ಬೆಂಗಳೂರು:ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಸಹವಾಸ ಬಯಸಿದ್ದ 24 ವರ್ಷದ ವಿದ್ಯಾರ್ಥಿಯಿಂದ ಹಂತ ಹಂತವಾಗಿ 38 ಸಾವಿರ ರೂ. ವಸೂಲಿ ಮಾಡಿ ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ.
ಬಳ್ಳಾರಿ ರಸ್ತೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಓದುತ್ತಿರುವ 24 ವರ್ಷದ ಯುವಕ ವಂಚನೆಗೆ ಒಳಗಾದವ. ಮೇ 13ರಂದು ವೆಬ್‌ಸೈಟ್‌ವೊಂದರಲ್ಲಿ ಯುವತಿಯ ಸಹವಾಸ ಬಯಸಿ ಸಂದೇಶ ಮತ್ತು ಮೊಬೈಲ್​ಫೋನ್​ ನಂಬರ್ ಅಪ್‌ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಅಪರಿಚಿತ ಮಹಿಳೆ, ವಿದ್ಯಾರ್ಥಿ ಮೊಬೈಲ್ ಫೋನ್​ ನಂಬರ್‌ಗೆ ಕರೆ ಮಾಡಿ ‘ನನಗೆ ಇಷ್ಟವಿದೆ. ನಾನು ನಿನ್ನ ಹತ್ತಿರ ಬರುತ್ತೇನೆ’ ಎಂದು ಹೇಳಿ ಮುಂಗಡವಾಗಿ ಗೂಗಲ್ ಪೇನಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾಳೆ.
ಸ್ವಲ್ಪ ದಿನ ಬಿಟ್ಟು ಮತ್ತೆ ಬೇರೊಂದು ಕಾರಣ ಹೇಳಿ ಮತ್ತೆ ಹಣ ಪಡೆದುಕೊಂಡಿದ್ದಾಳೆ. ಇದೇ ರೀತಿ ಹಂತ ಹಂತವಾಗಿ 38 ಸಾವಿರ ರೂ. ವರ್ಗಾವಣೆ ಮಾಡಿಕೊಂಡು ಮತ್ತಷ್ಟು ಹಣಕ್ಕೆ ಬೇಡಿಕೆ ಒಡ್ಡಿದ್ದಳು. ಕೊನೆಗೆ ಯುವತಿ ಮೋಸ ಮಾಡುತ್ತಿರುವುದು ಗೊತ್ತಾಗಿ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ತಿಳಿಸಿದ್ದಾರೆ.
ದೇಶದ ಮೊದಲ ವೈದ್ಯೆಗೆ ಗೂಗಲ್​ನಿಂದ ಡೂಡಲ್​ ನಮನ

ಸಂಗೀತ ನಿರ್ದೇಶಕ ಡಾ.ಕಿರಣ್​ ತೋಟಂಬೈಲ್​ ಮೇಲೆ ರಾಡ್​ನಿಂದ ಹಲ್ಲೆ, ತಲೆಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 1 =
Remember me
