ರಾಣೆಬೆನ್ನೂರು:ಯುದ್ಧಪೀಡಿತ ಯೂಕ್ರೇನ್​ನಲ್ಲಿ ಬಲಿಯಾದ ತಾಲೂಕಿನ ಚಳಗೇರಿ ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನಗೌಡರ ಮೃತದೇಹದ ವಿಡಿಯೋವನ್ನು ಸ್ನೇಹಿತರು ಬುಧವಾರ ಆತನ ಪಾಲಕರಿಗೆ ಕಳುಹಿಸಿದ್ದಾರೆ. ಮಗನನ್ನು ಪಾಲಕರು ಗುರುತಿಸಿದ್ದಾರೆ. ಆದರೆ, ಮೃತದೇಹವನ್ನು ದೇಶಕ್ಕೆ ಕರೆತರುವ ಬಗ್ಗೆ ಸ್ಪಷ್ಟ ಸಂದೇಶ ಸಿಗದೆ ಪಾಲಕರು ಕಣ್ಣೀರಿಡುತ್ತಿದ್ದಾರೆ. ಬುಧವಾರ ಮಧ್ಯಾಹ್ನ ನವೀನ್ ಮನೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪಾಲಕರಿಗೆ ಸಾಂತ್ವನ ಹೇಳಿದರು. ನವೀನ್ ಪಾರ್ಥಿವ ಶರೀರ ತರಿಸುವ ಬಗ್ಗೆ ಈಗಾಗಲೆ ಪ್ರಯತ್ನ ಮಾಡಿದ್ದೇವೆ. ಈ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ ಜತೆ ಮಾತನಾಡಿದ್ದೇನೆ. ಯೂಕ್ರೇನ್​ಗೆ ಹೋಗಿರುವ ನಾಲ್ವರು ಸಚಿವರೊಂದಿಗೂ ಸತತವಾಗಿ ಸಂಪರ್ಕದಲ್ಲಿದ್ದೇನೆ. ಆದಷ್ಟು ಬೇಗ ಪಾರ್ಥಿವ ಶರೀರ ತರಿಸುವ ವ್ಯವಸ್ಥೆ ಮಾಡುತ್ತೇವೆ. ನಿಮ್ಮ ಇನ್ನೋರ್ವ ಮಗನಿಗೆ ಸರ್ಕಾರಿ ನೌಕರಿ ಕೊಡಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ರ್ಚಚಿಸುತ್ತೇನೆ ಎಂದು ಸಂತೈಸಿದರು.
ನವದೆಹಲಿಯಲ್ಲಿ ಬುಧವಾರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಅವರನ್ನು ಭೇಟಿ ಮಾಡಿದ ಹಾವೇರಿ ಸಂಸದ ಶಿವಕುಮಾರ ಉದಾಸಿ ಮೃತ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಹಾಗೂ ಅಲ್ಲಿರುವ ವಿದ್ಯಾರ್ಥಿಗಳನ್ನು ಶೀಘ್ರ ಕರೆತರಲು ಮನವಿ ಮಾಡಿದರು. ವಿದೇಶಾಂಗ ವಿಭಾಗದ ಉಸ್ತುವಾರಿ ವಿಜಯ ಚವಟಿಯಾವಾಲಾ ಇದ್ದರು.
ಬೆಂಗಳೂರು:ಯುದ್ಧ ಪೀಡಿತ ಯೂಕ್ರೇನ್​ನಿಂದ ಕರ್ನಾಟಕದ ವಿದ್ಯಾರ್ಥಿಗಳನ್ನು ಕರೆತರುವ ಕೆಲಸ ಆರಂಭವಾಗಿದೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ. ಯೂಕ್ರೇನ್​ನಲ್ಲಿ ಯುದ್ಧದಿಂದಾಗಿ ಬಂಕರ್​ನಲ್ಲಿ ಕಾಲ ಕಳೆಯುತ್ತಿದ್ದ ರಾಯಚೂರು ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಬುಧವಾರ ರೈಲಿನಲ್ಲಿ ಇತರ ದೇಶಗಳ ಗಡಿಯತ್ತ ಪ್ರಯಾಣ ಬೆಳೆಸಿರುವ ಮಾಹಿತಿ ಲಭ್ಯವಾಗಿದೆ. ಎಂಬಿಬಿಎಸ್ ಓದುತ್ತಿರುವ ಜಿಲ್ಲೆಯ ರುಬೀನಾ, ತೃಪ್ತಿ ಪೂಜಾರಿ, ಸೋಮು ತುರ್ವಿಹಾಳ ಹಾಗೂ ನಂದೀಶ ಬಾರ್ದಲಿ ಭಯದ ನಡುವೆ ಭಾರತದ ಬಾವುಟ ಹಿಡಿದುಕೊಂಡು ಕಾಲ್ನಡಿಗೆಯಲ್ಲಿ ರೈಲು ನಿಲ್ದಾಣ ತಲುಪಿ, ರೈಲಿನಲ್ಲಿ ಕುಳಿತಿರುವ ಬಗ್ಗೆ ಪಾಲಕರಿಗೆ ಧ್ವನಿ ಸಂದೇಶ ಕಳುಹಿಸಿದ್ದಾರೆ. ರಾಯಚೂರು ನಗರದ ವೈ.ಎಸ್.ಮಯೂರ ಒಂದೆರಡು ದಿನಗಳಲ್ಲಿ ಭಾರತಕ್ಕೆ ಹಿಂತಿರುಗುವ ಸಾಧ್ಯತೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ 18 ಮಂದಿಯಲ್ಲಿ 10 ಮಂದಿ ಸುರಕ್ಷಿತವಾಗಿ ಸ್ಲೋವಾಕಿಯಾ, ಹಂಗೇರಿ ಹಾಗೂ ರೊಮಾನಿಯಾ ದೇಶಗಳಿಗೆ ತಲಪಿದ್ದಾರೆ. ಉಳಿದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಯೂಕ್ರೇನ್ ಗಡಿ ದಾಟುವ ಕೊನೆ ಹಂತದಲ್ಲಿದ್ದು, ಬುಧವಾರ ರಾತ್ರಿ ವೇಳೆ ಗಡಿ ದಾಟಿ ಬೇರೆ ಬೇರೆ ದೇಶಗಳನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಆದರೆ ಕೆಲವರು ಮಾತ್ರ ಫೋನ್ ಸ್ವಿಚ್ ಆಫ್ ಮಾಡಿದ್ದರಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ಅವರೆಲ್ಲರೂ ಸುರಕ್ಷಿತರಾಗಿದ್ದಾರೆ ಎನ್ನುವ ಮಾಹಿತಿ ಕುಟುಂಬದವರಿಗೆ ಲಭಿಸಿದೆ. ಹಾಸನದ 6, ಬೆಳಗಾವಿಯ 17 ವಿದ್ಯಾರ್ಥಿಗಳು ಅಲ್ಲಿಯೇ ಬಾಕಿ ಉಳಿದಿದ್ದಾರೆ.
ನವೀನ್ ಸಾವಿನ ಕುರಿತು ತನಿಖೆ:ಯೂಕ್ರೇನ್​ನಲ್ಲಿ ರಷ್ಯಾದ ಶೆಲ್ಲಿಂಗ್​ಗೆ ಸಿಲುಕಿ ಭಾರತದ ವಿದ್ಯಾರ್ಥಿ ನವೀನ್ ಮೃತಪಟ್ಟ ಪ್ರಕರಣದ ತನಿಖೆಯನ್ನು ರಷ್ಯಾ ನಡೆಸಲಿದೆ. ರ್ಖಾವ್, ಸುಮಿ ಮತ್ತು ಇತರೆ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರ ವಾಪಸಾತಿಗೆ ಸುರಕ್ಷಿತ ಮಾರ್ಗ ಒದಗಿಸಲು ರಷ್ಯಾ ಕ್ರಮ ತೆಗೆದುಕೊಳ್ಳಲಿದೆ ಎಂದು ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ತಿಳಿಸಿದ್ದಾರೆ.
ಯೂಕ್ರೇನ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾವೇರಿಯ ವಿದ್ಯಾರ್ಥಿ ನವೀನ್ ಮರಣದ ಸಂಗತಿ ನೋವು ತಂದಿದೆ. ಕುಟುಂಬದ ಜತೆಗೆ ಸರ್ಕಾರ ನಿಲ್ಲಲಿದೆ. ಈ ವಿಚಾರ ನೆಪವಾಗಿಟ್ಟುಕೊಂಡು ಜಾತಿ ವ್ಯವಸ್ಥೆ, ಮೀಸಲಾತಿ ಬಗ್ಗೆ ಮಾತನಾಡುವುದು ಸರಿಯಲ್ಲ. ಸರ್ಕಾರವು ಕಡುಬಡವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಬಗ್ಗೆಯೂ ಚಿಂತಿಸಬೇಕಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಶೇ.40 ಸೀಟುಗಳನ್ನು ಪ್ರತಿಭಾವಂತ ಬಡವರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಇದರಿಂದ ಬಡ ಕುಟುಂಬದ ಮಕ್ಕಳೂ ವೈದ್ಯರಾಗಬಹುದಾಗಿದೆ.
|ಡಾ.ಸಿ.ಎನ್.ಅಶ್ವತ್ಥ ನಾರಾಯಣಉನ್ನತ ಶಿಕ್ಷಣ ಸಚಿವ
ದೇಶದಲ್ಲಿ ವೈದ್ಯಕೀಯ ಶಿಕ್ಷಣ ಸುಲಭವಾಗಿ ದೊರೆಯುವಂತೆ ಮಾಡಬೇಕು. ಇಲ್ಲವಾದರೆ ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವುದರಿಂದ ಏನೆಲ್ಲ ಸಮಸ್ಯೆಗಳು ಉಂಟಾಗುತ್ತವೆ ಎನ್ನುವುದಕ್ಕೆ ಯೂಕ್ರೇನ್ ಘಟನೆ ಸಾಕ್ಷಿ.
| ಚಂದನ್ ಯೂಕ್ರೇನ್​ನಿಂದ ಹಿಂದಿರುಗಿದ ಮೈಸೂರು ವಿದ್ಯಾರ್ಥಿ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ರಿಷಬ್​ ಶೆಟ್ಟಿ ಬೇಸರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
