ಬೆಂಗಳೂರು:ಕರೊನಾ ಕಾರಣದಿಂದ ಗೈರು ಹಾಜರಾದವರಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವುದು ಹಾಗೂ ಕೇಂದ್ರ ಬದಲಾವಣೆ ಮಾಡಿದ್ದರೂ ಮೂಲ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಸೇರಿ ಪಿಯು ಇಲಾಖೆ ಸಾಕಷ್ಟು ವಿದ್ಯಾರ್ಥಿ ಸ್ನೇಹಿ ಕ್ರಮ ತೆಗೆದುಕೊಂಡಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಬಾಕಿ ಉಳಿದಿದ್ದ ಆಂಗ್ಲ ಭಾಷಾ ಪರೀಕ್ಷೆ ಜೂ.18ರಂದು ನಡೆಸುತ್ತಿದೆ. 5.95 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದಕ್ಕಾಗಿ 1016 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದ್ದು, 430 ತಾಲೂಕು ಕೇಂದ್ರ ಹಾಗೂ 328 ಹೋಬಳಿ ಮಟ್ಟದಲ್ಲಿವೆ. ಇವುಗಳ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯವಿರುವಲ್ಲಿ ಹೆಚ್ಚುವರಿ ಬ್ಲಾಕ್ ನಿರ್ವಿುಸಿ ಪರೀಕ್ಷಾ ಕೇಂದ್ರಗಳನ್ನಾಗಿ ಮಾಡಲಿದೆ.
ಇದನ್ನೂ ಓದಿ;‘ಸೇಲ್ಸ್​ಮನ್​’ ಆಗಲಿಲ್ಲ ಶಿಕ್ಷಕ; ವಜಾಗೊಳಿಸಿದ ಸಂಸ್ಥೆ; ಬಾಳೆಹಣ್ಣು ಮಾರಾಟಕ್ಕಿಳಿದವನ ಕೈಹಿಡಿದ ವಿದ್ಯಾರ್ಥಿಗಳು
ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗೆ ಗೈರಾದರೆ ಅಂಥ ವಿದ್ಯಾರ್ಥಿಗಳಿಗೆ ಮುಂದೆ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಿ ‘ರೆಗ್ಯುಲರ್ ವಿದ್ಯಾರ್ಥಿ’ ಎಂದು ಪರಿಗಣಿಸಲಿದೆ. ಅಲ್ಲದೆ, 18,524 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಮುಂದಾಗಿದ್ದಾರೆ. ಇವರಿಗೆ ಕಾರಣಾಂತರಗಳಿಂದ ಬದಲು ಮಾಡಿಕೊಂಡ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಈ ಹಿಂದೆ ಆರಿಸಿಕೊಂಡಿದ್ದ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಹೊಸ ಪರೀಕ್ಷಾ ಕೇಂದ್ರದ ಪ್ರವೇಶಪತ್ರದ ಜತೆ ಈ ಹಿಂದಿನ ಪ್ರವೇಶಪತ್ರ ಕೊಂಡೊಯ್ಯಬೇಕು. ಪ್ರವೇಶಪತ್ರ ತೋರಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆ ವೆಬ್​ಸೈಟ್ http://pue.kar.nic.in/ವೀಕ್ಷಿಸಬಹುದು.
ಇದನ್ನೂ ಓದಿ;ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ
ಪರೀಕ್ಷಾ ಮಂಡಳಿ ಎಡವಟ್ಟು:ತುಮಕೂರು: ಇಲ್ಲಿನ ಮಹೇಶ್ ಪದವಿಪೂರ್ವ ಕಾಲೇಜಿನ ಹತ್ತಾರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆ ಕೇಳದಿದ್ದರೂ ಬೆಂಗಳೂರು, ದಾವಣಗೆರೆಗೆ ಬದಲಾಯಿಸಲಾಗಿದೆ. ಯಾರೂ ಕೇಳಿರದಿದ್ದರೂ ನನ್ನ ಪುತ್ರಿಯ ಪರೀಕ್ಷಾ ಕೇಂದ್ರ ಬೆಂಗಳೂರಿಗೆ ಬದಲಿಸಲಾಗಿದೆ. ಯಾವ ಕೇಂದ್ರದಲ್ಲಾದರೂ ಒಂದು ಕಡೆ ಪರೀಕ್ಷೆ ಬರೆಯಬಹುದೇ ಎಂಬ ಬಗ್ಗೆ ಕಾಲೇಜಿನವರಿಗೂ ಮಾಹಿತಿ ಇಲ್ಲ ಎಂದು ಪಾಲಕ ಸಿ. ಹೊನ್ನಶಾಮಯ್ಯ ಸೇರಿ ಕೆಲವರು ಹೇಳಿದ್ದಾರೆ.
ಪರೀಕ್ಷಾ ಕೇಂದ್ರ ಬದಲಾವಣೆ ಬಯಸದಿದ್ದರೂ ಬದಲಾಗಿರುವ ಬಗ್ಗೆ ಕಚೇರಿಗೆ ಬಂದು ದೂರು ನೀಡಲಿ. ಎಲ್ಲದಕ್ಕೂ ಪರಿಹಾರ ಇರುತ್ತದೆ, ಗಾಬರಿಗೊಳ್ಳುವ ಅಗತ್ಯವಿಲ್ಲ.
| ಲಲಿತಾ ಕುಮಾರಿಡಿಡಿಪಿಯು, ತುಮಕೂರು
https://www.vijayavani.net/murder-convicts-presence-at-wedding-of-kerala-cms-daughter-kicks-up-row/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
