ವಿಜಯಪುರ:ಕಾಲೇಜಿಗೆ ಹೋದ ಯುವತಿ ಮರಳಿ ಮನೆ ಬರದ ಹಿನ್ನೆಲೆ ಅಪಹರಣದ ಶಂಕೆ ವ್ಯಕ್ತಪಡಿಸಿರುವ ಪಾಲಕರು ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇಲ್ಲಿನ ಡಯಟ್ ಕಾಲೇಜ್ ಹತ್ತಿರದ ಶಾಂತಿ ನಗರದ ನಿವಾಸಿ ಹಾಗೂ ಸರ್ಕಾರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜಶೇಖರ ಧರ್ಮಣ್ಣ ಬೆನಕನಳ್ಳಿ ಇವರ 17 ವರ್ಷದ ಪುತ್ರಿ ಕಾಣೆಯಾಗಿದ್ದಾರೆ. ಕಾಲೇಜಿನ ಬಸ್ ಚಾಲಕನೇ ಈ ಕೃತ್ಯ ಎಸಗಿರುವ ಶಂಕೆ ಇದ್ದು ಈ ಬಗ್ಗೆ ತನಿಖೆ ನಡೆಸಿ ಮಗಳನ್ನು ಹುಡುಕಿಕೊಡುವಂತೆ ಪಾಲಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಮನೆ ಬಳಿ ನಾಗರಹಾವುಗಳ ರಾಶಿಯೇ ಪ್ರತ್ಯಕ್ಷ!; 25ಕ್ಕೂ ಹೆಚ್ಚು ಸರ್ಪಗಳನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞ
ಘಟನೆ ವಿವರ:ಇಟ್ಟಂಗಿಹಾಳ ಗ್ರಾಮ ಸರಹದ್ದಿನ ತುಂಗಳ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಜಶೇಖರ ಅವರ ಪುತ್ರಿ, ಶಾಲಾ ಬಸ್‌ನಲ್ಲಿ ಸಂಚರಿಸುತ್ತಿದ್ದಳು. ಪ್ರತಿ ದಿನ ಮಧುವನ ಕ್ರಾಸ್ ಹತ್ತಿರ ಬಸ್ ಬರುತ್ತಿದ್ದು ಅಲ್ಲಿಂದಲೇ ಸುಷ್ಮಾ ಕಾಲೇಜಿಗೆ ತೆರಳುವುದು ಮತ್ತು ವಾಪಸ್ ಅದೇ ಸ್ಥಳಕ್ಕೆ ಬಂದಿಳಿಯುವುದು ಮಾಡುತ್ತಿದ್ದಳು.
ಇದನ್ನೂ ಓದಿ:ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!
ಜೂ. 7ರಂದು ಬೆಳಗ್ಗೆ 7.40ರ ಸುಮಾರಿಗೆ ರಾಜಶೇಖರ ಮಗಳನ್ನು ಮಧುವನ ಕ್ರಾಸ್ ಹತ್ತಿರ ಬಿಟ್ಟು ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದಾರೆ. ಸಂಜೆ 6.10ರ ಸುಮಾರಿಗೆ ಅದೇ ಮಧುವನ ಕ್ರಾಸ್ ಹತ್ತಿರ ಮಗಳ ಬರುವಿಕೆಗಾಗಿ ರಾಜಶೇಖದ ಕಾದು ನಿಂತಿದ್ದಾರೆ. ಆದರೆ, ಮಗಳು ಬಾರದ ಹಿನ್ನೆಲೆ ಮನೆಗೆ ಹೋಗಿ ವಿಚಾರಿಸಿದ್ದಾರೆ. ಬಳಿಕ ಮನೆಗೂ ಬಂದಿಲ್ಲದ ಕಾರಣ ಶಾಲೆಗೆ ತೆರಳಿ ವಿಚಾರಿಸಿದ್ದು ಕಾಲೇಜು ಸಿಬ್ಬಂದಿ ಆಕೆ ತರಗತಿಗೆ ಹಾಜರಾಗಿಲ್ಲವೆಂದು ತಿಳಿಸಿದ್ದಾರೆ.
ಅದೇ ಚಿಂತೆಯಲ್ಲಿರಬೇಕಾದರೆ ರಾಜಶೇಖರನ ಪರಿಚಯಸ್ಥರು ಕಾಲೇಜು ಬಸ್ ಚಾಲಕ ಖಾಜೇಸಾಬ ಮಹ್ಮದಸಾಬ್ ಜಕಾತದಾರ ಈತನ ಬೈಕ್ ಮೇಲೆ ನಿಮ್ಮ ಪುತ್ರಿ ಹೋಗುತ್ತಿರುವುದನ್ನು ತಾವು ಗಮನಿಸಿದ್ದಾಗಿ ತಿಳಿಸಿದ್ದಾರೆ. ಆತನ ಭೇಟಿಗೆ ಕಾಲೇಜಿಗೆ ತೆರಳಿ ವಿಚಾರಿಸಿದರೆ ಅಲ್ಲೂ ಆತ ಬಂದಿರಲಿಲ್ಲ. ಮೊಬೈಲ್​ಫೋನ್​ ಕೂಡ ಸ್ವಿಚ್ಡ್​ ಆಫ್ ಆಗಿತ್ತು. ಹೀಗಾಗಿ ರಾಜಶೇಖರ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.
ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

ಭ್ರಷ್ಟರಿಗೆ ‘ಕರೊನಾ ಶಾಕ್’?: ಶೀಘ್ರವೇ ಕೋವಿಡ್​ ಅವಧಿಯ ಟೆಂಡರ್​ಗಳ ಮರು ಪರಿಶೀಲನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 18 =
Remember me
