಲಿನ ತಮ್ಮ ನಿವಾಸದ ಬಳಿ ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಾರು ಎಷ್ಟೇ ದೊಡ್ಡವರಿದ್ದರೂ ಕಾನೂನಿನ ರೀತಿಯಲ್ಲೇ ಕ್ರಮವಾಗಲಿದೆ. ಯಾವುದೇ ಒತ್ತಡಕ್ಕೂ ಮಣಿಯಲ್ಲ. ಸಾಕ್ಷ್ಯಾಧಾರಗಳ ಪ್ರಕಾರವೇ ಎಲ್ಲವೂ ನಡೆಯಲಿದೆ.
ಇದನ್ನೂ ಓದಿ:ರಿಲಯನ್ಸ್​ಗೆ ಭಾರತದ ದಿಗ್ಗಜ ಕಂಪನಿ ಶ್ರೇಯ; 14.68 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ; ಷೇರು ಬೆಲೆ ಭಾರಿ ಏರಿಕೆ
ತಜ್ಞರ ಜತೆ ಚರ್ಚೆ: ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಬೇಕಿದೆ ಅನ್ನೋ ಅಭಿಪ್ರಾಯವಿದೆ. ಈ ಸಂಬಂಧ ಕಾನೂನು ತಜ್ಞರು ಹಾಗೂ ಕಾನೂನು ಸಚಿವರ ಜತೆಗೆ ಚರ್ಚಿಸುವೆ. ಈಗಿರುವ ಕಾನೂನನ್ನು ಬಿಗಿ ಮಾಡಬೇಕೆಂಬ ಸಲಹೆ, ಅನಿಸಿಕೆಗಳಿವೆ. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಲಾ ಅವರೊಂದಿಗೂ ಚರ್ಚೆ ಮಾಡುವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೃಷಿ ಅಧಿಕಾರಿಗಳು ರೈತಸ್ನೇಹಿಗಳಾಗಬೇಕೇ ಹೊರತು ವ್ಯಾಪಾರಿ ಸ್ನೇಹಿಯಲ್ಲ: ಬಿ.ಸಿ.ಪಾಟೀಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − fourteen =
Remember me
