ಆನೇಕಲ್:ಜನ್ಮದಿನದ ಸಂಭ್ರಮದ ಸಲುವಾಗಿ ಸ್ನೇಹಿತರೆಲ್ಲ ಒಂದೆಡೆ ಸೇರಿದ್ದರೂ ಕೊನೆಗೆ ಅದು ಸಾವಲ್ಲಿ ಅಂತ್ಯವಾಗಿದೆ. ಮೋಜು-ಮಸ್ತಿಯ ಸಂದರ್ಭ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಆನೇಕಲ್​ನಲ್ಲಿ ಈ ಪ್ರಕರಣ ನಡೆದಿದೆ.
ಬಿಟಿಎಮ್ ಬಡಾವಣೆಯ ದೀಪಕ್ ಕುಮಾರ್ (17) ಸಾವಿಗೀಡಾದ ವಿದ್ಯಾರ್ಥಿ. ಈತ ಜಯನಗರದ ಎನ್​ಎಂಕೆಆರ್​ವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಈತ ತನ್ನ ಸ್ನೇಹಿತನ ಬರ್ತ್​ಡೇ ಸಲುವಾಗಿ ಇತರ ಸ್ನೇಹಿತರೊಂದಿಗೆ ಬನ್ನೇರುಘಟ್ಟದ ಟಿ.ಕೆ.ಫಾಲ್ಸ್​ಗೆ ಬಂದಿದ್ದ.
ಕಾಲೇಜಿಗೆ ರಜೆ ಹಾಕಿ ಸುಮಾರು 15 ಮಂದಿ ಸ್ನೇಹಿತರು ಬನ್ನೇರುಘಟ್ಟದ ಟಿ.ಕೆ. ಫಾಲ್ಸ್​ಗೆ ಬಂದಿದ್ದರು. ಈ ವೇಳೆ ನೀರಿನಲ್ಲಿ ಮೋಜು-ಮಸ್ತಿಗೆ ಇಳಿದಿದ್ದಾಗ ದೀಪಕ್ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಬನ್ನೇರುಘಟ್ಟ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಶವವನ್ನು ಹೊರತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 15 =
Remember me
