ಬೆಂಗಳೂರು:ಅಪಾರ್ಟ್​ಮೆಂಟ್​ವೊಂದರ ಹನ್ನೊಂದನೇ ಮಹಡಿಯಿಂದ ಕೆಳಕ್ಕೆ ಬಿದ್ದ ಯುವತಿಯೊಬ್ಬಳು ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ನಗರದ ಚಾಲುಕ್ಯ ಸರ್ಕಲ್ ಬಳಿಯ ಎಚ್​ಪಿ-3 ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ.
ಯುವತಿಯನ್ನು ಪ್ರಕೃತಿ ಎಂದು ಗುರುತಿಸಲಾಗಿದೆ. ಸಂಜಯನಗರದ ನಿವಾಸಿಯಾಗಿರುವ ಈಕೆ ಸೋಫಿಯಾ ಕಾಲೇಜಿನ ವಿದ್ಯಾರ್ಥಿನಿ ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಯುವತಿ ಲಿಫ್ಟ್ ಬಳಿ ಬಂದು ಪ್ರವೇಶಿಸಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ನಾಳೆ ಮೋದಿ ಉದ್ಘಾಟಿಸಲಿರುವ ರೈಲ್ವೇ ನಿಲ್ದಾಣದ ಮುಂದೆ ಇಂದು ಪ್ರತಿಭಟನೆ; ಪ್ರಧಾನಿಗೆ ಕಪ್ಪು ಬಾವುಟ ತೋರುವ ಎಚ್ಚರಿಕೆ
ಮೇಲಿನಿಂದ ಬಿದ್ದ ಯುವತಿ ಕೆಳಗೆ ನಿಲುಗಡೆ ಮಾಡಲಾಗಿದ್ದು ಕಾರೊಂದರ ಹಿಂದಿನ ಗಾಜಿನ ಮೇಲೆ ಬಿದ್ದಿದ್ದಳು. ಬಿದ್ದ ರಭಸಕ್ಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಯುವತಿಯ ಜೇಬಿನಲ್ಲಿ ಒಂದು ಮೊಬೈಲ್​ಫೋನ್ ಮತ್ತು 300 ರೂಪಾಯಿ ಸಿಕ್ಕಿದೆ ಎನ್ನಲಾಗಿದೆ.
ಇದನ್ನೂ ಓದಿ:ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!
ಸ್ಥಳಕ್ಕೆ ಯುವತಿಯ ತಂದೆ ಅರವಿಂದ ಮತ್ತು ತಾಯಿ ತೇಜು ಆಗಮಿಸಿದ್ದಾರೆ. ಯುವತಿಯ ತಂದೆ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದು, ಯುವತಿ ಪಿಯುಸಿ ವಿದ್ಯಾರ್ಥಿನಿ ಎನ್ನಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 3 =
Remember me
