ಮಂಡ್ಯ:ಸರಿಯಾಗಿ ತರಗತಿಗೆ ಹಾಜರಾಗುತ್ತಿಲ್ಲ ಎಂದು ಪಾಲಕರಿಗೆ ತಿಳಿಸಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಯೊಬ್ಬ ಉಪನ್ಯಾಸಕನಿಗೆ ಲಾಂಗ್​ ತೋರಿಸಿ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ಸಕ್ಕರೆ ನಾನು ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ತರಗತಿಗೆ ನಿರಂತರವಾಗಿ ಗೈರಾಗುತ್ತಿದ್ದ ಬಗ್ಗೆ ಉಪನ್ಯಾಸಕ, ವಿದ್ಯಾರ್ಥಿಯ ಪಾಲಕರಿಗೆ ಮಾಹಿತಿ ನೀಡಿ, ಬುದ್ಧಿವಾದ ಹೇಳುವಂತೆ ಸಲಹೆ ನೀಡಿದ್ದರು. ಬಳಿಕ ಪಾಲಕರು ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ಮಹಾರಾಷ್ಟ್ರ ಹಳ್ಳಿಯಲ್ಲಿ ಚಿರತೆ ಓಡಾಟ : ಗಡಿಗ್ರಾಮಗಳ ಜನತೆ ಅಲರ್ಟ್ ಆಗಿರಲು ಸೂಚನೆ
ಇದರಿಂದ ಆಕ್ರೋಶಗೊಂಡು ಕಾಲೇಜಿಗೆ ಲಾಂಗ್ ತಂದಿದ್ದ ವಿದ್ಯಾರ್ಥಿ, ಲ್ಯಾಬ್​ನಲ್ಲಿದ್ದ ಉಪನ್ಯಾಸಕನಿಗೆ ಲಾಂಗ್ ತೋರಿಸಿ ಅವಾಜ್ ಹಾಕಿದ್ದಾನೆ. ಇದರಿಂದ ಉಪನ್ಯಾಸಕ ಸಹ ಒಂದು ಕ್ಷಣ ಗಾಬರಿಗೆ ಒಳಗಾದರು. ವಿದ್ಯಾರ್ಥಿಯನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೂ ವಿದ್ಯಾರ್ಥಿ, ಉಪನ್ಯಾಸಕನಿಗೆ ನಿಂದಿಸಿ, ಬೆದರಿಕೆ ಹಾಕಿದ್ದಾನೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿದ್ದು, ವಿದ್ಯಾರ್ಥಿಯ ವರ್ತನೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ, ತಪ್ಪೊಪ್ಪಿಗೆ ಬರೆಸಿಕೊಂಡು ಇನ್ಮುಂದೆ ಈ ರೀತಿ ಮಾಡದಂತೆ ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಅಪ್ರಾಪ್ತನಾದ ಹಿನ್ನೆಲೆಯಲ್ಲಿ ಬಂಧಿಸದೇ ಬುದ್ಧಿ ಹೇಳಿ ಬಿಟ್ಟು ಕಳುಹಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಹೆಲ್ಮೆಟ್​ ಒಳಗಿದ್ದ ವಿಷಕಾರಿ ಹಾವು ಕಡಿತ: ಸಾವಿನ ಹೊಸ್ತಿಲಲ್ಲಿದ್ದ ಯುವಕ ಬದುಕಿ ಬಂದಿದ್ದೇ ರೋಚಕ!

ಕಿಡ್ನಿಗೆ ಯಾವುದೇ ಸಮಸ್ಯೆ ಬರಬಾರದು ಅಂದ್ರೆ ನಿಮ್ಮ ಅಡುಗೆಯಲ್ಲಿ ಈ ಎಣ್ಣೆಯನ್ನು ತಪ್ಪದೇ ಬಳಸಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 11 =
Remember me
