ಬೆಂಗಳೂರು:ಚಂದನವನವನ್ನು ಸುತ್ತಿಕೊಂಡಿರುವ ನಶೆಯ ಬೇರು ಅಗೆದಷ್ಟೂ ವಿಸ್ತಾರವಾಗುತ್ತಿದ್ದು ದಿನಕ್ಕೊಂದು ಅಚ್ಚರಿ ಅನಾವರಣಗೊಳ್ಳುತ್ತಿದೆ. ದೇಶದ ಭವಿಷ್ಯ ರೂಪಿಸಬೇಕಾದ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ನಶೆಯ ಜಾಲದಲ್ಲಿ ಸಿಲುಕಿಸಿ ಹಣ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಜಾಲವನ್ನು ಭೇದಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿ ಬರೋಬ್ಬರಿ 2.10 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಬಂಧಿತರ ಪೈಕಿ ಕೇವಲ್ ಎಂ. ಲೋಹಿತ್ (22) ಮತ್ತು ಮೊಹಮ್ಮದ್ ಹಿಪ್ಜುಲ್ಲಾ (29) ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್​ಗಳಾದರೆ ಇವರ ದಂಧೆಗೆ ಸಹಕರಿಸಿದ್ದ ಅಜೀಜ್ ನಿಯಾಜ್ (33) ಹಾಗೂ ಗುರುಪ್ರಸಾದ್ ಎಂಬ ಇಬ್ಬರು ಡೆಲಿವರಿ ಬಾಯ್ಗಳಾಗಿದ್ದಾರೆ. ಇವರಿಗೂ ಸ್ಯಾಂಡಲ್​ವುಡ್ ಡ್ರಗ್ಸ್ ದಂಧೆಯ ಪ್ರಕರಣಕ್ಕೂ ನಂಟಿರುವುದು ಕಂಡು ಬಂದಿದೆ.
ಲಾಕ್​ಡೌನ್ ವೇಳೆ ಬೆಂಗಳೂರಿನಹಲವು ಗೌಪ್ಯ ಪಾರ್ಟಿಗಳು ನಡೆದಿದ್ದು, ಅಲ್ಲಿಗೆ ಇವರೇ ಡ್ರಗ್ಸ್ ಪೂರೈಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ‘ರ್ಯಾಪಿಡೋ’ ಮತ್ತು ‘ಡೋನ್ಜೋ’ ಕಂಪನಿಯಲ್ಲಿ ಕೊರಿಯರ್ ಬಾಯ್​ಗಳಾಗಿದ್ದ ಅಜೀಜ್ ಮತ್ತು ಗುರುಪ್ರಸಾದ್​ಗೆ ಹೆಚ್ಚಿನ ಹಣದ ಆಮಿಷವೊಡ್ಡಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ತಿಳಿಸಿದ್ದಾರೆ.
ಸ್ಟ್ಯಾಂಪ್, ಪಿಲ್ಸ್, ಚಾರ್ಲಿ!:ಡ್ರಗ್ಸ್ ಪೂರೈಕೆಗೆ ಕೋಡ್​ವರ್ಡ್ ಬಳಸಿಕೊಳ್ಳಲಾಗುತ್ತಿತ್ತು. ಲೋಹಿತ್ ಮತ್ತು ಮೊಹಮ್ಮದ್ ಹಿಪ್ಜುಲ್ಲಾಗೆ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಜಾಲದ ನಂಟು ಇದೆ. ಹಿಪ್ಜುಲ್ಲಾ ಆಯೋಜಿಸಿದ್ದ ಪಾರ್ಟಿಗಳಲ್ಲಿ ಡ್ರಗ್ಸ್​ಗೆ ಬೇಡಿಕೆ ಹೆಚ್ಚಾಗಿತ್ತು. ಡಾರ್ಕ್​ವೆಬ್​ನಲ್ಲಿ ಆರ್ಡರ್ ಕೊಟ್ಟು ತರಿಸಿಕೊಳ್ಳುತ್ತಿದ್ದರು. ಎಲ್​ಎಸ್​ಡಿ ಸ್ಟ್ರಿಪ್ಸ್​ಗೆ ಸ್ಟಾ್ಯಂಪ್, ಎಂಡಿಎಂಎ ಮಾತ್ರೆಗೆ ಪಿಲ್ಸ್, ಕೋಕೇನ್​ಗೆ ಚಾರ್ಲಿ, ಹೀಗೆ ಬೇರೆಬೇರೆ ಡ್ರಗ್ಸ್​ಗಳಿಗೆ ಕೋಡ್​ವರ್ಡ್ ಸಂವಹನ ನಡೆಸಿದ್ದಾರೆ. ಬಿಟ್​ಕಾಯಿನ್ (ಆನ್​ಲೈನ್ ಕರೆನ್ಸಿ) ಮೂಲಕ ವ್ಯವಹರಿಸುತ್ತಿದ್ದರು ಎಂಬುದು ಗೊತ್ತಾಗಿದೆ.
ವೈದ್ಯರ ಮಗ ಪೆಡ್ಲರ್:ಆರೋಪಿ ಕೇವಲ್ ಎಂ. ಲೋಹಿತ್​ನ ತಂದೆ ವೈದ್ಯರಾಗಿದ್ದು, ತಾಯಿ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ. 2016ರಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ. ಲೋಹಿತ್ ಕಾಲೇಜು ದಿನಗಳಲ್ಲಿಯೇ ಮಾದಕ ವ್ಯಸನ ಅಂಟಿಸಿಕೊಂಡಿದ್ದ. ಬೆಂಗಳೂರು ಹಾಗೂ ಗೋವಾದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗಳಲ್ಲಿ ಪಾಲ್ಗೊಂಡು ಮೋಜು ಮಾಡುತ್ತಿದ್ದ. ಈ ವೇಳೆ ಮೊಹಮ್ಮದ್ ಹಿಫ್ಜುಲ್ಲಾ ಸೇರಿದಂತೆ ಹಲವು ಡ್ರಗ್ ಪೆಡ್ಲರ್​ಗಳ ಪರಿಚಯವಾಗಿತ್ತು. ಪಾರ್ಟಿ ಮಾಡಲು ಹಣವಿಲ್ಲದಿದ್ದಾಗ, ಪೆಡ್ಲರ್​ಗಳಿಂದ ಡ್ರಗ್ಸ್ ಖರೀದಿಸಿ ಪಾರ್ಟಿಗಳಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ. ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್​ಗಳ ಮುಖಾಂತರ ಡಾರ್ಕ್​ವೆಬ್ ಬಳಸುವುದನ್ನು ಕಲಿತಿದ್ದ. ಪುತ್ರನ ಚಟುವಟಿಕೆಗಳ ಬಗ್ಗೆ ವೈದ್ಯ ತಂದೆಗೆ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಯಾಂಡಲ್​ವುಡ್​ಗೆ ಲಿಂಕ್:ಮೊಹಮ್ಮದ್ ಹಿಪ್ಜುಲ್ಲಾ, ಈಗಾಗಲೇ ಸ್ಯಾಂಡಲ್​ವುಡ್ ಡ್ರಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ರಾಜಸ್ಥಾನ ಮೂಲದ ವೈಭವ್ ಜೈನ್ ಸಹಚರ. ಈತ ಕೆಲಸ ಮಾಡುತ್ತಿದ್ದ ‘ಮ್ಯಾಚ್​ಲೆಸ್ ಪ್ರೊಮೋಸ್’ ಎಂಬ ಕಂಪನಿ ವೈಭವ್ ಜೈನ್ ಮಾಲೀಕತ್ವದ್ದಾಗಿದೆ. ಡ್ರಗ್ಸ್ ದಂಧೆ ಸಂಬಂಧ ಕಾಟನ್​ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ 5ನೇ ಆರೋಪಿಯಾಗಿರುವ ವೈಭವ್ ಜೈನ್ ಸೂಚನೆಯಂತೆ ಮಾದಕ ವಸ್ತುವನ್ನು ಸಿನಿಮಾ ಕಲಾವಿದರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ.
ಟೆಲಿಗ್ರಾಂನಲ್ಲಿ ಆರ್ಡರ್!:ವಾಟ್ಸ್​ಆಪ್ ಮತ್ತು ಟೆಲಿಗ್ರಾಂ ಮೂಲಕ ಡ್ರಗ್ಸ್​ಗೆ ಆರ್ಡರ್ ಬರುತ್ತಿತ್ತು. ಅದನ್ನು ಕೊರಿಯರ್ ಬಾಯ್ಗಳಿಂದ ನಿರ್ದಿಷ್ಟ ಜಾಗಕ್ಕೆ ಕಳುಹಿಸುತ್ತಿದ್ದರು. ಸಾಮಾನ್ಯವಾಗಿ ಒಂದು ಕೊರಿಯರ್ ಪಾರ್ಸೆಲ್​ಗೆ -ಠಿ;40 ಶುಲ್ಕವಾಗುತ್ತದೆ. ಆದರೆ, ಡ್ರಗ್ಸ್ ಕೊಟ್ಟು ಬರಲು ಡೆಲಿವರಿ ಬಾಯ್ಗಳಿಗೆ -ಠಿ;500 ನೀಡುತ್ತಿದ್ದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
VIDEO: ಗಾಂಜಾ ಬೆಳೆಯೋದಲ್ಲ…., ಇಸ್ರೇಲ್​ನಲ್ಲಿ ಸುರಿಯಿತು ‘ಗಾಂಜಾ ಮಳೆ’…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 11 =
Remember me
