ಬೆಂಗಳೂರು:ಇಂದು ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಯುವಕನೋರ್ವ ಫಲಿತಾಂಶ​​ ಬರುವ ಮುನ್ನವೇ ನಾಪತ್ತೆಯಾಗಿರುವ ಘಟನೆ ಬೆಂ.ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾ. ಬೆಟ್ಟಹಳ್ಳಿಯಲ್ಲಿ ನಡೆದಿದೆ.
ಮಂಡಿಗೆರೆ ಸರ್ಕಾರಿ ಶಾಲೆ ವಿದ್ಯಾರ್ಥಿ ಚಂದನ್​ ಗೌಡ(16) ರಿಸಲ್ಟ್​ಗೆ ಭಯಬಿದ್ದು ನಾಪತ್ತೆಯಾಗಿದ್ದಾನೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ  ನಾಪತ್ತೆಯಾಗಿದ್ದಾನೆ. ಈತ ಘಟನೆ ಬೆಂ.ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾ. ಬೆಟ್ಟಹಳ್ಳಿಯ ನಿವಾಸಿಯಾಗಿದ್ದಾನೆ.
ಸುರೇಶ್​ ಮತ್ತು ರೂಪ ದಂಪತಿ ಪುತ್ರ ಚಂದನ್​ ಗೌಡ ಬೈರನಾಯಕನಹಳ್ಳಿ ರೈಲ್ವೆ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದಾನೆ. ಮಗನ ಫೋಟೋ ಹಿಡಿದು ಪೋಷಕರು ಹುಡುಕಾಡುತ್ತಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು ಟಾಪ್ ಆಗಿ ಹೊರಹೊಮ್ಮಿದ್ದಾಳೆ. 625ಕ್ಕೆ 625 ಅಂಕ ಪಡೆದಿದ್ದಾಳೆ. ಅಂಕಿತಾ ಕೊನ್ನೂರು ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ. 7 ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ ಸಿಕ್ಕಿದೆ. ಬೆಂಗಳೂರಿನ ವಿದ್ಯಾರ್ಥಿನಿ ಮೇಧಾ ಪಿ. ಶೆಟ್ಟಿ ಮಧುಗಿರಿಯ ವಿದ್ಯಾರ್ಥಿನಿ ಡಿ.ಎಂ.ಹರ್ಷಿತಾ, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿ ಚಿನ್ಮಯ್, ಚಿಕ್ಕೋಡಿಯ ವಿದ್ಯಾರ್ಥಿ ಸಿದ್ಧಾಂತ್, ಶಿರಸಿಯ ವಿದ್ಯಾರ್ಥಿ ದರ್ಶನ್, ಚಿನ್ಮಯ್, ಶ್ರೀರಾಮ್ 625ಕ್ಕೆ 624 ಪಡೆದಿದ್ದಾರೆ.
SSLC ಫಲಿತಾಂಶ ಪ್ರಕಟ; ಬಾಗಲಕೋಟೆ ಅಂಕಿತಾ 625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 4 =
Remember me
