ರಾಯಚೂರು:ಕರೊನಾ ಸೋಂಕಿನ ಅಟ್ಟಹಾಸ ಮಿತಿಮೀರಿದ್ದು, ಸಾವು-ನೋವಿನ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಲೇ ಇವೆ. ಇದೀಗ ಕೋವಿಡ್​ಗೆ ಮಾನ್ವಿಯ ಸಬ್ ರಿಜಿಸ್ಟ್ರಾರ್ ಬಲಿಯಾಗಿದ್ದು, ಈ ಸುದ್ದಿ ಕೇಳಿದ ಮೃತರ ತಾಯಿಯೂ ಆಘಾತಕ್ಕೊಳಗಾಗಿ ಪ್ರಾಣ ಬಿಟ್ಟಿದ್ದಾರೆ.
45 ವರ್ಷದ ಸಬ್ ರಿಜಿಸ್ಟ್ರಾರ್​ಗೆ ಜು.24ರಂದು ಕೋವಿಡ್ ದೃಢಪಟ್ಟಿತ್ತು. ಕೂಡಲೇ ಅವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಉಸಿರಾಟದ ಸಮಸ್ಯೆ ತೀವ್ರವಾಗಿದ್ದರಿಂದ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ನಿನ್ನೆ(ಶುಕ್ರವಾರ) ರಾತ್ರಿ ಚಿಕಿತ್ಸೆ ಫಲಿಸದೆ ಸಬ್​ರಿಜಿಸ್ಟ್ರಾರ್ ಮೃತಪಟ್ಟಿದ್ದಾರೆ.
ಇದನ್ನೂ ಓದಿರಿಕರೊನಾ ಸೋಂಕಿತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ?
ಮಗನ ಸಾವಿನ ಸುದ್ದಿ ಕೇಳಿದ ಸಬ್​ ರಿಜಿಸ್ಟ್ರಾರ್ ತಾಯಿಗೆ ಆಘಾತವಾಗಿದ್ದು, ಅವರೂ ಅಸುನೀಗಿದ್ದಾರೆ. ಮತ್ತೊಂದೆಡೆ ಮೃತ ಸಬ್ ರಿಜಿಸ್ಟ್ರಾರ್​ರ ಅಣ್ಣನಿಗೂ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಹೈದ್ರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ತಾಯಿ ಮತ್ತು ಸಹೋದರ ಮೃತಪಟ್ಟರೂ ಅವರ ಅಂತಿಮ ದರ್ಶನ ಮಾಡುವ ಭಾಗ್ಯ ಸಿಗಲಿಲ್ಲ.
ತಿಥಿ ಕಾರ್ಯ ಮುಗಿದ ನಂತರ ಬಂತು ಶವ, ಕೋವಿಡ್​ ಆಸ್ಪತ್ರೆಯ ಮಹಾ ಯಡವಟ್ಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 5 =
Remember me
