ವಿಜಯನಗರ:ಕರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್​ಡೌನ್​ನಿಂದ ಅದೆಷ್ಟೋ ಮಂದಿ ಕೆಲಸವಿಲ್ಲದೆ, ಖರ್ಚಿಗೂ ಕಾಸಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿರುವಾಗ ಇಲ್ಲೊಂದಷ್ಟು ಮಕ್ಕಳು ಅಂಥವರಿಗೆ ಸಹಾಯ ಮಾಡುವ ಮೂಲಕ ದೊಡ್ಡವರಿಗೂ ಸ್ಫೂರ್ತಿ ಆಗಬಹುದಾದಂಥ ಕೆಲಸ ಮಾಡಿದ್ದಾರೆ.
ಪ್ರಣವ್, ಅಮೀರ್, ಅಕುಲ್, ಭರತ್ ಸಿಂಗ್ ಎಂಬ ಈ ಶಾಲಾ ಮಕ್ಕಳು ತಂತಮ್ಮ ಪಾಕೆಟ್​ ಮನಿಯನ್ನೇ ಒಗ್ಗೂಡಿಸಿ ಅದರಲ್ಲೇ ದಿನಸಿ ಪದಾರ್ಥ, ಅಗತ್ಯ ವಸ್ತುಗಳನ್ನು ತಂದಿದ್ದಾರೆ. ಮಾತ್ರವಲ್ಲ, ಬಳಿಕ ತಾವೇ ಅಡುಗೆ ಮಾಡಿ ಆಹಾರದ ಪೊಟ್ಟಣ ಕಟ್ಟಿದ್ದಾರೆ. ಸುಮಾರು 5 ಕೆ.ಜಿ. ಅಕ್ಕಿಯ ಚಿತ್ರಾನ್ನ ಮಾಡಿರುವ ಈ ಮಕ್ಕಳು ಅದನ್ನು ತಮ್ಮ ಊರಿನಲ್ಲಿ ಸಂಕಷ್ಟದಲ್ಲಿ ಇರುವ ಹಲವು ಕುಟುಂಬಗಳಿಗೆ ಹಂಚಿದ್ದಾರೆ. ಅಂದಹಾಗೆ ಇವರೆಲ್ಲ ವಿಜಯನಗರದ ಹಗರಿಬೊಮ್ಮನಹಳ್ಳಿಯ ಶಾಲಾ ವಿದ್ಯಾರ್ಥಿಗಳು.



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eight =
Remember me
