ಮಂಡ್ಯ:ವಿದ್ಯಾರ್ಥಿಯೊಬ್ಬ ಕಾವೇರಿ ನದಿಗೆ ಹಾರಿ ಕೊಚ್ಚಿಕೊಂಡು ಹೋಗಿದ್ದು, ಆತನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿನ ಕೆಆರ್​ಎಸ್ ಜಲಾಶಯ ನೋಡಲು ಬಂದಿದ್ದಾಗ ಇಂಥದ್ದೊಂದು ದುರಂತ ಪ್ರಕರಣ ನಡೆದಿದೆ.
ಮೈಸೂರಿನ ಪಡುವಾರಹಳ್ಳಿ ಬಡಾವಣೆಯ ಸೃಜನ್ (20) ನದಿಗೆ ಹಾರಿದ ವಿದ್ಯಾರ್ಥಿ. ಈತ ಇಂದು ಸ್ನೇಹಿತರೊಂದಿಗೆ ಕೆಆರ್​ಎಸ್​ ಜಲಾಶಯ ಮತ್ತು ಕಾವೇರಿ ನದಿಯನ್ನು ನೋಡುವ ಸಲುವಾಗಿ ಬಂದಿದ್ದ.
ಕೆಆರ್​ಎಸ್​ ಗೇಟ್​ನಿಂದ ಸುಮಾರು 150 ಮೀಟರ್ ದೂರದಲ್ಲಿ ನಿಂತು ನೋಡುತ್ತಿದ್ದ ಈತ ಕಾವೇರಿ ನದಿಗೆ ಧುಮುಕಿದ್ದಾನೆ. ಭೋರ್ಗರೆಯುತ್ತಿರುವ ನದಿಯ ಹರಿವಿನ ರಭಸಕ್ಕೆ ಈತ ಕೊಚ್ಚಿಕೊಂಡು ಹೋಗಿದ್ದಾನೆ.
ಸ್ನೇಹಿತರು ಈ ಕುರಿತು ಆತನ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದು, ಇನ್ನೂ ಆತನ ಪತ್ತೆಯಾಗಿಲ್ಲ. ನಾಳೆ ಸೃಜನ್​ಗಾಗಿ ಶೋಧ ಕಾರ್ಯ ನಡೆಯಲಿದೆ. ಕೆಆರ್​ಎಸ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆತ ಯಾಕೆ ಹಾರಿದ ಎಂಬುದು ಇನ್ನೂ ನಿಗೂಢವಾಗಿದೆ.
https://www.vijayavani.net/actor-satish-had-meals-with-food-delivery-boys-and-assured-free-tickets-for-movie/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
