ಹಾವೇರಿ:ಕಾಲೇಜು ವಿದ್ಯಾರ್ಥಿಗಳನ್ನ ಹತ್ತಿಸಿಕೊಳ್ಳದೆ ಸರ್ಕಾರಿ ಬಸ್ ಹೋಗಿದ್ದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಸ್ಥಳದಲ್ಲೇ 4 ಬಸ್​ಗಳನ್ನ ತಡೆದು ಪ್ರತಿಭಟನೆಗೆ ಕುಳಿತ ಘಟನೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಶಾಲಾ-ಕಾಲೇಜುಗಳಿಗೆ ಹೋಗುವ ಬಹುತೇಕ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಾರಿಗೆ ಸೌಲಭ್ಯ ಸಿಗದೆ ಕಿರಿಕಿರಿ ಅನುಭವಿಸೋದು ತಪ್ಪಿದ್ದಲ್ಲ. ಇಂತಹದ್ದೇ ಘಟನೆ ಬೊಮ್ಮನಹಳ್ಳಿಯಲ್ಲೂ ಸಂಭವಿಸಿದೆ. ಕಾಲೇಜಿಗೆ ಹೋಗಲೆಂದು ಬಂದ ಪಿಯುಸಿ ವಿದ್ಯಾರ್ಥಿಗಳನ್ನು ಬಸ್​ನವರು ಹತ್ತಿಸಿಕೊಂಡಿಲ್ಲ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗೊಕೆ ಆಗಿಲ್ಲ. ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್​ ನಿಲ್ದಾಣದಲ್ಲೇ ತಾಡಪತ್ರೆ ಹಾಸಿಕೊಂಡು ಪ್ರತಿಭಟನೆಗೆ ಕುಳಿತರು. ಸ್ಥಳಕ್ಕೆ ಹಾನಗಲ್ ಡಿಪೋ ಮ್ಯಾನೇಜರ್ ಬರಬೇಕೆಂದು ಪಟ್ಟು ಹಿಡಿದಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದರು.
ಕಡ್ಡಾಯ ಬಸ್‌ ನಿಲುಗಡೆ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ತೆರಳುತ್ತಿದ್ದ ಸರ್ಕಾರಿ ಬಸ್​ವೊಂದನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿದ್ದ ಶಿಕ್ಷಣ ಸಚಿವರು ಚಾಲಕ ಮತ್ತು ನಿರ್ವಾಹಕರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ಇತ್ತೀಚಿಗೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಐ.ಕೆ.ಕಾಲನಿಯಲ್ಲಿ ನಡೆದಿತ್ತು. ಇನ್ಮುಂದೆ ಬಸ್ ನಿಲುಗಡೆ ಸ್ಥಳದಲ್ಲಿ ಬಸ್​​ ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡೇ ಹೋಗಬೇಕು. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದರು. ಇಷ್ಟಾದರೂ ವಿದ್ಯಾರ್ಥಿಗಳನ್ನು ಬಸ್​ಗೆ ಹತ್ತಿಸಿಕೊಳ್ಳದೆ ಹೋಗುತ್ತಿರುವ ಪ್ರಕರಣ ಕಡಿಮೆಯೇನು ಆಗ್ತುತ್ತಿಲ್ಲ
ಮಕ್ಕಳನ್ನು ಹತ್ತಿಸಿಕೊಳ್ಳದೆ ಹೋದ ಚಾಲಕ, ಬಸ್​ ಅಡ್ಡಗಟ್ಟಿ ರಸ್ತೆಯಲ್ಲೇ ಶಿಕ್ಷಣ ಸಚಿವರಿಂದ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆ!

ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

ಹೆಣ್ಣೇ ಕೊಡಲ್ಲಾ ಅಂತಾರ್ರಿ… ಏನಾದ್ರೊಂದು ಯೋಜನೆ ತಂದಾದ್ರೂ ನನ್ನಂಥವ್ರಿಗೆ ಮದ್ವೆ ಮಾಡಿಸ್ರಿ ಸಾಹೇಬ್ರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − five =
Remember me
