ಶಿವಮೊಗ್ಗ:ಹಸು ಬಾಯಾರಿಕೆ ನೀಗಿಸಲು ಹೋದ ಯುವಕನೊಬ್ಬ ಅಸುನೀಗಿದ ಪ್ರಕರಣವೊಂದು ನಡೆದಿದೆ. ಶಿವಮೊಗ್ಗ ತಾಲೂಕಿನ ಬೀರನಕೆರೆ ಸಮೀಪ ಈ ಅವಘಡ ನಡೆದಿದ್ದು, ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.
ಬೀರನಕೆರೆಯ ರವಿನಾಯ್ಕ (18) ಮೃತಪಟ್ಟ ಯುವಕ. ಈತ ಮಂಜುನಾಯ್ಕ ಮತ್ತು ಗೀತಾ ಬಾಯಿ ದಂಪತಿಯ ಪುತ್ರ, ಶಿವಮೊಗ್ಗ ಬಿ.ಎಚ್. ರಸ್ತೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ. ಆದರೆ ಇಂದು ಎಂಪಿಎಂ ಕೆರೆಯಲ್ಲಿ ಹಸುವಿಗೆ ನೀರು ಕುಡಿಸಲು ಹೋದಾಗ ಸಾವಿಗೀಡಾಗಿದ್ದಾನೆ.
ಭಾನುವಾರ ರಜೆ ಇದ್ದುದ್ದರಿಂದ ಹಸು ಮೇಯಿಸಲು ಹೋಗಿದ್ದ. ಮಧ್ಯಾಹ್ನ ಗ್ರಾಮದ ಸಮೀಪದ ಎಂಪಿಎಂ ಕೆರೆಯಲ್ಲಿ ನೀರು ಕುಡಿಸಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಪಾಲಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..

ಎಸ್​ಬಿಐನಿಂದ ರಿಸರ್ವ್​ ಬ್ಯಾಂಕ್​ಗೇ ನಕಲಿ ನೋಟು ಜಮೆ!; ಭಾರತೀಯ ಸ್ಟೇಟ್​ ಬ್ಯಾಂಕ್​ ವಿರುದ್ಧ ಎಫ್​ಐಆರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
