ತುಮಕೂರು:ವಿದ್ಯಾರ್ಥಿಯೊಬ್ಬ ಶಾಲಾ ಬಸ್​ನಿಂದ ಕೆಳಕ್ಕೆ ಬಿದ್ದಿದ್ದು, ತಲೆ ಮೇಲೇ ಬಸ್​ ಹಾದು ಹೋದ್ದರಿಂದ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ತುಮಕೂರು ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.
ಬಾಲಾಜಿ (10) ಸಾವಿಗೀಡಾದ ವಿದ್ಯಾರ್ಥಿ. ಈತ ಕುಣಿಗಲ್ ಪಟ್ಟಣದ ಬಿಜಿಎಸ್ ಪಬ್ಲಿಕ್ ಸ್ಕೂಲ್​ನಲ್ಲಿ ನಾಲ್ಕನೇ‌ ತರಗತಿ ವಿದ್ಯಾರ್ಥಿ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೇರೂರು ಸಮೀಪದ ಈಚಲಪಾಳ್ಯದ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ವಿಜಯವಾಣಿ ವಿಶೇಷ ವರದಿಗೆ ಸ್ಪಂದಿಸಿದ ಸಿಎಂ; ಸಂಕಷ್ಟದಲ್ಲಿದ್ದಾಕೆಯ ಸಮಸ್ಯೆ ಪರಿಹಾರ
ಇಂದು ಶಾಲೆಯಿಂದ ಮರಳುವಾಗ ಒಂದು ಸ್ಟಾಪ್ ಮೊದಲೇ ಈತ ಬಾಗಿಲ ಬಳಿ ಬಂದು ನಿಂತಿದ್ದ. ಚಾಲಕ ವಾಹನ ರಿವರ್ಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಯತಪ್ಪಿ ಕೆಳಕ್ಕೆ ಬಿದ್ದ ಈತನ ತಲೆ ಮೇಲೇ ಬಸ್ ಹಾದು ಹೋಗಿದೆ. ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಸಂಬಂಧಿಕರು ಬಿಜಿಎಸ್ ಸ್ಕೂಲ್​ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು!

ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 18 =
Remember me
