ಬೆಂಗಳೂರು:ಇಲ್ಲೊಂದು ಕಾಲೇಜಿನಲ್ಲೇ ವಿದ್ಯಾರ್ಥಿ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ. ಈ ಭೀಕರ ಘಟನೆ ನಡೆದದ್ದು ಬಾಗಲೂರು ಠಾಣಾ ವ್ಯಾಪ್ತಿಯ ರೇವಾ ಕಾಲೇಜಿನಲ್ಲಿ.
ಕಾಲೇಜಿನಲ್ಲಿಯೇ ವಿದ್ಯಾರ್ಥಿಯ ಭೀಕರ ಕೊಲೆ ನಡೆದದ್ದು ಫೆಸ್ಟ್​ ಒಂದರಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಜಗಳದಿಂದಾಗಿ. ಈ ಗಲಾಟೆಯಲ್ಲಿ ಓರ್ವ ಕಾಲೇಜು ವಿದ್ಯಾರ್ಥಿ ಹತ್ಯೆಯಾಗಿ ಹೋಗಿದ್ದಾನೆ.

ನಿನ್ನೆ ರಾತ್ರಿ ನಡೆದಿರುವ ಘಟನೆ ಈ ಘಟನೆಯಲ್ಲಿ ಗುಜರಾತ್ ಮೂಲದ ಭಾಸ್ಕರ್ ಜೆಟ್ಟಿ (22) ಕೊಲೆಯಾಗಿದ್ದಾನೆ. ಈತ ನಗರದ ಖಾಸಗಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ.
ಕಾಲೇಜು ಫೆಸ್ಟ್ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು. ಈ ವೇಳೆ ಭಾಸ್ಕರ್​ಗೆ ಚಾಕುವಿನಿಂದ ಇನ್ನೊಂದು ಗುಂಪು ಇರಿದಿದೆ. ಚಾಕು ಇರಿತದ ಭೀಕರತೆಗೆ ಸ್ಥಳದಲ್ಲೇ ವಿದ್ಯಾರ್ಥಿ ಭಾಸ್ಕರ್ ಜೆಟ್ಟಿ ಸಾವನ್ನಪ್ಪಿದ್ದಾನೆ. ಸದ್ಯ ಬಾಗಲೂರು ಪೊಲೀಸರು ಕಾಲೇಜು ಸಿಸಿಟಿವಿ ಪರಿಶೀಲಿಸುತ್ತಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 15 =
Remember me
