ರಾಮನಗರ:ಒಂದು ಹಗ್ಗ, ಒಂದು ಕಂಬ, ಎರಡು ಸಾವು ಎಂಬ ರೀತಿಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯ ದುರ್ಮರಣವಾಗಿದ್ದು, ಜೊತೆಗೆ ಹಸು ಕೂಡ ಮೃತಪಟ್ಟಿದೆ. ಆತನ ಸಹೋದರ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಮಂಚೇಗೌಡನಪಾಳ್ಯ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಸಿದ್ದರಾಜು ಸಾವಿಗೀಡಾದ ವಿದ್ಯಾರ್ಥಿ. ಈತನ ಸಹೋದರ ಮಾಳಪ್ಪ ಪ್ರಾಣಾಪಾಯದಿಂದ ಪಾರಾದವ. ಮನೆಗೆ ಹತ್ತಿರದ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಹಸುವನ್ನು ನೋಡಲು ಸಿದ್ದರಾಜು ಹೋಗಿದ್ದಾಗ ಈ ದುರಂತ ಸಂಭವಿಸಿದೆ.
ಇದನ್ನೂ ಓದಿ:ಎಂಟು ವರ್ಷದ ಈ ಬಾಲಕಿ ಟಿವಿ ನೋಡುವ ಸ್ಟೈಲೇ ವಿಚಿತ್ರ!; ವಿಡಿಯೋ ವೈರಲ್
ವಿದ್ಯುತ್ ಪ್ರವಹಿಸಿ ಹಸು ಸಾವಿಗೀಡಾಗಿತ್ತು. ಅದನ್ನು ನೋಡಲು ಹೋಗಿದ್ದ ಸಿದ್ದರಾಜು ಹಸುವನ್ನು ಮುಟ್ಟಲು ಹೋಗಿ ಆತನೂ ವಿದ್ಯುತ್​ ಶಾಕ್​ನಿಂದ ಸಾವಿಗೀಡಾಗಿದ್ದಾನೆ. ಅವನ ಶವ ಮುಟ್ಟಿದ ಸಹೋದರನ ಬೆರಳಿಗೆ ಗಾಯವಾಗಿದ್ದು, ಸ್ವಲ್ಪದರಲ್ಲೇ ಬಚಾವಾಗಿದ್ದಾನೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಗ್ರಾಮಸ್ಥರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಟಿಕೆಟ್ ತೆಗೆದುಕೊಳ್ಳಲು ಹೇಳಿದ್ದಕ್ಕೆ ಕಂಡಕ್ಟರ್​ ಹತ್ತಿರ ಜಗಳವಾಡಿದ ಯುವತಿ; ಕೇಂದ್ರ ಸರ್ಕಾರಿ ಉದ್ಯೋಗಿ ಎಂದು ರಂಪ

‘ಎಲ್ಲರಿಗಿಂತ ಬೆಳ್ಳಗಿದ್ದಾಳೆ’ ಎಂದು ಯುವತಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ ಕಂಪನಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × four =
Remember me
