ಬೆಂಗಳೂರು:ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್ ಚಾನಲ್ ವತಿಯಿಂದ ಜಯನಗರ 5ನೇ ಬ್ಲಾಕ್‌‌ನಲ್ಲಿರುವ ಶಾಲಿನಿ ಮೈದಾನದಲ್ಲಿ ಆಯೋಜಿಸಿರುವ ಎಜುಕೇಷನ್ ಎಕ್ಸ್‌‌ಪೋ’ದ 2ನೇ ದಿನವಾದ ಭಾನುವಾರ ಜನಸಾಗರವೇ ಹರಿದು ಬರುತ್ತಿದೆ. ಎಕ್ಸ್‌‌ಪೋಗೆ ಇಂದು ತೆರೆ ಬೀಳಲಿದೆ. ವಾರಾಂತ್ಯ ರಜೆ ಇರುವುದರಿಂದ ವಿದ್ಯಾರ್ಥಿಗಳು ಇಂದು ಆಗಮಿಸುವ ಮೂಲಕ ಎಕ್ಸ್‌‌ಪೋವನ್ನು ಸದ್ಬಳಕೆ ಮಾಡಿಕೊಳ್ಳಬಹುದು.

ಮಧ್ಯಾಹ್ನ 12.30ಕ್ಕೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ಆಗಮಿಸಲಿದ್ದಾರೆ. ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ‌ ಜತೆ ಸಂವಾದವೂ ನಡೆಯಲಿದೆ.
ಬೆಳಗ್ಗೆಯಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಮಳಿಗೆಗಳಿಗೆ ಭೇಟಿ ನೀಡಿ ಶಿಕ್ಷಣ ಹಾಗೂ ಕೋರ್ಸ್ ಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯುತ್ತಿದ್ದಾರೆ. ಮೊದಲ ದಿನವೇ ಎಕ್ಸ್‌‌ಪೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

ಪಿಯುಸಿ ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ, ಯಾವ ಕೋರ್ಸ್ ಓದಿದರೆ ಉದ್ಯೋಗ ದೊರೆಯುತ್ತದೆ, ಯಾವ ಕೋರ್ಸ್‌‌ಗೆ ಹೆಚ್ಚು ಬೇಡಿಕೆ ಇದೆ?, ಶುಲ್ಕ ಮತ್ತು ಹಾಸ್ಟೆಲ್, ಮುಂದಿನ ಸವಾಲುಗಳಿಗೆ ಸಿದ್ಧವಾಗುವುದು ಹೇಗೆ? ಎಂಬಿತ್ಯಾದಿ ಮಾಹಿತಿಯು ಎಕ್ಸ್‌‌ಪೋದಲ್ಲಿ ಸಿಗಲಿದೆ. ಅಲ್ಲದೆ, ವೃತ್ತಿ ಶಿಕ್ಣಣ, ಉನ್ನತ ಶಿಕ್ಷಣ ಕುರಿತು ವಿದ್ಯಾರ್ಥಿಗಳಿಗಿರುವ ಗೊಂದಲ ನಿವಾರಣೆಗೆ ಎಕ್ಸ್‌‌ಪೋ ಸಹಕಾರಿಯಾಗಲಿದೆ.

ಎಕ್ಸ್‌‌‌ಪೋದಲ್ಲಿ 50ಕ್ಕೂ ಹೆಚ್ಚು ಪ್ರತಿಷ್ಠಿತ ವಿವಿಗಳು, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳ ಮಳಿಗೆಗಳು ಒಂದೇ ಸೂರಿನಲ್ಲಿದ್ದು, ಕೋರ್ಸ್‌‌ಗಳ ಬಗ್ಗೆ ಗೊಂದಲಗಳಿಗೆ ಪರಿಹಾರ ದೊರೆಯಲಿದೆ. ಈ ಬಾರಿ ಎಕ್ಸ್‌‌ಪೋದಲ್ಲಿ ಮೊದಲ ಬಾರಿ ನವೋದ್ಯಮಕ್ಕೆ ವಿಶೇಷ ವೇದಿಕೆ ಕಲ್ಪಿಸಲಾಗಿದೆ.

ವಿನೂತ ಐಡಿಯಾಗಳನ್ನು ಪ್ರದರ್ಶಿಸುವವರಿಗೆ ಬಹುಮಾನ ಸಿಗಲಿದೆ. ನವೋದ್ಯಮ ಆರಂಭಿಸುವವರಿಗೆ ಇದೊಂದು ಒಳ್ಳೆಯ ಅವಕಾಶ. ವಿದ್ಯಾರ್ಥಿಗಳು ಯಾವುದೇ ಬಿಸಿನೆಸ್ ಐಡಿಯಾವನ್ನು ಎಕ್ಸ್‌‌ಪೋದಲ್ಲಿ ಪ್ರದರ್ಶಿಸಬಹುದು. ‘ರಾಮಯ್ಯ ಎವೊಲ್ಯೂಟ್ ಫೌಂಡೇಶನ್’ ಸಾರ್ಟಪ್ ಆರಂಭಿಸಲು ಒಂದು ಕೋಟಿ ರೂ.ವರೆಗೆ ಸಹಾಯಧನ ನೀಡಲಿದೆ.
ಪೊಲೀಸರು ವಿಚಾರಣೆಗೆ ಕರೆತರುವಾಗ ಮೇಲ್ಸೇತುವೆಯಿಂದ ಹಾರಿ ಸಾಮಾಜಿಕ ಕಾರ್ಯಕರ್ತ ಸಾವು

ಮದುವೆ ಮನೆಯಲ್ಲಿ ಸ್ಮಶಾನ ಮೌನ; ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ವಧು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 11 =
Remember me
