ಬೆಂಗಳೂರು:ಕಾನೂನು ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಗಳಾಗುತ್ತಿದ್ದು, ಇದಕ್ಕೆ ತಕ್ಕಂತೆ ಕಾನೂನು ವಿದ್ಯಾರ್ಥಿಗಳು ವೃತ್ತಿ ಜೀವನದ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಸಿ. ಬಸವರಾಜು ಹೇಳಿದ್ದಾರೆ,
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ಸೌಂದರ್ಯ ಕಾನೂನು ಕಾಲೇಜು ಆಯೋಜಿಸಿದ್ದ ಕಾನೂನು ವೃತ್ತಿಪರರಿಗೆ ಮಾರ್ಗದರ್ಶನ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು, ಕಾನೂನು ವೃತ್ತೀಜಿವನ ವ್ಯಾಪಕವಾಗಿ ವಿಕಸನಗೊಳ್ಳುತ್ತಿದ್ದು, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದನ್ನು ಕಲಿಯಬೇಕು. ಅವಕಾಶಗಳ ಅನ್ವೇಷಣೆಗೆ ಒತ್ತು ನೀಡಬೇಕು. ಆಳವಾದ ಅಧ್ಯಯನ ಇಂದಿನ ಅಗತ್ಯವಾಗಿದ್ದು, ಅವಕಾಶಗಳ ಬಾಗಿಲು ತೆರೆಯುತ್ತಿದ್ದಂತೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಹಿರಿಯ ವಕೀಲ ಬಿ.ಆರ್​.ದೀಪಕ್​ ಮಾತನಾಡಿ, ವೃತ್ತಿಯಲ್ಲಿ ಮುಂದುವರೆಯಲು ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು. ಕಾನೂನು ವಲಯದ ವಿವಿಧ ವೃತ್ತಿ ವಿಧಾನಗಳ ಕುರಿತು ಅರ್ಥಮಾಡಿಕೊಳ್ಳುವುದು ಸೂಕ್ತ ಎಂದರು. ಡಾ. ರಾಮ್​ ಮನೋಹರ ಲೋಹಿಯಾ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಿ..ರಮೇಶ್​ ಮಾತನಾಡಿ, ವಕೀಲ ವೃತ್ತಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು. ವೃತ್ತಿಪರ ನಡವಳಿಕೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಕೋಟಿ ಕೋಟಿ ಕದ್ದವನು ಜೇಬಲ್ಲಿ 1ಲಕ್ಷ ರೂ.ಇಟ್ಟುಕೊಂಡು ಸಿಕ್ಕಿಬಿದ್ದ!
ಮಣಿಪಾಲ್​ ಸ್ಕೂಲ್​ ಆಫ್​ ಲಾದ ಸಹಾಯಕ ಪ್ರಾಧ್ಯಾಪಕ ಪವನ್​ ಮಾತನಾಡಿ, ಸಾಂಪ್ರದಾಯಿಕ ಕಾನೂನು ವೃತ್ತಿಗಳಾದ ವ್ಯಾಜ್ಯ, ಕಾನೂನು ಸಂಸ್ಥೆಯ ಅಭ್ಯಾಸ, ಸಹಾಯಕ ಸಾರ್ವಜನಿಕ ಅಭಿಯೋಜಕರು, ನ್ಯಾಯಾಂಗ ಮತ್ತು ಸರ್ಕಾರಿ ವಕೀಲರಂತಹ ಹೆಚ್ಚಿನ ಮೌಲ್ಯಯುತ ವೃತ್ತಿಯ ಆಯಾಮಗಳಿದ್ದು, ವಿಪುಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಸೌಂದರ್ಯ ಎಜುಕೇಶನ್​ ಟ್ರಸ್ಟ್​​​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ್​ ಕುಮಾರ್​, ಪ್ರಭಾರಿ ಪ್ರಾಂಶುಪಾಲ ಹನುಮಂತೇಗೌಡ, ಉಪ ಪ್ರಾಂಶುಪಾಲ ಶ್ವಾಸ್​ ಪುಟ್ಟಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
