ಬೆಂಗಳೂರು:ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಸೂಚನೆಯನ್ನು ಗಮನವಿಟ್ಟು ಓದದೆ, ಹಳೇ ಪದ್ಧತಿಯ ಪ್ರಶ್ನೆಪತ್ರಿಕೆಗೆ ಉತ್ತರಿಸಿ ಇದೀಗ 70 ಅಂಕಗಳಿಗೆ ವಿಶ್ವವಿದ್ಯಾಲಯವು 73 ಅಂಕಗಳನ್ನು ನೀಡಿದೆ ಎಂದು ಸುದ್ದಿಗೆ ಎಡೆಮಾಡಿಕೊಟ್ಟು ಎಡವಟ್ಟಿಗೆ ಸಿಲುಕಿದ್ದಾರೆ.
ಬೆಂಗಳೂರು ವಿವಿಯು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಹಳೇ ಮತ್ತು ಹೊಸ ಪಠ್ಯಕ್ರಮದ ಪದವಿ ವಿದ್ಯಾರ್ಥಿಗಳಿಗೆ ಒಂದೇ ಬಾರಿಗೆ ಪರೀಕ್ಷೆ ಆಯೋಜಿಸಿತ್ತು. ಈ ವೇಳೆ ಹಳೇ ವಿದ್ಯಾರ್ಥಿಗಳು ಮತ್ತು ಹೊಸ ವಿದ್ಯಾರ್ಥಿಗಳು ಬರೆಯಬೇಕಾದ ಪ್ರಶ್ನೆಪತ್ರಿಕೆಯ ಶ್ರೇಣಿಯನ್ನೂ ಸ್ಪಷ್ಟವಾಗಿ ತಿಳಿಸಿತ್ತು.
ಇದನ್ನೂ ಓದಿ:ರಾಜ್ಯದ ಜಿಲ್ಲಾ ಉಸ್ತುವಾರಿಯಲ್ಲಿ ಹಠಾತ್ ಬದಲಾವಣೆ: ನಿಮ್ಮ ಜಿಲ್ಲೆಗೆ ಯಾವ ಸಚಿವರು? ಇಲ್ಲಿದೆ ನೋಡಿ ಪಟ್ಟಿ…
ಆದರೆ, ಹೊಸ ವಿದ್ಯಾರ್ಥಿಗಳು ಹಳೇ ವಿದ್ಯಾರ್ಥಿಗಳಿಗೆ ನಿಗದಿ ಪಡಿಸಿದ್ದ 100 ಅಂಕಗಳ ಪ್ರಶ್ನೆಪತ್ರಿಕೆಯನ್ನು ಆಯ್ಕೆ ಮಾಡಿದ್ದಾರೆ. ಈ ವೇಳೆ ಸೂಚನೆಗಳನ್ನು ಓದಿಲ್ಲ. ಮೌಲ್ಯಮಾಪನದಲ್ಲಿ ಒಎಂಆರ್ ಶೀಟುಗಳನ್ನು ಕಂಪ್ಯೂಟರ್ ಮೂಲಕ ಡಿಜಿಟಲ್ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದ್ದು, ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದ ಶ್ರೇಣಿಯನ್ನು ಅದು ಸ್ಕ್ಯಾನ್​ ಮಾಡಿದೆ. ಅದೇ ರೀತಿ ವಿವಿಯ ಸಿಬ್ಬಂದಿ ಸಹ ಅಂಕಗಳನ್ನು ನಮೂದಿಸಿದ್ದಾರೆ. ಮತ್ತೊಂದೆಡೆ, ಈ ವಿದ್ಯಾರ್ಥಿಗಳು ನಮ್ಮದು ತಪ್ಪಿಲ್ಲ. ಎಲ್ಲವೂ ವಿಶ್ವವಿದ್ಯಾಲಯದ್ದೇ ತಪ್ಪು ಎಂದು ಬಿಂಬಿಸಿರುವುದಾಗಿ ತಿಳಿದು ಬಂದಿದೆ.
ವಿದ್ಯಾರ್ಥಿಗಳು ಮಾಡಿದ ತಪ್ಪನ್ನು ವಿವಿಯ ಮೇಲೆ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಹಳೇ ಮತ್ತು ಹೊಸ ಸ್ಕೀಂ ನೋಡಿಲ್ಲ. ಈ ರೀತಿಯ ಉತ್ತರ ಪತ್ರಿಕೆಗಳನ್ನು ಹುಡುಕಿ ತಕ್ಷಣ ಸರಿಪಡಿಸಲು ಸೂಚಿಸಲಾಗಿದೆ.|ಡಾ.ಜೆ.ಟಿ. ದೇವರಾಜ್ಕುಲಸಚಿವ (ಮೌಲ್ಯಮಾಪನ), ಬೆಂವಿವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
